

ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯನ್ನು ಹಳಿತಪ್ಪಿಸಲು ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಒಂದು ಗುಂಪು ನನ್ನ ತಮ್ಮನನ್ನು ಹತ್ಯೆ ಮಾಡಿದೆ ಎಂದು ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸೋದರ ಆರೋಪಿಸಿದ್ದಾರೆ.
ನಿಮ್ಮ ಆಡಳಿತದಲ್ಲಿ ಉಸ್ಮಾನ್ ಹತ್ಯೆಯಾಗಿದೆ. ನಿಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳಬೇಡಿ, ನೀವು ನ್ಯಾಯವನ್ನು ಎದುರಿಸಬೇಕಾಗುತ್ತದೆ. ಎರಡು ತಿಂಗಳ ನಂತರ ನೀವು ದೇಶವನ್ನು ತೊರೆಯುತ್ತೀರಿ ಎಂದು ನೀವು ಭಾವಿಸಿದರೆ, ಅದು ಸಾಧ್ಯವಾಗುವುದಿಲ್ಲ ಎಂದು ಬಾಂಗ್ಲಾದೇಶದ ಮಾಧ್ಯಮ ಷರೀಫ್ ಒಮರ್ ಹಾದಿ ಹೇಳಿದ್ದಾರೆ.
ಹಾದಿಯನ್ನು ಕೊಂದಿದ್ದೇ ನೀವು. ಈಗ ನೀವು ಬಾಂಗ್ಲಾದೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಳಿತಪ್ಪಿಸಲು ಆತನ ಸಾವಿನ ವಿಷಯ ಬಳಸುತ್ತಿದ್ದೀರಿ ಎಂದು ಉಸ್ಮಾನ್ ಹಾದಿ ಅವರ ಸಹೋದರ ಹೇಳಿದ್ದಾರೆ.
ಕಳೆದ ವರ್ಷ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಲು ಕಾರಣವಾದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳ ಪ್ರಮುಖ ನಾಯಕ ಹಾದಿಯನ್ನು ಡಿಸೆಂಬರ್ 12 ರಂದು ಮಧ್ಯ ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಸುಕುಧಾರಿ ಬಂದೂಕುಧಾರಿಗಳು ತಲೆಗೆ ಗುಂಡು ಹಾರಿಸಿದ್ದರು.
32 ವರ್ಷದ ಇಂಕಿಲಾಬ್ ಮಂಚ ವಕ್ತಾರ ಉಸ್ಮಾನ್ ಹಾದಿ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮುಂದಿನ ವರ್ಷ ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಹಾದಿ ಅಭ್ಯರ್ಥಿಯಾಗಿದ್ದರು.
ಹಾದಿ ಅವರ ನಿಧನಕ್ಕೆ ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ ಶನಿವಾರ ರಾಷ್ಟ್ರವ್ಯಾಪಿ ಶೋಕಾಚರಣೆಯನ್ನು ಆಯೋಜಿಸಿತು. ಢಾಕಾ ಮತ್ತು ಇತರ ಪ್ರಮುಖ ನಗರಗಳಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ಕಾರಣ, ಹಾದಿ ಹಂತಕರನ್ನು ಪತ್ತೆಹಚ್ಚಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದರು.
Advertisement