
ಬ್ರೆಜಿಲ್ : ಅದೆಷ್ಟು ವಿಚಿತ್ರ ರೀತಿಯಲ್ಲಿ ಸಾವು ಸಂಭವಿಸಬಹುದು ಎಂಬುದು ಊಹೆಗೂ ನಿಲುಕದ್ದು ಎಂಬುದನ್ನು ಈ ವಿಲಕ್ಷಣ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನೀಲಿ ಚಿತ್ರ ತಾರೆ Threesome ಚಿತ್ರೀಕರಣದ ವೇಳೆ ಸಾವನ್ನಪ್ಪಿದ್ದಾರೆ!
27 ವರ್ಷದ ನೀಲಿ ಚಿತ್ರತಾರೆ, ಆನ್ ಲೈನ್ ನಲ್ಲಿ Anna Polly ಎಂದೇ ಖ್ಯಾತರಾಗಿರುವ ಆ್ಯನಾ ಬಿಯಾಟ್ರಿಜ್ ಪೆರೇರಾ ಅಲ್ವೇಸ್ (Anna Beatriz Pereira Alves) ಮೃತ ದುರ್ದೈವಿ.
ಇಬ್ಬರು ಪುರುಷ ನೀಲಿ ಚಿತ್ರತಾರೆಯರೊಂದಿಗೆ Threesome ಚಿತ್ರೀಕರಣದಲ್ಲಿ ತೊಡಗಿದ್ದಾಗ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಾವು ನಿಗೂಢ ರೀತಿಯಲ್ಲಿ ಸಂಭವಿಸಿರುವುದರಿಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜ.23ರಂದು ಈ ಘಟನೆ ನಡೆದಿದ್ದು, ಚಿತ್ರೀಕರಣದ ವೇಳೆ ಆಕೆಯೊಂದಿಗೆ ನಟಿಸುತ್ತಿದ್ದ ಇನ್ನಿಬ್ಬರು ಪುರುಷ ನಟರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಹೇಳಿಕೆ ದಾಖಲಿಸಿಕೊಳ್ಳುವಾಗ, ಇಬ್ಬರು ಪುರುಷ ನಟರು ಭಿನ್ನ ಹೇಳಿಕೆ ನೀಡಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
Advertisement