Operation Sindoor: ಭಾರತ ಚೆಕ್ ಮೇಟ್ ನೀಡಿದ್ದು ಹೇಗೆ ಗೊತ್ತಾ? ಮಹತ್ವದ ಮಾಹಿತಿ ಹಂಚಿಕೊಂಡ ಸೇನಾ ಮುಖ್ಯಸ್ಥ!
ಚೆನ್ನೈ: ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚಿನ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು 'ಚೆಸ್' ಆಟಕ್ಕೆ ಹೋಲಿಸಿದ್ದಾರೆ.
ಆಪರೇಷನ್ ಸಿಂಧೂರ್ ಯಾವುದೇ ಸಾಂಪ್ರದಾಯಿಕ ಕಾರ್ಯಾಚರಣೆಗಿಂತ ಭಿನ್ನವಾಗಿತ್ತು. ಭಾರತದ ಸೈನ್ಯವು ಶತ್ರುಗಳ ಮುಂದಿನ ನಡೆಯನ್ನು ಅನಿಶ್ಚಿತಗೊಳಿಸಿತು. ಚೇಸ್ ಆಟದಲ್ಲಿ ಭಾರತ ನಿರ್ಣಾಯಕ ಚೆಕ್‌ಮೇಟ್ ನೀಡುವ ಮೂಲಕ ವಿಜಯವನ್ನು ಭದ್ರಪಡಿಸಿತು ಎಂದು ಹೇಳಿದ್ದಾರೆ.
ಐಐಟಿ ಮದ್ರಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಆಪರೇಷನ್ ಸಿಂಧೂರ'ದಲ್ಲಿ ನಾವು ಚೆಸ್ ಆಡಿದ್ದೇವೆ. ಶತ್ರುಗಳ ಮುಂದಿನ ನಡೆ ಏನು ಮತ್ತು ನಾವು ಏನು ಮಾಡಲಿದ್ದೇವೆ ಎಂದು ನಮಗೆ ತಿಳಿದಿರಲಿಲ್ಲ. ಇದನ್ನು 'ಗ್ರೇಜೋನ್' (ಬೂಧು ವಲಯ) ಎಂದು ಕರೆಯಲಾಗುತ್ತದೆ. ಅಂದರೆ ನಾವು ಸಾಂಪ್ರದಾಯಿಕ ಕಾರ್ಯಾಚರಣೆಗಳಿಗೆ ಹೋಗಲಿಲ್ಲ. ಅದಕ್ಕಿಂತ ಚಿಕ್ಕದಾಗಿತ್ತು. ನಾವು ಚೆಸ್ ಆಡಿದ್ದೇವು, ಅವರು ಆಡಿದ್ರು. ಎಲ್ಲೋ ಅವರಿಗೆ ಚೆಕ್ ಮೇಟ್ ನೀಡಿದ್ದೇವೆ ಎಂದರು.
ಎಲ್ಲೋ ನಾವು ನಮ್ಮತನ ಕಳೆದುಕೊಳ್ಳುವ ಅಪಾಯದಲ್ಲಿ ಕೊಲ್ಲಲು ಹೋಗುತ್ತಿದ್ದೆವು ಆದರೆ ಅದು ಜೀವನವಾಗಿದೆ" ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಲಾಯಿತು. ಇದು ರಾಜಕೀಯ ಸಂಕಲ್ಪ ಮತ್ತು ಸರ್ಕಾರದ ಮಟ್ಟದಲ್ಲಿ ಕಾರ್ಯತಂತ್ರದ ಸ್ಪಷ್ಟತೆಯಿಂದ ನಡೆಸಲ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವರೊಂದಿಗಿನ ಉನ್ನತ ಮಟ್ಟದ ಸಭೆಗಳ ಸಂದರ್ಭದಲ್ಲಿ ಸೇನೆಗೆ 'ಫ್ರೀ ಹ್ಯಾಂಡ್' ನೀಡುವ ನಿರ್ಧಾರವನ್ನು ಅವರು ಶ್ಲಾಘಿಸಿದರು.
ಸಾಕು..ಸಾಕು.. ಎಂದ ರಾಜನಾಥ್ ಸಿಂಗ್:
"ಏಪ್ರಿಲ್ 23 ರಂದು ನಾವೆಲ್ಲರೂ ಸಭೆ ನಡೆಸುವಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ 'ಸಾಕು ಸಾಕು' ಎಂದು ಹೇಳಿದರು. ಏನಾದರೂ ಮಾಡಬೇಕು ಎಂಬುದು ಮೂವರು ಸೇನಾ ಮುಖ್ಯಸ್ಥರ ನಿರ್ಧಾರವಾಗಿತ್ತು. 'ಏನು ಮಾಡಬೇಕೆಂದು ನೀವೇ ನಿರ್ಧರಿಸಿ' ಎಂದು ಮುಕ್ತ ಸ್ವಾತಂತ್ರವನ್ನು ನೀಡಲಾಯಿತು. ಆ ರೀತಿಯ ಆತ್ಮವಿಶ್ವಾಸ, ರಾಜಕೀಯ ನಿರ್ದೇಶನ ಮತ್ತು ರಾಜಕೀಯ ಸ್ಪಷ್ಟತೆಯನ್ನು ಮೊದಲ ಬಾರಿಗೆ ನೋಡಿದ್ದೇವು ಎಂದು ಅವರು ಹೇಳಿದರು.
ಸೇನಾ ಕಾರ್ಯಾಚರಣೆಯಲ್ಲಿ ನಾವೇ ಗೆದಿದ್ದೇವೆ ಎಂಬ ಹೇಳಿಕೆ ಹಾಗೂ ಸೇನಾ ಮುಖ್ಯಸ್ಥ ಮುನೀರ್ ಗೆ ಫೀಲ್ಡ್ ಮಾರ್ಷಲ್ ಪಟ್ಟ ನೀಡಿದ ಪಾಕಿಸ್ತಾನದ ವಿರುದ್ಧ ಸೇನಾ ಮುಖ್ಯಸ್ಥರು ಕಿಡಿಕಾರಿದರು.

