Pahalgam Attack: 'ಹಂದಿಗೆ ಲಿಪ್ ಸ್ಟಿಕ್ ಹಾಕಿದ್ರೂ.. ಕಸ ತಿನ್ನೋದನ್ನ ಬಿಡಲ್ಲ'; 'Hamas ಗೆ ಇಸ್ರೇಲ್ ಮಾಡಿದ್ದನ್ನೇ Pakistan ಗೆ ಭಾರತ ಮಾಡಬೇಕು'!

ದಾಳಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುಖ್ಯಸ್ಥ ಅಸಿಮ್ ಮುನೀರ್ ಕುಮ್ಮಕ್ಕು ಇದ್ದು, ಅವರ ಕೃಪಾಕಟಾಕ್ಷದಿಂದಲೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
Ex-US Official Slams Pakistan Over JK Attack
ಪಾಕ್ ಸೇನಾ ಮುಖ್ಯಸ್ಥ ಮುನೀರ್ ಹಾಗೂ ಒಸಾಮಾ ಬಿನ್ ಲಾಡೆನ್
Updated on

ನವದೆಹಲಿ: ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿ ಪ್ರಕರಣವನ್ನು ಕಟುವಾಗಿ ಖಂಡಿಸಿರುವ ಅಮೆರಿಕ ಮಾಜಿ ಪೆಂಟಗನ್ ಅಧಿಕಾರಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಅವರು ಪೆಹಲ್ಗಾಮ್ ಉಗ್ರ ದಾಳಿಯನ್ನು ತೀವ್ರ ಖಂಡಿಸಿದ್ದು, ಈ ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ದಾಳಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುಖ್ಯಸ್ಥ ಅಸಿಮ್ ಮುನೀರ್ ಕುಮ್ಮಕ್ಕು ಇದ್ದು, ಅವರ ಕೃಪಾಕಟಾಕ್ಷದಿಂದಲೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ದಿವಂಗತ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿರುವ ರೂಬೆನ್, 'ಹಂದಿಗೆ ಲಿಪ್ ಸ್ಟಿಕ್ ಹಾಕಿದ್ರೂ.. ಅದು ತನ್ನ ಸ್ವಾಭಾವಿಕ ಬುದ್ದಿ ಬಿಡುವುದಿಲ್ಲ ಎಂದು ಹೇಳಿದರು. ಅಲ್ಲದೆ ಅಸಿಮ್ ಮುನೀರ್ ರನ್ನು ಲಷ್ಕರ್ ಉಗ್ರ ಸಂಘಟನೆ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಗೆ ಹೋಲಿಸಿದ್ದಾರೆ.

'ಒಸಾಮಾ ಬಿನ್ ಲಾಡೆನ್ ಮತ್ತು ಅಸಿಮ್ ಮುನೀರ್ ನಡುವಿನ ಏಕೈಕ ವ್ಯತ್ಯಾಸವೆಂದರೆ ಒಸಾಮಾ ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ಅದನ್ನು ಮೀರಿ, ಇಬ್ಬರೂ ಒಂದೇ ಆಗಿದ್ದಾರೆ ಮತ್ತು ಅವರ ಅಂತ್ಯವೂ ಒಂದೇ ಆಗಿರಬೇಕು ಎಂದು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹೋದ್ಯೋಗಿ ಕೂಡ ಆಗಿರುವ ರೂಬೆನ್ ಕಿಡಿಕಾರಿದ್ದಾರೆ.

Ex-US Official Slams Pakistan Over JK Attack
Pakistan ವಿರುದ್ಧ ರಾಜತಾಂತ್ರಿಕ ಯುದ್ಧ: ಸಿಂಧೂ ನದಿನೀರು ಒಪ್ಪಂದಕ್ಕೆ ಬ್ರೇಕ್; ಪಾಕ್ ಪ್ರಜೆಗಳಿಗೆ ದೇಶ ತೊರೆಯಲು ಗಡುವು!

ಭಯೋತ್ಪಾದನೆ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಿ

ಇದೇ ವೇಳೆ ಪಹಲ್ಗಾಮ್ ದಾಳಿಗೆ ನಾವು ನೀಡಬೇಕಾದ ಏಕೈಕ ಪ್ರತಿಕ್ರಿಯೆಯೆಂದರೆ ಪಾಕಿಸ್ತಾನವನ್ನು ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರವೆಂದು ಘೋಷಿಸಬೇಕು ಮತ್ತು ಅಸಿಮ್ ಮುನೀರ್ ಅವರನ್ನು ಭಯೋತ್ಪಾದಕ ಎಂದು ಅಮೆರಿಕ ಔಪಚಾರಿಕವಾಗಿ ಹೆಸರಿಸಬೇಕು ರೂಬೆನ್ ಆಗ್ರಹಿಸಿದರು.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ದಾಳಿಯು ಯಾವುದೇ ರೀತಿಯ "ಸ್ವಯಂಪ್ರೇರಿತ ಕ್ರಿಯೆ" ಎಂಬ ನೆಪ ಇರಬಾರದು ಹೇಳಿದ ಅವರು, ಈ ಹಿಂದೆ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಹೋದಾಗ ಭಯೋತ್ಪಾದಕ ದಾಳಿ ನಡೆದಂತೆಯೇ, ಅಮೆರಿಕದ ಹಾಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲೇ ಭಯೋತ್ಪಾದಕ ದಾಳಿ ನಡೆದಿದೆ. ಈ ಮೂಲಕ ಅಮೆರಿಕಕ್ಕೆ ಪಾಕಿಸ್ತಾನ ಏನು ಹೇಳಲು ಬಯಸುತ್ತಿದೆ ಎಂದು ಪ್ರಶ್ನಿಸಿದರು.

ಅಂದು ಇಸ್ರೇಲ್ ಗಾಗಿದ್ದೇ ಇಂದು ಭಾರತಕ್ಕಾಗಿದೆ: ಭಾರತ ಕೂಡ ಇಸ್ರೇಲ್ ಅನ್ನು ಅನುಸರಿಸಬೇಕು

ಇನ್ನು ಇದೇ ವೇಳೆ ಪ್ರವಾಸಿಗರ ಮೇಲಿನ ಉಗ್ರ ದಾಳಿಯನ್ನು ಇಸ್ರೇಲ್ ನಲ್ಲಿ ನಡೆದ ಹಮಾಸ್ ದಾಳಿಗೆ ಹೋಲಿಕೆ ಮಾಡಿದ ರೂಬೆನ್, 'ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿ ಎರಡೂ ಒಂದೇ ಆಗಿದೆ. ಈ ಎರಡೂ ದಾಳಿಗಳು ಶಾಂತಿಯುತ ನಾಗರಿಕರ ಮೇಲೆ ಕೇಂದ್ರೀಕೃತವಾಗಿದೆ. ಇಸ್ರೇಲ್‌ನಲ್ಲಿ ಉದಾರವಾದಿ ಯಹೂದಿಗಳು ಮತ್ತು ಭಾರತದಲ್ಲಿ ಮಧ್ಯಮ ವರ್ಗದ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ.

ಅಂದು ಹಮಾಸ್ ವಿರುದ್ಧ ಇಸ್ರೇಲ್ ಕೈಗೊಂಡ ಕ್ರಮದ ರೀತಿಯಲ್ಲೇ ಭಾರತ ಕೂಡ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ಟೋಬರ್ 7, 2023 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಅದು ನಿಖರವಾಗಿ ಸಂಭವಿಸಿತು. ಇದು ನಿರ್ದಿಷ್ಟವಾಗಿ ಯಹೂದಿಗಳ ವಿರುದ್ಧ ನಿರ್ದೇಶಿಸಲ್ಪಟ್ಟಿತು ಮತ್ತು ಯಹೂದಿಗಳ ವಿರುದ್ಧ ಮಾತ್ರವಲ್ಲ, ಗಾಜಾ ಪಟ್ಟಿಯೊಂದಿಗೆ ಶಾಂತಿ ಮತ್ತು ಸಾಮಾನ್ಯತೆಯನ್ನು ಬಯಸುವ ಅತ್ಯಂತ ಉದಾರವಾದಿ ಯಹೂದಿಗಳ ವಿರುದ್ಧವೂ ಆಗಿತ್ತು" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com