ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಶವ ಪತ್ತೆ!

ಅಮೇರಿಕಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನ ಶವ ಪತ್ತೆಯಾಗಿದೆ. 
ಅಮೇರಿಕಾದಲ್ಲಿರುವ ಭಾರತೀಯ ವಿದ್ಯಾರ್ಥಿ
ಅಮೇರಿಕಾದಲ್ಲಿರುವ ಭಾರತೀಯ ವಿದ್ಯಾರ್ಥಿ
Updated on

ಚಿಕಾಗೋ: ಅಮೇರಿಕಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನ ಶವ ಪತ್ತೆಯಾಗಿದೆ. 

ತನ್ನ ಮಗ ನಾಪತ್ತೆಯಾಗಿದ್ದನೆಂದು, ಆತನನ್ನು ಹುಡುಕಿಕೊಡಲು ಸಹಾಯ ಮಾಡಬೇಕೆಂದು ಮಹಿಳೆಯೊಬ್ಬರು ಮನವಿ ಮಾಡಿದ 24 ಗಂಟೆಗಳಲ್ಲಿ ಆತನ ಶವ ಪತ್ತೆಯಾಗಿದೆ.

ಟಿಪ್ಪೆಕಾನೋ ಟಿ ಕರೋನರ್ ಕಚೇರಿಯ ಪ್ರಕಾರ, ಭಾನುವಾರದಂದು ಬೆಳಿಗ್ಗೆ 11:30 ರ ಸುಮಾರಿಗೆ ವೆಸ್ಟ್ ಲಫಯೆಟ್ಟೆಯ 500 ಆಲಿಸನ್ ರಸ್ತೆಯಲ್ಲಿ ಮೃತದೇಹ ಪತ್ತೆಯಾಗಿದ್ದಕ್ಕಾಗಿ ಅಧಿಕಾರಿಗಳನ್ನು ಕರೆಸಲಾಯಿತು. ಅಧಿಕಾರಿಗಳು ಮೃತ ವ್ಯಕ್ತಿಯನ್ನು ಪರ್ಡ್ಯೂ ಕಾಲೇಜಿನ ವಿದ್ಯಾರ್ಥಿ ಎಂಬುದನ್ನು ದೃಢಪಡಿಸಿದ್ದಾರೆ.  

ನೀಲ್ ಆಚಾರ್ಯ  ಮೃತ ವಿದ್ಯಾರ್ಥಿಯಾಗಿದ್ದು, ಜಾನ್ ಮಾರ್ಟಿನ್ಸನ್ ಆನರ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಡೇಟಾ ಸೈನ್ಸ್ ಅಧ್ಯಯನ ಮಾಡುತ್ತಿದ್ದರು. 

ಭಾನುವಾರ, ನೀಲ್ ಅವರ ತಾಯಿ ಗೌರಿ ಆಚಾರ್ಯ, ಟ್ವಿಟರ್ ನಲ್ಲಿ ಪೋಸ್ಟ್‌ ಮಾಡಿ, "ನಮ್ಮ ಮಗ ನೀಲ್ ಆಚಾರ್ಯ ನಿನ್ನೆ ಜನವರಿ 28 ರಿಂದ ಕಾಣೆಯಾಗಿದ್ದಾನೆ (12:30 AM EST) ಆತ ಯುಎಸ್‌ನ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ ಎಂಬ ಮಾಹಿತಿ ಹಂಚಿಕೊಂಡಿದ್ದರು.

ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಅವನನ್ನು ಡ್ರಾಪ್ ಮಾಡಿದ ಉಬರ್ ಡ್ರೈವರ್ ಅವನನ್ನು ಕೊನೆಯದಾಗಿ ನೋಡಿದ್ದ.

ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ವಿದ್ಯಾರ್ಥಿಯ ತಾಯಿಯ ಪೋಸ್ಟ್‌ಗೆ ಉತ್ತರಿಸಿ, "ದೂತಾವಾಸ ಪರ್ಡ್ಯೂ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಮತ್ತು ನೀಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕಾನ್ಸುಲೇಟ್ ಎಲ್ಲಾ ಸಂಭಾವ್ಯ ಬೆಂಬಲ ಮತ್ತು ಸಹಾಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. 

ವಿಶ್ವವಿದ್ಯಾಲಯದ ಸ್ವತಂತ್ರ ಮಲ್ಟಿಮೀಡಿಯಾ ಏಜೆನ್ಸಿಯಾದ ಪರ್ಡ್ಯೂ ಎಕ್ಸ್‌ಪೋನೆಂಟ್ ಪ್ರಕಾರ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಕ್ರಿಸ್ ಕ್ಲಿಫ್ಟನ್ ಸೋಮವಾರ ಇಮೇಲ್‌ನಲ್ಲಿ ನೀಲ್ ಆಚಾರ್ಯ ಅವರ ಸಾವಿನ ಕುರಿತು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ, ಮತ್ತೊಂದು ಪ್ರಕರಣದಲ್ಲಿ ಅಮೇರಿಕದ ಜಾರ್ಜಿಯಾದ ಲಿಥೋನಿಯಾದ ಅಂಗಡಿಯೊಂದರಲ್ಲಿ ನಿರಾಶ್ರಿತ ವ್ಯಕ್ತಿಯೊಬ್ಬ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಆದರೆ ಘಟನೆಯ ದಿನಾಂಕವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com