
ಕೊಲಂಬೊ: ಪ್ರಧಾನಿ ನರೇಂದ್ರ ಮೋದಿಯವರ ಶ್ರೀಲಂಕಾ ಭೇಟಿಯನ್ನು ಗೌರವಿಸುವ ವಿಶೇಷ ಸೂಚನೆಯಾಗಿ ಲಂಕಾ ಸರ್ಕಾರ 11 ಭಾರತೀಯ ಮೀನುಗಾರರನ್ನು ಭಾನುವಾರ ಬಿಡುಗಡೆ ಮಾಡಿದೆ.
ಪಿಟಿಐ ವರದಿಯ ಪ್ರಕಾರ, ಭಾರತೀಯ ಮೀನುಗಾರರ ಬಂಧನದ ಬಗ್ಗೆ ಪ್ರಧಾನಿ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ ಒಂದು ದಿನದ ನಂತರ ಶ್ರೀಲಂಕಾ ಅಧಿಕಾರಿಗಳು 11 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ್ದಾರೆ.
ಸರ್ಕಾರಿ ಮಾಹಿತಿಯ ಪ್ರಕಾರ, ಶ್ರೀಲಂಕಾ 2024 ರಲ್ಲಿ 528 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಶನಿವಾರ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ, "ನಾವು ಮೀನುಗಾರರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈ ವಿಷಯದಲ್ಲಿ ನಾವು ಮಾನವೀಯ ಮನೋಭಾವದೊಂದಿಗೆ ತೊಂದರೆಗೊಳಗಾದ ಮೀನುಗಾರರ ಸಮಸ್ಯೆಯನ್ನು ಪರಿಹರಿಸಲು ಒಪ್ಪಿಕೊಂಡಿದ್ದೇವೆ. ಮೀನುಗಾರರು ಮತ್ತು ಅವರ ದೋಣಿಗಳನ್ನು ತಕ್ಷಣ ಬಿಡುಗಡೆ ಮಾಡುವುದರ ಬಗ್ಗೆಯೂ ನಾವು ಒತ್ತು ನೀಡಿದ್ದೇವೆ" ಎಂದು ಹೇಳಿದ್ದರು.
ಮೋದಿ ಭೇಟಿಯನ್ನು ಗೌರವಿಸಲು ಕನಿಷ್ಠ 11 ಭಾರತೀಯ ಮೀನುಗಾರರನ್ನು ವಿಶೇಷ ಆದ್ಯತೆ ಮೇರೆಗೆ ಬಿಡುಗಡೆ ಮಾಡಲಾಗಿದೆ ವರದಿ ತಿಳಿಸಿದೆ.
Advertisement