
ವಾಷಿಂಗ್ಟನ್: ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಕಾಕ್ ಪೀಟ್ ನ ಕರಾಳ ರಹಸ್ಯಗಳನ್ನು ಬಟಾ ಬಯಲು ಮಾಡಿರುವ ವಿಚಾರ ವ್ಯಾಪಕ ವೈರಲ್ ಆಗುತ್ತಿದೆ.
ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ವಿಮಾನ ಆಗಸದಲ್ಲಿರುವಾಗಲೇ ವಿಮಾನದಲ್ಲಿ ಏನೇನಾಗುತ್ತದೆ ಎಂಬ ವಿಚಾರದ ಬಗ್ಗೆ ಮಾತನಾಡಿದ್ದು, ಅಕೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಈ ಕುರಿತು ಇಂಡಿಯಾ ಟುಡೆ ವರದಿ ಮಾಡಿದ್ದು, ವಿದೇಶಿ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿ ಸಿಯೆರಾ ಮಿಸ್ಟ್ (Cierra Mistt) ಎಂಬಾಕೆ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೆಲವು ಆಘಾತಕಾರಿ ವಿಚಾರಗಳನ್ನು ತನ್ನ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾಳೆ.
ಸುಮಾರು 2 ವರ್ಷಗಳಷ್ಟು ಹಳೆಯದಾದ ಈ ವಿಡಿಯೋಗಳು ಇದೀಗ ವೈರಲ್ ಆಗುತ್ತಿದ್ದು, ವಿಮಾನದ ಕಾಕ್‌ಪಿಟ್‌ನ ಮುಚ್ಚಿದ ಬಾಗಿಲುಗಳ ಒಳಗೆ ಏನೆಲ್ಲಾ ನಡೆಯುತ್ತದೆ ಎಂದು ಆಕೆ ಹೇಳಿರುವ ವಿಚಾರ ಸುದ್ದಿಗೆ ಗ್ರಾಸವಾಗುತ್ತಿದೆ.
ಗಗನಸಖಿಯರ ಜೊತೆ ಪೈಲಟ್ ರೊಮ್ಯಾನ್ಸ್!
ಸಾಮಾನ್ಯವಾಗಿ ವಿಮಾನ ದೂರದ ಸ್ಥಳಗಳಗಿ ಪ್ರಯಾಣಿಸುವಾಗ ವಿಮಾನ ನಿಗದಿತ ಎತ್ತರ ತಲುಪುತ್ತಿದ್ದಂತೆ ಪೈಲಟ್‌ಗಳು ವಿಮಾನವನ್ನು ಆಟೋ (Auto Pilot) ಮೋಡ್‌ಗೆ ಹಾಕುತ್ತಾರೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಆ ವೇಳೆ ಅವರು ಸಿಬ್ಬಂದಿ ಜತೆ ರೊಮ್ಯಾನ್ಸ್‌ನಲ್ಲಿ ನಿರತರಾಗಿರುತ್ತಾರೆ ಎಂದು ಸಿಯೆರಾ ಮಿಸ್ಟ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಒಬ್ಬ ಪೈಟಲ್ ಕಾಕ್‌ಪಿಟ್‌ನಿಂದ ಹೊರ ಬಂದಾಗ, ಸಖಿಯೊಬ್ಬರು ಅದರೊಳಗೆ ಹೋಗಬಹುದು. ಕೆಲವರು ಇದನ್ನೇ ಅವಕಾಶವಾಗಿ ಬಳಸಿಕೊಂಡು, ಸಹಪೈಲಟ್ ಅನ್ನು ಹೊರ ಕಳಿಸಿ, ಗಗನಸಖಿ ಗೆಳತಿಯನ್ನು ಕರೆಸಿಕೊಳ್ಳುತ್ತಾರೆ. ವಿಮಾನ ಆಟೋ ಪೈಲಟ್ ಮೋಡ್‌ನಲ್ಲಿ ಇರುವಷ್ಟು ಹೊತ್ತು ಸರಸ ಸಲ್ಲಾಪಗಳಲ್ಲಿ ತೊಡಗಿರುತ್ತಾರೆ ಎಂದು ಸಿಯೆರಾ ಹೇಳಿದ್ದಾರೆ.
ವಿಮಾನಗಳಲ್ಲಿ ಪೈಲಟ್ ರೊಮ್ಯಾನ್ಸ್ ಸಾಮಾನ್ಯ
ವಿಮಾನವು ಸಾಮಾನ್ಯವಾಗಿ 35,000 ಅಡಿಗಳಷ್ಟು ಎತ್ತರವನ್ನು ತಲುಪಿದಾಗ ವಿಮಾನವನ್ನು ಆಟೋಪೈಲಟ್ ಮೋಡ್‌ಗೆ ಹಾಕಲಾಗುತ್ತದೆ. ದೀರ್ಘ ಪ್ರಯಾಣದ ಹಾರಾಟದ ಸಮಯದಲ್ಲಿ, ವಿಮಾನಕ್ಕೆ ನಿರಂತರ ಹಸ್ತಚಾಲಿತ ನಿಯಂತ್ರಣ ಅಗತ್ಯವಿರುವುದಿಲ್ಲ. ಆಗ ಕೆಲವೊಮ್ಮೆ ವಿಮಾನದ ಸಿಬ್ಬಂದಿ ಸದಸ್ಯರ ನಡುವೆ ರೋಮ್ಯಾನ್ಸ್ ನಡೆಯುತ್ತದೆ. ಆಟೋಪೈಲಟ್ ಆನ್ ಮಾಡಿದ ನಂತರ, ಈಗಾಗಲೇ ಪರಸ್ಪರ ಪ್ರೀತಿ ಹೊಂದಿರುವ ಕೆಲವು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ, 'ಹೈ ಮೈಲ್ ಕ್ಲಬ್' ಪಾರ್ಟಿಗಳಲ್ಲಿ ತೊಡಗುತ್ತಾರೆ ಈ ಘಟನೆಗಳು ಅಪರೂಪವಲ್ಲ ಅನೇಕ ದೀರ್ಘ ಪ್ರಯಾಣದ ವಿಮಾನಗಳಲ್ಲಿ ಇದು ಸಾಮಾನ್ಯವಾಗಿ ನಡೆಯುತ್ತಿರುತ್ತದೆ ಎಂದು ಸಿಯೆರಾ ಮಿಸ್ಟ್ ಹೇಳಿದ್ದಾಳೆ.
ಪರಸ್ಪರ ಒಪ್ಪಿಗೆ ಮೇರೆಗೆ ಸರಸ-ಸಲ್ಲಾಪ
ಪೈಲಟ್ ಮತ್ತು ನಿರ್ದಿಷ್ಟ ಏರ್‌ಹೊಸ್ಟೆಸ್ ಅಥವಾ ಇತರೆ ಸಿಬ್ಬಂದಿಗಳು ಪರಸ್ಪರ ಒಪ್ಪಿಗೆ ಮೇರೆಗೆ ಕಾಕ್ ಪೀಟ್ ನಲ್ಲಿ ಸರಸ-ಸಲ್ಲಾಪದಲ್ಲಿ ತೊಡಗುತ್ತಾರೆ. ಪೈಲಟ್ ಮತ್ತು ನಿರ್ಧಿಷ್ಟ ಗಗನಸಖಿ ನಡುವೆ ಪ್ರಣಯ ಸಂಬಂಧವಿದ್ದಂತಹ ಸಂದರ್ಭಗಳಲ್ಲಿ, ಸಹಾಯದ ಅಗತ್ಯವಿದೆ ಎಂಬ ನೆಪದಲ್ಲಿ ಖಾಸಗಿ ಕ್ಷಣವನ್ನು ಹೊಂದಲು ಈ ನಿಯಮವನ್ನು ನೆಪವಾಗಿ ಬಳಸಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ಕಾಕ್‌ಪಿಟ್ ಒಳಗೆ ಒಂದು ಪ್ರಣಯ ವಾತಾವರಣವು ಬೆಳೆಯುತ್ತದೆ. ಇದನ್ನು ವಿಮಾನ ಹಾರಾಟದ ಮೊದಲೇ ಫಿಕ್ಸ್ ಮಾಡಲಾಗುತ್ತದೆ. ಈ ಕಾಕ್‌ಪಿಟ್ ರೋಮ್ಯಾನ್ಸ್‌ಗಳು ವಿಮಾನ ಹಾರಾಟದ ಅಂತ್ಯದವರೆಗೆ ಅಥವಾ ಆಟೋಪೈಲಟ್ ಆಫ್ ಆಗುವವರೆಗೆ ಮತ್ತು ನಿಯಮಿತ ಮೇಲ್ವಿಚಾರಣೆ ಪ್ರಾರಂಭವಾಗುವವರೆಗೆ ಮುಂದುವರಿಯಬಹುದು ಎಂದು ಸಿಯೆರಾ ಮಿಸ್ಟ್ ಹೇಳಿದ್ದಾಳೆ.
ನಿಯಮವೇನು?
ಪ್ರಮಾಣಿತ ವಾಯುಯಾನ ಪ್ರೋಟೋಕಾಲ್ ಅಡಿಯಲ್ಲಿ, ಮತ್ತೊಬ್ಬ ಪೈಲಟ್ ಹೊರಗೆ ಬಂದಾಗ, ಉದಾಹರಣೆಗೆ, ಶೌಚಾಲಯಕ್ಕೆ ಹೋಗುವಂತಹ ಸಂದರ್ಭದಲ್ಲಿ, ಮತ್ತೊಬ್ಬ ಪೈಲಟ್‌ಗೆ ಫ್ಲೈಟ್ ಅಟೆಂಡೆಂಟ್ ಅನ್ನು ಕಾಕ್‌ಪಿಟ್‌ಗೆ ಕರೆಯಲು ಅವಕಾಶವಿದೆ ಎಂದು ಸಿಯೆರಾ ಮಿಸ್ಟ್ ಹೇಳಿದ್ದಾರೆ.
ಕಾಕ್ ಪೀಟ್ ಸೀಕ್ರೇಟ್ ಸ್ಥಳ
ಸಿಯೆರಾ ಮಿಸ್ಟ್ ಹೇಳಿರುವಂತೆ ದೀರ್ಘ ಪ್ರಯಾಣದ ವಿಮಾನಗಳಲ್ಲಿ ಕ್ಯಾಬಿನ್ ಸಿಬ್ಬಂದಿಗೆ ವಿಶ್ರಾಂತಿ ಪಡೆಯಲು ಮೀಸಲಾಗಿರುವ ಸ್ಥಳವಾದ ಕ್ರೂ ವಿಶ್ರಾಂತಿ ಡೆಕ್ ಅನ್ನು ಈ ರೀತಿಯ ಪ್ರಣಯದಾಟಕ್ಕೆ ಬಳಸಿಕೊಳ್ಳಲಾಗುತ್ತದೆಯಂತೆ. ಈ ಡೆಕ್ ಸಾಮಾನ್ಯವಾಗಿ ವಿಮಾನ ಪ್ರಯಾಣಿಕರಿಗೆ ಗೋಚರಿಸುವುದಿಲ್ಲ ಮತ್ತು ಅಧಿಕೃತ ಸಿಬ್ಬಂದಿಗಳು ಮಾತ್ರ ಇದನ್ನು ಪ್ರವೇಶಿಸಬಹುದು ಎಂದು ಆಕೆ ಹೇಳಿದ್ದಾರೆ.
Advertisement