

ಲಾಸ್ ಏಂಜಲೀಸ್: "ದಿ ಪ್ರಿನ್ಸೆಸ್ ಬ್ರೈಡ್," "ವೆನ್ ಹ್ಯಾರಿ ಮೆಟ್ ಸ್ಯಾಲಿ..." ಮತ್ತು "ದಿಸ್ ಈಸ್ ಸ್ಪೈನಲ್ ಟ್ಯಾಪ್" ನಂತಹ ಚಲನಚಿತ್ರಗಳ ಮೂಲಕ ತಮ್ಮ ಪೀಳಿಗೆಯ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿದ್ದ ರಾಬ್ ರೀನರ್ ಮತ್ತು ಅವರ ಪತ್ನಿ ಮೈಕೆಲ್ ಶವವಾಗಿ ಪತ್ತೆಯಾಗಿದ್ದು, ಡಬಲ್ ಮರ್ಡರ್ ಶಂಕೆ ವ್ಯಕ್ತವಾಗಿದೆ.
78 ವರ್ಷದ ರೀನರ್ ಮತ್ತು ಅವರ ಪತ್ನಿ ಮೈಕೆಲ್ ಸಿಂಗರ್, ಲಾಸ್ ಏಂಜಲೀಸ್‌ನ ಬ್ರೆಂಟ್‌ವುಡ್ ನಲ್ಲಿರುವ ಅವರ ಮನೆಯಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಮೃತರು ರೀನರ್ ಮತ್ತು ಸಿಂಗರ್ ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಆದರೆ ತನಿಖೆಯ ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳು "ಸ್ಪಷ್ಟ ನರಹತ್ಯೆಯ" ತನಿಖೆ ನಡೆಸುತ್ತಿದ್ದಾರೆ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಕ್ಯಾಪ್ಟನ್ ಮೈಕ್ ಬ್ಲಾಂಡ್ ಅವರು ತಿಳಿಸಿದ್ದಾರೆ.
ರಾಬ್ ರೀನರ್ ಒಬ್ಬ ನಟ, ನಿರ್ದೇಶಕ ಮತ್ತು ಹೋರಾಟಗಾರಾಗಿದ್ದರು, ಐಕಾನಿಕ್ ರೊಮ್ಯಾಂಟಿಕ್ ಹಾಸ್ಯ “ವೆನ್ ಹ್ಯಾರಿ ಮೆಟ್ ಸ್ಯಾಲಿ” ನಿರ್ದೇಶನ ಮತ್ತು 1970 ರ ದಶಕದ ಸಿಬಿಎಸ್ ಸಿಟ್‍ಕಾಮ್ “ಆಲ್ ಇನ್ ದಿ ಫ್ಯಾಮಿಲಿ” ನಲ್ಲಿ ಅವರ ಆರಂಭಿಕ ನಟನೆಯ ಯಶಸ್ಸಿಗೆ ಹೆಸರುವಾಸಿಯಾಗಿದ್ದರು.
ಪ್ರಸಿದ್ಧ ಹಾಸ್ಯನಟ ಮತ್ತು ಬರಹಗಾರ ಕಾರ್ಲ್ ರೀನರ್ ಅವರ ಮಗನಾದ ರಾಬ್ ರೀನರ್ ಅವರು ಹಾಲಿವುಡ್‍ನಲ್ಲಿ ಸುದೀರ್ಘ ವೃತ್ತಿಜೀವನವನ್ನು ನಡೆಸಿದ್ದಾರೆ. ಸ್ಲೀಪ್‍ಲೆಸ್ ಇನ್ ಸಿಯಾಟಲ್ (1993), ಬುಲೆಟ್ಸ್ ಓವರ್ ಬ್ರಾಡ್‍ವೇ (1994), ಇಆಣv (1999), ಎವ್ರಿವನ್ಸ್ ಹೀರೋ (2006), ಮತ್ತು ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ (2013) ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Advertisement