
ನವದೆಹಲಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ (Nithyananda Swami) ಸಾವು ಕುರಿತು ಹಬ್ಬಿರುವ ವದಂತಿಗಳಿಗೆ ಕೈಲಾಸ ಅಧಿಕೃತ ಸ್ಪಷ್ಟನೆ ನೀಡಿದೆ.
ಹೌದು.. ನಿನ್ನೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ (Nithyananda Swami) ಸತ್ತಿದ್ದಾನೆ ಎಂಬ ವರದಿಯೊಂದು ವ್ಯಾಪಕ ವೈರಲ್ ಆಗಿತ್ತು. ನಿತ್ಯಾನಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ.
ಇದೀಗ ಏಪ್ರಿಲ್ 1 ರಂದು ಸಾವನ್ನಪ್ಪಿದ್ದಾನೆ ಎಂದು ವರದಿ ಹಬ್ಬಿಸಲಾಗಿತ್ತು. ಇದಕ್ಕೆ ಇಂಬು ನೀಡುವಂತೆ ಕಳೆದ ಭಾನುವಾರ, ಅವರ ಸೋದರಳಿಯ ಸುಂದರೇಶ್ವರನ್ ಒಂದು ವೀಡಿಯೊವನ್ನು ಬಿಡುಗಡೆ ಮಾಡಿ ಅದರಲ್ಲಿ ಸ್ವಾಮಿ ನಿತ್ಯಾನಂದ ಹಿಂದೂ ಧರ್ಮವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು.
ಶಿವರಾತ್ರಿ ಸತ್ಸಂಗ ಬಳಿಕ ನಿತ್ಯಾನಂದ ಕಣ್ಮರೆ
ಇನ್ನು ಶಿವರಾತ್ರಿ ಸತ್ಸಂಗದ ಸಂದರ್ಭದಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ವಿಡಿಯೋ ವೈರಲ್ ಆಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಭಾಷಣವನ್ನು ಹಠಾತ್ತನೆ ಸ್ಥಗಿತಗೊಳಿಸಲಾಯಿತು. ಅಂದಿನಿಂದ, ಯಾವುದೇ ಸತ್ಸಂಗಗಳು ನಡೆದಿಲ್ಲ, ಇದು ಅವನ ಎಲ್ಲಿದ್ದಾನೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.
ನಿತ್ಯಾನಂದ ಸತ್ತಿಲ್ಲ: ಕೈಲಾಸ ಸ್ಪಷ್ಟನೆ
ಇನ್ನು ಈ ಎಲ್ಲ ವರದಿಗಳಿಗೆ ನಿತ್ಯಾನಂದ ಇರುವ ಕೈಲಾಸ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಸತ್ತಿಲ್ಲ. ಅವರು ಆರೋಗ್ಯವಾಗಿದ್ದಾರೆ. ಶೀಘ್ರದಲ್ಲೇ ಭಕ್ತರ ಮುಂದೆ ಬರಲಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.
ವದಂತಿ ಮೊದಲೇನಲ್ಲ ನಿತ್ಯಾನಂದ ಸಾವಿನ ಬಗ್ಗೆ ವದಂತಿಗಳು ಹಬ್ಬುತ್ತಿರುವುದು ಇದೇ ಮೊದಲಲ್ಲ. 2022 ರ ವರದಿಗಳು ಅವರು ತೀವ್ರ ಮರೆವಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜನರು, ಹೆಸರುಗಳು ಅಥವಾ ಸ್ಥಳಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಸುದ್ದಿಯೂ ಕೇಳಿಬಂದಿತ್ತು. ನಂತರ ನಿತ್ಯಾನಂದ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಈ ವದಂತಿಗಳನ್ನು ತಳ್ಳಿಹಾಕಿದರು ಮತ್ತು ತಾವು ಸತ್ತಿಲ್ಲ ಆದರೆ ಸಮಾಧಿ ಸ್ಥಿತಿಯಲ್ಲಿದ್ದೆ ಇದು ಆಳವಾದ ಧ್ಯಾನ ಎಂದಿದ್ದರು.
ಹಲವಾರು ಪ್ರಕರಣಗಳು
ಅಂದಹಾಗೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ವಿರುದ್ಧ ಕರ್ನಾಟಕ, ತಮಿಳುನಾಡು ಸೇರಿದಂತೆ ಭಾರತದ ದೇಶದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ನಿತ್ಯಾನಂದನ ವಿರುದ್ಧ ಅತ್ಯಾಚಾರ, ಅಪಹರಣ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿವೆ. 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದ. ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಲ್ಲಿದೆ. ವಂಚನೆಗೆ ಸಂಬಂಧಿಸಿದ ಆರೋಪಗಳ ಮೇಲೆ ಫ್ರಾನ್ಸ್‌ನಲ್ಲಿಯೂ ಸಹ ಆತನಿಗಾಗಿ ಬೇಕಾಗಿದ್ದಾನೆ. 2020 ರಲ್ಲಿ ಹಿಂದೂ ಸಾರ್ವಭೌಮ ರಾಷ್ಟ್ರ ‘ಕೈಲಾಸ’ ಸ್ಥಾಪನೆ ಮಾಡಿರುವುದಾಗಿ ಘೋಷಿಸಿದ್ದ.
Advertisement