Trump-Putin ಮಾತುಕತೆ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಪ್ರಧಾನಿ ಮೋದಿ ಕರೆ: 'ಶಾಂತಿಗೆ ಬೆಂಬಲ ಘೋಷಣೆ'

ದೂರವಾಣಿ ಕರೆ ವೇಳೆ ಉಭಯ ನಾಯಕರು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಪ್ರಮುಖವಾಗಿ ಉಕ್ರೇನ್ ನಲ್ಲಿ ಶಾಂತಿ ಸ್ಥಾಪನೆ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
PM Modi speaks to Zelenskyy
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಪ್ರಧಾನಿ ಮೋದಿ ಕರೆ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ (Volodymyr Zelensky) ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi)ಗೆ ಸೋಮವಾರ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.

ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್​ ನಡುವಿನ ಸಂಘರ್ಷ ಕೊನೆಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಭೇಟಿಗೆ ಕೆಲವೇ ದಿನಗಳಿರುವಂತೆಯೇ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಮಾತನಾಡಿದ್ದಾರೆ.

ದೂರವಾಣಿ ಕರೆ ವೇಳೆ ಉಭಯ ನಾಯಕರು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಪ್ರಮುಖವಾಗಿ ಉಕ್ರೇನ್ ನಲ್ಲಿ ಶಾಂತಿ ಸ್ಥಾಪನೆ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, 'ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯ ಮೂಲಕ ದೀರ್ಘ ಸಂಭಾಷಣೆ ನಡೆಸಿದೆ. ಈ ವೇಳೆ, ನಾವು ಎಲ್ಲಾ ಪ್ರಮುಖ ವಿಷಯಗಳನ್ನು ವಿವರವಾಗಿ ಚರ್ಚಿಸಿದ್ದೇವೆ. ಜೊತೆಗೆ ನಮ್ಮ ದ್ವಿಪಕ್ಷೀಯ ಸಂಬಂಧ ಹಾಗೂ ಪ್ರಸ್ತುತ ರಾಜತಾಂತ್ರಿಕ ಪರಿಸ್ಥಿತಿಯ ಕುರಿತು ಸಹ ಚರ್ಚಿಸಿದ್ದೇವೆ” ಎಂದ ಅವರು, ಯುದ್ಧದ ಸಮಯದಲ್ಲಿ ನಮ್ಮ ಜನರಿಗೆ ನೀಡಿದ ಆತ್ಮೀಯ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

PM Modi speaks to Zelenskyy
Trump-Putin summit ಗೆ ಭಾರತ ಸ್ವಾಗತ; ಉಕ್ರೇನ್‌ನಲ್ಲಿ ಶಾಂತಿ ಪ್ರಯತ್ನಗಳಿಗೆ ಬೆಂಬಲ

ಉಕ್ರೇನ್​ ಒಪ್ಪಿಗೆ ಬೇಕು ಎಂದ ಝೆಲೆನ್ಸ್ಕಿ

ಇದೇ ವೇಳೆ ಉಕ್ರೇನ್ ಗೆ ಸಂಬಂಧಿಸಿದ ಪ್ರತೀ ನಿರ್ಧಾರದಲ್ಲೂ ಉಕ್ರೇನ್ ನ ಒಪ್ಪಿಗೆ ಬೇಕು ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದಾರೆ. 'ನಿನ್ನೆ ಜಪೋರಿಝಿಯಾದ ಬಸ್ ನಿಲ್ದಾಣದ ಮೇಲೆ ರಷ್ಯಾ ನಡೆಸಿದ ದಾಳಿಯ ಬಗ್ಗೆಯೂ ನಾನು ಪ್ರಧಾನಿ ಮೋದಿಯವರಿಗೆ ಹೇಳಿದ್ದೆ. ಈ ದಾಳಿಯಲ್ಲಿ ಹಲವಾರು ನಾಗರೀಕರು ಗಾಯಗೊಂಡರು.

ಇದರಿಂದು ರಷ್ಯಾವು, ಜನರ ವಸತಿ ಪ್ರದೇಶಗಳ ಮೇಲೆ ಉದ್ದೇಶಪೂರ್ವಕವಾಗಿಯೇ ದಾಳಿ ಮಾಡಿದ್ದು, ಯುದ್ಧವನ್ನು ಕೊನೆಗೊಳಿಸಲು ಅಂತಿಮವಾಗಿ ರಾಜತಾಂತ್ರಿಕ ಅವಕಾಶವಿರುವ ಸಮಯದಲ್ಲಿಯೇ ಈ ದಾಳಿ ನಡೆದಿದೆ” ಎಂದು ಬೇಸರಿಸಿದ್ದಾರೆ. ಜೊತೆಗೆ, ರಷ್ಯಾ ರಾಷ್ಟ್ರವು ಕದನ ವಿರಾಮಕ್ಕಾಗಿ ಪ್ರಯತ್ನಗಳನ್ನು ಮಾಡುವ ಬದಲು, ಸಾಮಾನ್ಯ ನಾಗರೀಕರ ಮೇಲೆ ದಾಳಿ ಮಾಡುತ್ತಿದೆ ಎಂದು, ಮೋದಿಯವರಿಗೆ ತಿಳಿಸಿದೆ ಎಂದು ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ಪ್ರಧಾನಿ ಮೋದಿಯವರು ಸಹ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ, ಮಾತನಾಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, 'ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದೆ. ಈ ವೇಳೆ, ಸಂಘರ್ಷದ ಶಾಂತಿಯುತ ಪರಿಹಾರದ ಅಗತ್ಯತೆಯ ಬಗ್ಗೆ ಭಾರತದ ಸ್ಥಿರ ನಿಲುವನ್ನು ನಾನು ತಿಳಿಸಿದ್ದು, ಈ ನಿಟ್ಟಿನಲ್ಲಿ ಭಾರತವು ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡಲು ಹಾಗೂ ಉಕ್ರೇನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ' ಎಂದು ತಿಳಿಸಿದ್ದಾರೆ.

PM Modi speaks to Zelenskyy
ಆಗಸ್ಟ್ 15ಕ್ಕೆ ಅಲಾಸ್ಕಾದಲ್ಲಿ ವ್ಲಾಡಿಮಿರ್ ಪುಟಿನ್ ಭೇಟಿ; ಉಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ಚರ್ಚೆ: Donald Trump

ಭಾರತಕ್ಕೆ ಧನ್ಯವಾದ ಹೇಳಿದ ಝೆಲೆನ್ಸ್ಕಿ

'ನಮ್ಮ ಜನರಿಗೆ ಬೆಂಬಲ ನೀಡುವ ಬೆಚ್ಚಗಿನ ಮಾತುಗಳಿಗಾಗಿ ಪ್ರಧಾನಿಯವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ನಿಟ್ಟಿನಲ್ಲಿ ಭಾರತವು ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡಲು ಹಾಗೂ ಉಕ್ರೇನ್‌ನೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ. ರಷ್ಯಾದ ಇಂಧನ, ವಿಶೇಷವಾಗಿ ತೈಲ ರಫ್ತನ್ನು ಮಿತಿಗೊಳಿಸುವುದು ಅಗತ್ಯ. ಭಾರತವು ನಮ್ಮ ಶಾಂತಿ ಪ್ರಯತ್ನಗಳನ್ನು ಬೆಂಬಲಿಸುವುದು ಮತ್ತು ಉಕ್ರೇನ್‌ಗೆ ಸಂಬಂಧಿಸಿದ ಎಲ್ಲವನ್ನೂ ಉಕ್ರೇನ್‌ನ ಭಾಗವಹಿಸುವಿಕೆಯೊಂದಿಗೆ ನಿರ್ಧರಿಸಬೇಕು ಎಂಬ ನಿಲುವನ್ನು ಹಂಚಿಕೊಳ್ಳುವುದು ಮುಖ್ಯ.

ಇತರ ಸ್ವರೂಪಗಳು ಫಲಿತಾಂಶಗಳನ್ನು ನೀಡುವುದಿಲ್ಲ. ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಸಹ ನಾವು ವಿವರವಾಗಿ ಚರ್ಚಿಸಿದ್ದೇವೆ. ಈ ಯುದ್ಧದ ಮುಂದುವರಿಕೆಗೆ ಹಣಕಾಸು ಒದಗಿಸುವ ಅದರ ಸಾಮರ್ಥ್ಯ ಮತ್ತು ಸಾಮರ್ಥ್ಯವನ್ನು ಕಡಿಮೆ ಮಾಡಲು ರಷ್ಯಾದ ಇಂಧನ, ವಿಶೇಷವಾಗಿ ತೈಲ ರಫ್ತನ್ನು ಮಿತಿಗೊಳಿಸುವುದು ಅಗತ್ಯ ಎಂದು ನಾನು ಗಮನಿಸಿದೆ. ರಷ್ಯಾದ ಮೇಲೆ ಸ್ಪಷ್ಟವಾದ ಹತೋಟಿ ಹೊಂದಿರುವ ಪ್ರತಿಯೊಬ್ಬ ನಾಯಕನು ಮಾಸ್ಕೋಗೆ ಅನುಗುಣವಾದ ಸಂಕೇತಗಳನ್ನು ಕಳುಹಿಸುವುದು ಮುಖ್ಯ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾದ ತೈಲ ಖರೀದಿ ನಿಲ್ಲಿಸಿ

'ರಷ್ಯಾದ ಇಂಧನ, ವಿಶೇಷವಾಗಿ ತೈಲ ರಫ್ತನ್ನು ನಿಯಂತ್ರಿಸುವುದು ಅಗತ್ಯ ಎಂದು ನಾನು ಪ್ರಧಾನಿ ಮೋದಿಯವರಿಗೆ ಹೇಳಿದ್ದೆ, ಯಾಕಂದ್ರೆ, ರಷ್ಯಾವನ್ನು ನಿಲ್ಲಿಸಲು ಸಾಧ್ಯವಿರುವುದು ಅದರೊಂದರಿಂದಲೇ ಎಂದ ಝೆಲೆನ್ಸ್ಕಿ, ಇದೇ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವೇಳೆ, ಪ್ರಧಾನಿ ಮೋದಿಯವರೊಂದಿಗೆ, ದ್ವಿಪಕ್ಷೀಯ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com