
ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಪಾಕಿಸ್ತಾನ ವಿಮಾನ ನಿಲ್ದಾಣ ಸಂಸ್ಥೆಯು ಕಳೆದ ಎರಡು ತಿಂಗಳಲ್ಲಿ ರೂ. 4.1 ಬಿಲಿಯನ್ ನಷ್ಟ ಅನುಭವಿಸಿದೆ ಎಂದು ಅಧಿಕೃತ ಮಾಹಿತಿ ತಿಳಿದುಬಂದಿದೆ.
ಏಪ್ರಿಲ್ 22 ರಂದು ಕಾಶ್ಮೀರದಲ್ಲಿ ನಡೆದ ಮಾರಣಾಂತಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಭಾರತ ಪರಸ್ಪರರ ವಿಮಾನಗಳಿಗೆ ತಮ್ಮ ವಾಯುಪ್ರದೇಶಗಳನ್ನು ಮುಚ್ಚಿದ್ದವು.
ಮೇ 7 ರಂದು ಭಾರತ ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸಿದ್ದರಿಂದ ಉಂಟಾದ ನಾಲ್ಕು ದಿನಗಳ ಸೇನಾ ಸಂಘರ್ಷದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟ ನಂತರ ವಾಯುಪ್ರದೇಶದ ನಿಷೇಧವನ್ನು ವಿಸ್ತರಿಸಲಾಯಿತು.
ಭಾರತೀಯ-ನೋಂದಾಯಿತ ವಿಮಾನಗಳಿಗೆ ವಾಯುಪ್ರದೇಶವನ್ನು ಮುಚ್ಚುವುದರಿಂದ ಪಾಕಿಸ್ತಾನ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಪಿಎಎ) 4.1 ಬಿಲಿಯನ್ ನಷ್ಟವಾಗಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ರಾಷ್ಟ್ರೀಯ ಅಸೆಂಬ್ಲಿಗೆ ಮಾಹಿತಿ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಏಪ್ರಿಲ್ 24 ರಿಂದ ಜೂನ್ 30 ರವರೆಗಿನ ಆದಾಯದಲ್ಲಿ ತೀವ್ರ ಕೊರೆತೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಪಾಕಿಸ್ತಾನದ ವಾಯುಪ್ರದೇಶ ಭಾರತೀಯ ವಿಮಾನಯಾನ ಮತ್ತು ವಿಮಾನಗಳನ್ನು ಹೊರತುಪಡಿಸಿ ಎಲ್ಲರಿಗೂ ಮುಕ್ತವಾಗಿದೆ. ಅದೇ ರೀತಿ, ಪಾಕಿಸ್ತಾನದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದಿಂದ ನಿಷೇಧಿಸಲಾಗಿದೆ.
Advertisement