ಪಾಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದ ಇಮ್ರಾನ್ ಖಾನ್ ಪಕ್ಷ; ಸೋಲು ಒಪ್ಪಿಕೊಳ್ಳದ ನವಾಜ್ ಷರೀಫ್

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಿದೆ ಎಂದು ಹೇಳಿಕೊಂಡಿರುವ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ, ಫಲಿತಾಂಶವನ್ನು ರಿಗ್ ಮಾಡಲು ಫಲಿತಾಂಶ...
ಪಾಕ್ ಚುನಾವಣೆಯ ಫಲಿತಾಂಶ
ಪಾಕ್ ಚುನಾವಣೆಯ ಫಲಿತಾಂಶ
Updated on

ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಿದೆ ಎಂದು ಹೇಳಿಕೊಂಡಿರುವ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ, ಫಲಿತಾಂಶವನ್ನು ರಿಗ್ ಮಾಡಲು ಫಲಿತಾಂಶ ವಿಳಂಬಗೊಳಿಸಲಾಗುತ್ತಿದೆ ಎಂದು ಶುಕ್ರವಾರ ಆರೋಪಿಸಿದೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷ, ಪ್ರತಿಸ್ಪರ್ಧಿ ಪಿಎಂಎಲ್-ಎನ್‌ನ ಸರ್ವೋಚ್ಚ ನಾಯಕ ನವಾಜ್ ಷರೀಫ್ ಅವರಿಗೆ ಸೋಲನ್ನು ಒಪ್ಪಿಕೊಳ್ಳುವಂತೆ ಕೇಳಿಕೊಂಡಿದೆ.

ಸೋಲು ಒಪ್ಪಿಕೊಳ್ಳಲು ನಿರಾಕರಿಸಿದ ಪಿಎಂಎಲ್-ಎನ್, ಗುರುವಾರದ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಾನು ಗೆಲ್ಲುವುದಾಗಿ ಹೇಳಿಕೊಂಡಿದೆ.

ಸಾರ್ವತ್ರಿಕ ಚುನಾವಣೆಯ ನಂತರ ಇಂದು ಪಾಕಿಸ್ತಾನದಲ್ಲಿ ಮತಗಳ ಎಣಿಕೆ ನಡೆಯುತ್ತಿದೆ. ಇಂಟರ್ ನೆಟ್ ಸೇವೆ ಸ್ಥಗಿತ ಆಗಿರುವುದರಿಂದ ಸಾಕಷ್ಟು ಸಂವಹನ ಕೊರತೆಯಾಗುತ್ತಿದೆ. ಹೀಗಾಗಿ ಫಲಿತಾಂಶ ವಿಳಂಬವಾಗುತ್ತಿದೆ ಎಂದು ಪಾಕಿಸ್ತಾನ ಒಳಾಡಳಿತ ಇಲಾಖೆ ಹೇಳಿದೆ.

ಚುನಾವಣಾ ಕಣದಲ್ಲಿ ಹತ್ತಾರು ಪಕ್ಷಗಳು ಇದ್ದರೂ ಇಮ್ರಾನ್ ಖಾನ್ ಅವರ ಪಿಟಿಐ ಮತ್ತು ನವಾದ್ ಷರೀಫ್ ಅವರ ಪಿಎಂಎಲ್-ಎನ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಒಟ್ಟು 265 ಸ್ಥಾನಗಳಲ್ಲಿ ಪಿಟಿಐ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ಇಮ್ರಾನ್ ಖಾನ್ ಅವರ ಪಕ್ಷ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಪಾಕಿಸ್ತಾನದಲ್ಲಿ ಮುಂದಿನ ಸರ್ಕಾರ ರಚಿಸಲು ಬಹುಮತಕ್ಕೆ 133 ಸ್ಥಾನಗಳನ್ನು ಗೆಲ್ಲಬೇಕು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com