ಭಾರತ-ಪಾಕ್ ಸಂಘರ್ಷ ತಪ್ಪಿಸಿದ್ದು ನಾನೇ: ಪುಟಿನ್ ಭೇಟಿ ನಂತರ ಟ್ರಂಪ್ ಪುನರುಚ್ಚಾರ

ಯುದ್ಧಗಳು "ತುಂಬಾ ಕೆಟ್ಟವು" ಎಂದು ಒತ್ತಿ ಹೇಳಿದ ಟ್ರಂಪ್, "ಅವುಗಳನ್ನು ಕೊನೆಗೊಳಿಸುವ, ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯ" ತನಗೆ ಇದೆ ಎಂದಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್ online desk
Updated on

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಶೃಂಗಸಭೆಯ ದಿನದಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಹೇಳಿದ್ದಾರೆ. ಅಲ್ಲದೆ ಭಾರತ, ರಷ್ಯಾದಿಂದ ತೈಲ ಖರೀದಿಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದ ಯಾವುದೇ ಮಧ್ಯಸ್ಥಿಕೆ ಇಲ್ಲದೆ ಭಾರತ ಮತ್ತು ಪಾಕಿಸ್ತಾನ ಮಿಲಿಟರಿಗಳ ನಡುವಿನ ನೇರ ಮಾತುಕತೆಯ ನಂತರ ಯುದ್ಧ ನಿಲ್ಲಿಸಲಾಯಿತು ಎಂದು ನವದೆಹಲಿ ಸಮರ್ಥಿಸಿಕೊಳ್ಳುತ್ತಿದೆ.

"ಭಾರತ, ಪಾಕಿಸ್ತಾನ ಯುದ್ಧ ಸೇರಿದಂತೆ ನಾನು ಐದು ಯುದ್ಧಗಳನ್ನು ಅವುಗಳ ಅಂತ್ಯದವರೆಗೆ ಮಾತುಕತೆ ನಡೆಸಿದ್ದೇನೆ ಮತ್ತು ಆ ಯುದ್ಧಗಳು ಕಠಿಣವಾಗಿದ್ದವು..." ಎಂದು ಶುಕ್ರವಾರ ಅಲಾಸ್ಕಾದ ಆಂಕಾರೇಜ್‌ನಲ್ಲಿ ಪುಟಿನ್ ಅವರೊಂದಿಗೆ ನಡೆದ ಉನ್ನತ ಮಟ್ಟದ ಶೃಂಗಸಭೆಯ ಬಳಿಕ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ಈ ಮಧ್ಯೆ, ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಯಾವುದೇ ಒಪ್ಪಂದವಿಲ್ಲದೆ ಉಭಯ ನಾಯಕರ ನಡುವಿನ ಸಭೆ ಅಂತ್ಯಗೊಂಡಿದೆ.

Donald Trump
Alaska Summit: ಭಾರತಕ್ಕೆ 2ನೇ ಸುಂಕ ಕುರಿತು Donald Trump ಹೊಸದಾಗಿ ಹೇಳಿದ್ದೇನು?

ಅದೇ ಸಂದರ್ಶನದಲ್ಲಿ, ಟ್ರಂಪ್ ಮತ್ತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಪ್ಪಿಸಿದ್ದು ತಾವೇ ಎಂದು ಹೇಳಿದ್ದು, ಜೊತೆಗೆ ಕಾಂಗೋ ಮತ್ತು ರುವಾಂಡಾ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಸಂಘರ್ಷವನ್ನು ಪರಿಹರಿಸಿರುವುದಾಗಿ ಹೇಳಿಕೊಂಡಿದ್ದಾರೆ.

"ನೀವು ಭಾರತ ಮತ್ತು ಪಾಕಿಸ್ತಾನವನ್ನು ಒಮ್ಮೆ ನೋಡಿ. ಅವರು ವಿಮಾನಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದ್ದರು. ಆರರಿಂದ ಏಳು ವಿಮಾನಗಳು ಕೆಳಕ್ಕುರುಳಿದ್ದವು. ಅವರು ಪರಮಾಣು ಯುದ್ಧಕ್ಕೂ ಮುಂದಾಗಿದ್ದರು. ಆದರೆ ನಾನು ಸಮಸ್ಯೆಯನ್ನು ಬಗೆಹರಿಸಿದೆನು" ಎಂದು ಟ್ರಂಪ್ ಹೇಳಿದ್ದಾರೆ.

ಯುದ್ಧಗಳು "ತುಂಬಾ ಕೆಟ್ಟವು" ಎಂದು ಒತ್ತಿ ಹೇಳಿದ ಟ್ರಂಪ್, "ಅವುಗಳನ್ನು ಕೊನೆಗೊಳಿಸುವ, ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯ" ತನಗೆ ಇದೆ ಎಂದು ತೋರುತ್ತದೆ. ಇದಕ್ಕಾಗಿ ನಾನು "ಯುನೈಟೆಡ್ ಸ್ಟೇಟ್ಸ್‌ನ ಶಕ್ತಿಯನ್ನು" ಬಳಸುತ್ತಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com