
ವಾಷಿಂಗ್ಟನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ತಮ್ಮ ಸಭೆ ಚೆನ್ನಾಗಿ ನಡೆದರೆ, ಉಕ್ರೇನ್-ರಷ್ಯಾ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಝೆಲೆನ್ಸ್ಕಿಯೊಂದಿಗಿನ ಭೇಟಿಯ ಸಮಯದಲ್ಲಿ ಟ್ರಂಪ್, 'ಯುದ್ಧ ಕೊನೆಗೊಳ್ಳಲಿದೆ. ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಾನು ನಿಮಗೆ ಹೇಳಲಾರೆ. ಆದರೆ ಈ ಯುದ್ಧ ನಿಲ್ಲುತ್ತದೆ. ವ್ಲಾಡಿಮಿರ್ ಪುಟಿನ್ ಯುದ್ಧ ಕೊನೆಗೊಳಿಸಲು ಬಯಸುತ್ತಿದ್ದು ಝೆಲೆನ್ಸ್ಕಿ ಕೂಡ ಒಪ್ಪಿಕೊಂಡರೆ ಶೀಘ್ರದಲ್ಲೇ ಯುದ್ಧ ನಿಲ್ಲುತ್ತದೆ ಎಂದರು. ಇಡೀ ಜಗತ್ತು ಇದರಿಂದ ಬೇಸತ್ತಿದೆ ಎಂದು ನಾನು ಭಾವಿಸುತ್ತೇನೆ. ನಾವು ಅದನ್ನು ಕೊನೆಗೊಳಿಸುತ್ತೇವೆ. ನಾನು 6 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಬಹುಶಃ ಇದು ಸುಲಭವಾದದ್ದಾಗಿರಬಹುದು ಎಂದು ನಾನು ಭಾವಿಸಿದ್ದೆ, ಆದರೆ ಅದು ಅಷ್ಟು ಸುಲಭವಲ್ಲ ಎಂದು ಹೇಳಿದರು.
ಇದು ಕಠಿಣ ಯುದ್ಧ... ಭಾರತ-ಪಾಕಿಸ್ತಾನ, ನಾವು ದೊಡ್ಡ ದೇಶಗಳ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ಈ ಯುದ್ಧಗಳಲ್ಲಿ ಕೆಲವನ್ನು ನೋಡಿ, ನೀವು ಆಫ್ರಿಕಾಕ್ಕೆ ಹೋಗಿ ನೋಡಿ. ರುವಾಂಡಾ ಮತ್ತು ಕಾಂಗೋ - ಇದು 31 ವರ್ಷಗಳಿಂದ ನಡೆಯುತ್ತಿದೆ. ನಾವು ಒಟ್ಟು 6 ಯುದ್ಧಗಳನ್ನು ಕೊನೆಗೊಳಿಸಿದ್ದೇವೆ. ಇದರಲ್ಲಿ ನಾವು ಇರಾನ್‌ನ ಭವಿಷ್ಯದ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ ಎಂಬ ಅಂಶವನ್ನು ಒಳಗೊಂಡಿಲ್ಲ... ನಾವು ಈ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂದು ನನಗೆ ತುಂಬಾ ವಿಶ್ವಾಸವಿದೆ ಎಂದರು.
ಸೋಮವಾರದ ಬೆಳವಣಿಗೆಗಳು ಅಲಾಸ್ಕಾ ಸಭೆಯಿಂದ ಪ್ರಗತಿ ಮತ್ತು ಸಂಭಾವ್ಯ ಅಪಾಯ ಎರಡರ ಸಂಕೇತವಾಗಿದೆ. ಏಕೆಂದರೆ ಅನೇಕ ಯುರೋಪಿಯನ್ ನಾಯಕರು ಉಕ್ರೇನ್‌ನ ಹಿತಾಸಕ್ತಿಗಳನ್ನು ರಕ್ಷಿಸುವ ಸ್ಪಷ್ಟ ಗುರಿಯೊಂದಿಗೆ ವಾಷಿಂಗ್ಟನ್‌ಗೆ ಬರುತ್ತಿದ್ದಾರೆ. ಇದು ಅಪರೂಪದ ಮತ್ತು ವ್ಯಾಪಕವಾದ ರಾಜತಾಂತ್ರಿಕ ಶಕ್ತಿಯ ಪ್ರದರ್ಶನವಾಗಿದೆ ಎಂದು Xನಲ್ಲಿ ಝೆಲೆನ್ಸ್ಕಿ ಪೋಸ್ಟ್ ಮಾಡಿದ್ದರು. ಉಕ್ರೇನ್ ಮತ್ತು ಎಲ್ಲಾ ಯುರೋಪ್‌ಗೆ ಭದ್ರತಾ ಖಾತರಿಗಳನ್ನು ಒದಗಿಸಲು ಯುರೋಪ್‌ನೊಂದಿಗೆ ಕೆಲಸ ಮಾಡಲು ಯುಎಸ್ ಒಪ್ಪಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಟ್ವೀಟಿಸಿದ್ದರು.
ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಬಯಸಿದರೆ ರಷ್ಯಾದೊಂದಿಗಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬಹುದು ಅಥವಾ ಅವರು ಯುದ್ಧವನ್ನು ಮುಂದುವರಿಸಬಹುದು ಎಂದು ಟ್ರಂಪ್ ಭಾನುವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಝೆಲೆನ್ಸ್ಕಿ ಭಾನುವಾರ ರಾತ್ರಿ ತಮ್ಮ ಪೋಸ್ಟ್ ಮೂಲಕ ಪ್ರತಿಕ್ರಿಯಿಸುತ್ತಾ, "ಈ ಯುದ್ಧವನ್ನು ತ್ವರಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಕೊನೆಗೊಳಿಸಲು ನಾವೆಲ್ಲರೂ ಬಲವಾದ ಬಯಕೆಯನ್ನು ಹೊಂದಿದ್ದೇವೆ ಎಂದು ಹೇಳಿದರು. ಶಾಂತಿ ಶಾಶ್ವತವಾಗಿರಬೇಕು ಎಂದು ಅವರು ಹೇಳಿದರು. ಆದರೆ ಎಂಟು ವರ್ಷಗಳ ಹಿಂದೆ ರಷ್ಯಾ ಕ್ರೈಮಿಯಾ ಮತ್ತು ಪೂರ್ವ ಉಕ್ರೇನ್‌ನಲ್ಲಿರುವ ಡಾನ್‌ಬಾಸ್‌ನ ಒಂದು ಭಾಗವನ್ನು ಸ್ವಾಧೀನಪಡಿಸಿಕೊಂಡ ನಂತರ ಮತ್ತು ಪುಟಿನ್ ಅದನ್ನು ಹೊಸ ದಾಳಿಗೆ ವೇದಿಕೆಯಾಗಿ ಬಳಸಿಕೊಂಡರು ಎಂದು ಅವರು ಹೇಳಿದರು.
ಸಭೆಯ ನಾಯಕರು!
ಝೆಲೆನ್ಸ್ಕಿ ಜೊತೆಗೆ, ಯುಎಸ್ ರಾಜಧಾನಿಯಲ್ಲಿ ನಡೆಯಲಿರುವ ಸಭೆಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಫಿನ್ನಿಷ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಸೇರಿದ್ದಾರೆ.
Advertisement