ವಾಷಿಂಗ್ಟನ್: 6 ತಿಂಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದ ಖ್ಯಾತ ನೀಲಿ ಚಿತ್ರ ತಾರೆ Sophia Leone ಸಾವಿನ ಕುರಿತಂತೆ ಹಲವು ಊಹಾಪೋಹಗಳು ಎದ್ದಿರುವಂತೆಯೇ ಆಕೆಯ ಸಾವಿಗೆ ಅಧಿಕಾರಿಗಳು ನಿಖರ ಕಾರಣ ಬಹಿರಂಗ ಪಡಿಸಿದ್ದಾರೆ.
ಹೌದು.. ವಯಸ್ಕ ಚಲನಚಿತ್ರ ತಾರೆ ಸೋಫಿಯಾ ಲಿಯೋನ್ ಸಾವಿನ ಆರು ತಿಂಗಳ ನಂತರ ಆಕೆಯ ಸಾವಿಗೆ ಕಾರಣ ಬಹಿರಂಗವಾಗಿದ್ದು, TMZ ಪ್ರಕಾರ, 26 ವರ್ಷದ ಸೋಫಿಯಾ ಲಿಯೋನ್ ಸಾವಿಗೆ ಔಷಧದ ಮಿತಿಮೀರಿದ ಸೇವನೆಯೇ ಕಾರಣ ಎಂದು ಹೇಳಲಾಗಿದೆ. ಸೋಫಿಯಾ ಲಿಯೋನ್ ಮೃತ ದೇಹವು ಮಾರ್ಚ್ 1 ರಂದು ಅವರ ನ್ಯೂ ಮೆಕ್ಸಿಕೊದ ಮನೆಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಆರಂಭದಲ್ಲಿ ಅವರ ಸಾವನ್ನು "ಅನುಮಾನಾಸ್ಪದ" ಎಂದು ಪರಿಗಣಿಸಿದ್ದರು.
ಇದೀಗ ಸುದೀರ್ಘ 6 ತಿಂಗಳ ತನಿಖೆ ಬಳಿಕ ಆಕೆ ಡ್ರಗ್ ಓವರ್ ಡೋಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿದೆ. ತನಿಖಾಧಿಕಾರಿಗಳ ಪ್ರಕಾರ ಸೋಫಿಯೋ ಲಿಯೋನ್ ಮದ್ಯಪ್ರಿಯೆಯಾಗಿದ್ದಳು. ಖಿನ್ನತೆಗೆ ಗುರಿಯಾಗಿ ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರು ಎಂದು ಆಕೆಯ ತಾಯಿ ಈ ಹಿಂದೆ ಬಹಿರಂಗಪಡಿಸಿದ್ದರು. ಆದರೆ ಇದೀಗ ಆಕೆ ಡ್ರಗ್ ಓವರ್ ಡೋಸ್ ನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆಕೆ ಯಾವ ಪದಾರ್ಥಗಳನ್ನು ಸೇವಿಸಿದ್ದಾಳೆ ಎಂಬುದು ಸ್ಪಷ್ಟವಾಗಿಲ್ಲ.
ಸ್ಮಾರಕಕ್ಕಾಗಿ ಹಣ ಸಂಗ್ರಹಿಸುತ್ತಿರುವ ಮಲತಂದೆ
ಇನ್ನು ಸೋಫಿಯಾ ಲಿಯೋನ್ ಸಾವಿನ ಬಳಿಕ ಆಕೆಯ ಸ್ಮಾರಕ ನಿರ್ಮಾಣಕ್ಕೆ ಆಕೆಯ ಮಲತಂದೆ ಮೈಕ್ ರೊಮೆರೊ ಅವರು GoFundMe ನಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ದಾನಿಗಳಿಂದ ಮೈಕ್ ರೊಮೆರೊ ಹಣ ಸಂಗ್ರಹಿಸುತ್ತಿದ್ದು ಇದು ಆಕೆಯ ಸಮಾಧಿ ನಿರ್ಮಿಸಲು ಮೀಸಲಿಡುತ್ತೇನೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಸೋಫಿಯಾ ಲಿಯೋನ್ ತಮ್ಮ ಸಾಕು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಹೆಚ್ಚಾಗಿ ಹೊರಗೆ ಸುತ್ತುವುದನ್ನು ಆಕೆ ಇಷ್ಟಪಡುತ್ತಿದ್ದಳು. ತನ್ನ ಸುತ್ತಲಿರುವ ಎಲ್ಲರನ್ನು ನಗಿಸುವ ಗುಣ ಹೊಂದಿದ್ದಳು ಎಂದು ರೊಮೆರೊ ನಿಧಿಸಂಗ್ರಹ ಪುಟದಲ್ಲಿ ಬರೆದಿದ್ದಾರೆ.
ಅಂದಹಾಗೆ ಸೋಫಿಯಾ ಲಿಯೋನ್ಜೂನ್ 10, 1997 ರಂದು ಅಮೆರಿಕದ ಮಿಯಾಮಿಯಲ್ಲಿ ಜನಿಸಿದ್ದರು. ತಮ್ಮ 18 ನೇ ವಯಸ್ಸಿನಲ್ಲಿ ವಯಸ್ಕ ಮನರಂಜನಾ ಉದ್ಯಮಕ್ಕೆ ಆಕೆ ಕಾಲಿಟ್ಟಿದ್ದಳು. ಅಂತೆಯೇ ಆಕೆ ಸುಮಾರು $ 1 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಳು ಎಂದು ವರದಿಯಾಗಿದೆ. ಮಾಡೆಲಿಂಗ್ ಏಜೆನ್ಸಿ 101 ಒಪ್ಪಂದ ಕೂಡ ಹೊಂದಿದ್ದ ಸೋಫಿಯಾ ಲಿಯೋನ್, 80 ಕ್ಕೂ ಹೆಚ್ಚು ನೀಲಿ ಚಿತ್ರಗಳಲ್ಲಿ ನಟಿಸಿದ್ದಾರೆ.
ತನ್ನ ಸಾವಿನ ಮೊದಲು ತನ್ನ ಕೊನೆಯ ಪೋಸ್ಟ್‌ನಲ್ಲಿ, ಲಿಯೋನ್ ತನ್ನ ಅಭಿಮಾನಿಗಳಿಗೆ "ಹೊರಗೆ ಹೋಗಿ ಮತ್ತು ಜೀವನವನ್ನು ಸ್ವಲ್ಪ ಹೆಚ್ಚುವರಿಯಾಗಿ ಎಂಜಾಯ್ ಮಾಡಿ ಆನಂದಿಸಿ" ಎಂದು ಪೋಸ್ಟ್ ಮಾಡಿದ್ದರು.
Advertisement