
ಕಠ್ಮಂಡು: ಡ್ರಗ್ಸ್ ಕಳ್ಳಸಾಗಣೆ ಆರೋಪದ ಮೇಲೆ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ನೇಪಾಳ ಪೊಲೀಸ್ ಸುದ್ದಿ ಬುಲೆಟಿನ್ ಪ್ರಕಾರ, ಗುರುವಾರ ರಾತ್ರಿ ಕಠ್ಮಂಡು ವಿಮಾನ ನಿಲ್ದಾಣದಿಂದ 10 ಕೆಜಿಗೂ ಹೆಚ್ಚು ಡ್ರಗ್ಸ್ ಸಾಗಿಸುತ್ತಿದ್ದ ಭಾರತೀಯ ಪ್ರಜೆ ಇರ್ಫಾನ್ ಅಹ್ಮದ್ ಕಸಲಿಪರಂಬಿಲ್ ಬಶೀರ್(25)ನನ್ನು ಪೊಲೀಸರು ಬಂಧಿಸಿದ್ದಾರೆ.
ಇರ್ಫಾನ್ ಅಹ್ಮದ್, ಥಾಯ್ ಏರ್‌ವೇಸ್ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಕಠ್ಮಂಡುವಿಗೆ ಆಗಮಿಸಿದ್ದರು.
ಭದ್ರತಾ ಸಿಬ್ಬಂದಿ ಅವರ ಬ್ಯಾಗ್ ಗಳನ್ನು ಪರಿಶೀಲಿಸಿದಾಗ ಮಾದಕ ದ್ರವ್ಯಗಳು ಪತ್ತೆಯಾಗಿದ್ದು, ಇರ್ಫಾನ್ ನನ್ನು ಬಂಧಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ, ಗುರುವಾರ ಮಧ್ಯಾಹ್ನ ವಿಮಾನ ನಿಲ್ದಾಣದಿಂದ 26 ಕೆಜಿಗೂ ಹೆಚ್ಚು ಡ್ರಗ್ಸ್ ಸಾಗಿಸುತ್ತಿದ್ದ ಭಾರತೀಯ ಪ್ರಜೆಗಳಾದ ರಾಮ್ ಕುಮಾರ್(31) ಮತ್ತು ಪದಿನ್ಹೆರ್ ಚಂಡಿಪುರಯ್ ಜೆಎಲ್(35) ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಇಬ್ಬರು ಬ್ಯಾಂಕಾಕ್‌ನಿಂದ ಕಠ್ಮಂಡುವಿಗೆ ಆಗಮಿಸಿದ್ದರು. ರಾಮ್ ಕುಮಾರ್ 11 ಕೆಜಿಗೂ ಹೆಚ್ಚು ಡ್ರಗ್ಸ್ ಸಾಗಿಸುತ್ತಿದ್ದರೆ, ಪದಿನ್ಹೆರ್ 14 ಕೆಜಿಗೂ ಹೆಚ್ಚು ಡ್ರಗ್ಸ್ ಸಾಗಿಸುತ್ತಿದ್ದರು.
Advertisement