
ವಾಷಿಂಗ್ಟನ್/ನ್ಯೂಯಾರ್ಕ್: ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ವಿಧಿಸಲಾದ ಅಮೆರಿಕದ ಸುಂಕಗಳಿಂದ ರಷ್ಯಾ ಆರ್ಥಿಕತೆ ಮೇಲೆ "ದೊಡ್ಡ ಹೊಡೆತ" ನೀಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಭಾರತ ರಷ್ಯಾದ "ಅತಿದೊಡ್ಡ ಅಥವಾ ಎರಡನೇ ಅತಿದೊಡ್ಡ ತೈಲ ಖರೀದಿದಾರ" ಎಂದು ಅವರು ಉಲ್ಲೇಖಿಸಿದ್ದಾರೆ.
ಶ್ವೇತಭವನದಲ್ಲಿ ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಹಲವಾರು ದೇಶಗಳ ಮೇಲೆ ಅಮೆರಿಕ ಸುಂಕಗಳನ್ನು ವಿಧಿಸುವುದರಿಂದ ನಡೆಯುತ್ತಿರುವ ಜಾಗತಿಕ ಒತ್ತಡಗಳಿಂದ ರಷ್ಯಾದ ಆರ್ಥಿಕತೆಯು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಹೇಳಿದ್ದಾರೆ.
ರಷ್ಯಾ ತನ್ನ ದೇಶವನ್ನು ನಿರ್ಮಿಸಲು ಮತ್ತೆ ಪ್ರಾರಂಭಿಸಬೇಕು ಎಂದು ನಾನು ಭಾವಿಸುತ್ತೇನೆ. ರಷ್ಯಾ ದೊಡ್ಡ ದೇಶ. ರಷ್ಯನ್ನರು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅವರ ಆರ್ಥಿಕತೆಯು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ, ತುಂಬಾ ತೊಂದರೆಗೊಳಗಾಗಿದೆ ಎಂದರು.
ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 25 ರಷ್ಟು ಪರಸ್ಪರ ಸುಂಕಗಳನ್ನು ವಿಧಿಸಿದ್ದಾರೆ, ಜೊತೆಗೆ ರಷ್ಯಾದ ತೈಲ ಖರೀದಿಯ ಮೇಲೆ ಹೆಚ್ಚುವರಿ ಶೇ. 25 ರಷ್ಟು ಸುಂಕವನ್ನು ವಿಧಿಸಿದ್ದಾರೆ, ಇದರ ಪರಿಣಾಮವಾಗಿ ಒಟ್ಟು ಶೇ. 50 ರಷ್ಟು ಸುಂಕಗಳು ಭಾರತದ ಮೇಲೆ ಬಿದ್ದಿವೆ.
ಟ್ರಂಪ್ ಅಲಾಸ್ಕಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ನಾಡಿದ್ದು ಶುಕ್ರವಾರ ಭೇಟಿಯಾಗಲಿದ್ದಾರೆ, ಅಲ್ಲಿ ಅವರು ರಚನಾತ್ಮಕ ಸಂಭಾಷಣೆಗಳನ್ನು ನಿರೀಕ್ಷಿಸುತ್ತಾರೆ. ರಷ್ಯಾದ ಅಧ್ಯಕ್ಷರು ನಮ್ಮ ದೇಶಕ್ಕೆ ಬರುತ್ತಿರುವುದು ತುಂಬಾ ಗೌರವದ ವಿಷಯ, ನಾವು ರಚನಾತ್ಮಕವಾಗಿ ಮಾತುಕತೆ ನಡೆಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು,
ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ತೊಡಗಿಸಿಕೊಳ್ಳುವ ತಮ್ಮ ಯೋಜನೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಮುಂದಿನ ಸಭೆ ಜೆಲೆನ್ಸ್ಕಿ ಮತ್ತು ಪುಟಿನ್ ಅವರೊಂದಿಗೆ ಅಥವಾ ಜೆಲೆನ್ಸ್ಕಿ ಮತ್ತು ಪುಟಿನ್ ಮತ್ತು ನನ್ನೊಂದಿಗೆ ಇರುತ್ತದೆ. ಅವರಿಗೆ ಅಗತ್ಯವಿದ್ದರೆ ನಾನು ಅಲ್ಲಿಗೆ ಹೋಗುತ್ತೇನೆ ಆದರೆ ಇಬ್ಬರು ನಾಯಕರ ನಡುವೆ ಸಭೆಯನ್ನು ಏರ್ಪಡಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
Advertisement