Osman Hadi ಕೊಲೆಗಾರ ಭಾರತದಲ್ಲಿದ್ದಾನೆ ಎಂದ ಬಾಂಗ್ಲಾದೇಶಕ್ಕೆ ತೀವ್ರ ಮುಖಭಂಗ; ದುಬೈನಲ್ಲಿ ಲೈವ್ ಬಂದು ಸ್ಪಷ್ಟನೆ..! ಹೇಳಿದ್ದೇನು?

ಡಿಸೆಂಬರ್ 12 ರಂದು ಹಾದಿ ಮೇಲೆ ನಡೆದ ದಾಳಿಯ ನಂತರ ಮಸೂದ್ ಮತ್ತು ಮತ್ತೊಬ್ಬ ಶಂಕಿತ ಅಲಂಗೀರ್ ಶೇಖ್ ದೇಶ ಬಿಟ್ಟು ಪಲಾಯನ ಮಾಡಿ, ಹಲುಘಾಟ್ ಗಡಿಯ ಮೂಲಕ ಭಾರತಕ್ಕೆ ತಲುಪಿದ್ದಾರೆ ಎಂದು ಬಾಂಗ್ಲಾದೇಶ ಪೊಲೀಸರು ಆರೋಪಿಸಿದ್ದರು.
Osman Hadi's alleged killer claims he is in Dubai
ಹಾದಿ ಕೊಲೆ ಪ್ರಕರಣದ ಆರೋಪಿ ಮಸೂದ್
Updated on

ನವದೆಹಲಿ: ಬಾಂಗ್ಲಾದೇಶದ ವಿದ್ಯಾರ್ಥಿ ದಂಗೆಯ ನಾಯಕ ಒಸ್ಮಾನ್ ಹಾದಿ ಹತ್ಯೆಯಲ್ಲಿ ಪ್ರಮುಖ ಶಂಕಿತ ಆರೋಪಿ ದುಬೈನಿಂದ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಹತ್ಯೆಯಲ್ಲಿ ಯಾವುದೇ ರೀತಿಯಲ್ಲಿ ನಾನು ಭಾಗಿಯಾಗಿಲ್ಲ ಎಂದು ಹೇಳಿದ್ದಾನೆ.

ಹೌದು.. ಡಿಸೆಂಬರ್ 12 ರಂದು ಹಾದಿ ಮೇಲೆ ನಡೆದ ದಾಳಿಯ ನಂತರ ಮಸೂದ್ ಮತ್ತು ಮತ್ತೊಬ್ಬ ಶಂಕಿತ ಅಲಂಗೀರ್ ಶೇಖ್ ದೇಶ ಬಿಟ್ಟು ಪಲಾಯನ ಮಾಡಿ, ಹಲುಘಾಟ್ ಗಡಿಯ ಮೂಲಕ ಭಾರತಕ್ಕೆ ತಲುಪಿದ್ದಾರೆ ಎಂದು ಬಾಂಗ್ಲಾದೇಶ ಪೊಲೀಸರು ಆರೋಪಿಸಿದ್ದರು.

ಭಾರತೀಯ ಭದ್ರತಾ ಅಧಿಕಾರಿಗಳು, ಗಡಿ ಭದ್ರತಾ ಪಡೆ ಮತ್ತು ಮೇಘಾಲಯ ಪೊಲೀಸರು ಇಬ್ಬರು ಭಾರತಕ್ಕೆ ಬಂದಿಲ್ಲ, ಬಾಂಗ್ಲಾ ಹೇಳಿಕೊಂಡಿರುವುದು ಆಧಾರರಹಿತವೆಂದು ತಳ್ಳಿಹಾಕಿದ್ದರು.

ಇದರ ನಡುವೆಯೇ ಪ್ರಮುಖ ಯುವ ನಾಯಕ ಉಸ್ಮಾನ್ ಹಾದಿ ಹತ್ಯೆಯ ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಬಾಂಗ್ಲಾದೇಶ ಪೊಲೀಸರು ಹೇಳಿಕೊಂಡ ಕೆಲವು ದಿನಗಳ ನಂತರ, ಅವರಲ್ಲಿ ಒಬ್ಬರಾದ ಫೈಸಲ್ ಕರೀಮ್ ಮಸೂದ್ ಬುಧವಾರ ತಾವು ದುಬೈನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ಫೈಸಲ್ ಕರೀಮ್ ಮಸೂದ್, ಆನ್‌ಲೈನ್‌ನಲ್ಲಿ ವಿಡಿಯೋದಲ್ಲಿ, ತಾನು ಪ್ರಸ್ತುತ ದುಬೈನಲ್ಲಿದ್ದೇನೆ ಮತ್ತು ಈ ಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಮಾತ್ರವಲ್ಲದೆ ಜಮಾತ್ ಶಿಬಿರ್ ಮೇಲೆ ಆರೋಪ ಹೊರಿಸಿ ಹಾದಿಯೊಂದಿಗಿನ ನನ್ನ ಸಂಬಂಧಗಳು ಕಟ್ಟುನಿಟ್ಟಾಗಿ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಹೇಳಿದ್ದಾನೆ.

Osman Hadi's alleged killer claims he is in Dubai
ಉಸ್ಮಾನ್ ಹಾದಿ ಹತ್ಯೆ: ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಮೂಲಕ ಭಾರತಕ್ಕೆ ಪರಾರಿ- ಬಾಂಗ್ಲಾದೇಶ ಪೊಲೀಸ್

''ನಾನು ಹಾದಿಯನ್ನು ಹತ್ಯೆಗೈದಿಲ್ಲ. ನನ್ನ ಕುಟುಂಬ ಮತ್ತು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ನನ್ನನ್ನು ರಕ್ಷಿಸಿಕೊಳ್ಳಲು ನಾನು ದುಬೈಗೆ ಬಂದಿದ್ದೇನೆ. ಹಾದಿ ಜಮಾತ್‌ನ ಉತ್ಪನ್ನ. ಬಹುಶಃ ಇದರ ಹಿಂದೆ ಜಮಾತಿಗಳು ಇದ್ದಿರಬಹುದು” ಎಂದು ಹೇಳಿಕೊಂಡಿದ್ದಾನೆ.

X ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶ ಅಪ್ಲೋಡ್ ಮಾಡಿರುವ ಈತ ಹಾದಿ ಹತ್ಯೆಯಲ್ಲಿ ಮಸೂದ್ ಯಾವುದೇ ಪಾತ್ರವನ್ನು ನಿರಾಕರಿಸಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು ಮತ್ತು ದೇಶದಲ್ಲಿ ಭಾರತ ವಿರೋಧಿ ಭಾವನೆಗಳನ್ನು ತೀವ್ರಗೊಳಿಸಿತು ಎಂದು ಹೇಳಿಕೊಂಡಿದ್ದಾನೆ.

ವಿಡಿಯೋದಲ್ಲಿ ಹೇಳಿದ್ದೇನು?

"ನಾನು ಫೈಸಲ್ ಕರೀಮ್ ಮಸೂದ್. ಹಾದಿ ಹತ್ಯೆಯಲ್ಲಿ ನಾನು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಈ ಪ್ರಕರಣವು ಸಂಪೂರ್ಣವಾಗಿ ಸುಳ್ಳು ಮತ್ತು ಕಟ್ಟುಕಥೆ ಪಿತೂರಿಯನ್ನು ಆಧರಿಸಿದೆ" ಎಂದು ಮಸೂದ್ ವೀಡಿಯೊದಲ್ಲಿ ಹೇಳಿದ್ದಾರೆ.

ಢಾಕಾ ಪೊಲೀಸರು ನನ್ನನ್ನು ಹಿಡಿಯಲು ಭಾರತವನ್ನು ಪ್ರವೇಶಿಸಿದ್ದಾರೆ ಎಂಬ ಹೇಳಿಕೆಗೆ ವ್ಯತಿರಿಕ್ತವಾಗಿ, ಮಸೂದ್, "ಈ ಸುಳ್ಳು ಸೂಚನೆಯಿಂದಾಗಿ, ನಾನು ದೇಶವನ್ನು ತೊರೆದು ದುಬೈಗೆ ಬರಬೇಕಾಯಿತು. ನಾನು ಮಾನ್ಯ ಐದು ವರ್ಷಗಳ ಬಹು-ಪ್ರವೇಶ ದುಬೈ ವೀಸಾವನ್ನು ಹೊಂದಿದ್ದರೂ ಸಹ, ನಾನು ಬಹಳ ಕಷ್ಟದಿಂದ ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದರು.

ಹಾದಿ ಕಚೇರಿಗೆ ಹೋಗಿದ್ದು ನಿಜ..

"ಹೌದು, ನಾನು ಹಾದಿಯ ಕಚೇರಿಗೆ ಹೋಗಿದ್ದೆ. ನಾನು ಒಬ್ಬ ಉದ್ಯಮಿ; ನಾನು ಐಟಿ ಸಂಸ್ಥೆಯ ಮಾಲೀಕ, ಮತ್ತು ನಾನು ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಉದ್ಯೋಗದಲ್ಲಿದ್ದೆ. ಉದ್ಯೋಗಾವಕಾಶಕ್ಕಾಗಿ ನಾನು ಹಾದಿಯನ್ನು ಭೇಟಿಯಾಗಲು ಹೋಗಿದ್ದೆ. ಅವರು ಕೆಲಸವನ್ನು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ಮುಂಗಡ ಪಾವತಿ ಕೇಳಿದರು.

ಅದರ ಪ್ರಕಾರ, ನಾನು ಅವರಿಗೆ 500,000 ಟಾಕಾ ನೀಡಿದ್ದೇನೆ. ಅವರು ತಮ್ಮ ವಿವಿಧ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವಂತೆಯೂ ನನ್ನನ್ನು ಕೇಳಿದರು. ಅವರು ಕೇಳಿದಾಗಲೆಲ್ಲಾ ನಾನು ಹಣವನ್ನು ನೀಡಿದ್ದೇನೆ. ಕಳೆದ ಶುಕ್ರವಾರವಷ್ಟೇ, ಅವರ ಕಾರ್ಯಕ್ರಮಗಳಲ್ಲಿ ಒಂದಕ್ಕೆ ನಾನು ಅವರಿಗೆ ಹಣವನ್ನು ನೀಡಿದ್ದೇನೆ" ಎಂದು ಹೇಳಿದರು.

ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ಸಂಘಟನೆಯಿಂದಲೇ ಕೊಲೆ

ಇನ್ನು ಹಾದಿಯನ್ನು ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿಯ ಸಂಘಟನೆಯೇ ಕೊಲೆ ಮಾಡಿದೆ ಎಂದು ಮಸೂದ್ ಆರೋಪಿಸಿದ್ದಾರೆ. "ಈ ಘಟನೆ ಜಮಾತ್‌ನ ಕೆಲಸ. ನಾನು ಅಥವಾ ನನ್ನ ಕಿರಿಯ ಸಹೋದರ ಆ ಮೋಟಾರ್‌ಸೈಕಲ್‌ನಲ್ಲಿ ಇರಲಿಲ್ಲ, ಮತ್ತು ನಮ್ಮನ್ನು ಉದ್ದೇಶಪೂರ್ವಕವಾಗಿ ಆರೋಪಿಸಲಾಗಿದೆ. ನನ್ನ ಕುಟುಂಬವು ಅನ್ಯಾಯವಾಗಿ ಬಳಲುತ್ತಿದೆ. ಈ ಮಟ್ಟದ ಕಿರುಕುಳವು ತೀವ್ರವಾಗಿ ತೊಂದರೆದಾಯಕವಾಗಿದೆ ಮತ್ತು ಸ್ವೀಕಾರಾರ್ಹವಲ್ಲ" ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com