
ಗಾಜಾ ಪಟ್ಟಿ: ಗಾಜಾಪಟ್ಟಿಯಲ್ಲಿ ಕದನ ವಿರಾಮ ಒಪ್ಪಂದದ ಭಾಗವಾಗಿ ಡಜನ್‌ಗಟ್ಟಲೆ ಪ್ಯಾಲೇಸ್ಟಿನಿಯನ್ ಕೈದಿಗಳಿಗಾಗಿ ಹಮಾಸ್ ಬಂಡುಕೋರರು ಶನಿವಾರ ಮತ್ತೆ ಮೂವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇವರೆಲ್ಲರೂ ಇಸ್ರೇಲಿ ನಾಗರಿಕರಾಗಿದ್ದಾರೆ.
ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದ್ದ ಎಲಿ ಶರಾಬಿ (52) ಓಹದ್ ಬೆನ್ ಅಮಿ (56) ಮತ್ತು ಓರ್ ಲೆವಿ (34) ಅವರನ್ನು ಶಸ್ತ್ರಸಜ್ಜಿತ ಹಮಾಸ್ ಬಂಡುಕೋರರು ಬಿಳಿ ವ್ಯಾನ್‌ನಿಂದ ದೇರ್ ಅಲ್-ಬಾಲಾಹ್ ಪಟ್ಟಣದಲ್ಲಿನ ವ್ಯವಸ್ಥೆ ಮಾಡಲಾಗಿದ್ದ ವೇದಿಕೆಗೆ ಕರೆದೊಯ್ಯುತ್ತಿದ್ದಂತೆ ಧೈರ್ಯಶಾಲಿ ಮತ್ತು ದೈಹಿಕವಾಗಿ ಬಳಲಿದಂತೆ ಕಂಡುಬಂದರು.
ಕದನ ವಿರಾಮದ ಅವಧಿಯಲ್ಲಿ ಇಲ್ಲಿಯವರೆಗೂ ಬಿಡುಗಡೆಯಾಗಿರುವ ಇತರ 18 ಒತ್ತೆಯಾಳುಗಳ ಪೈಕಿ ಈ ಮೂವರು ದೈಹಿಕವಾಗಿ ತುಂಬಾ ಬಳಲಿದಂತೆ ಕಾಣಿಸಿಕೊಂಡರು. ಇವರೆಲ್ಲರನ್ನೂ ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಅದು ಯುದ್ಧಕ್ಕೆ ಕಾರಣವಾಯಿತು.
ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸುವ ಮುನ್ನಾ ನೂರಾರು ಜನರ ಮುಂದೆ ಹಮಾಸ್ ಬಂಡುಕೋರರು ಮೈಕ್ರೋಫೋನ್ ಮೂಲಕ ಮಾತನಾಡಿದರು. ಕದನ ವಿರಾಮದ ಈ ಹಂತದಲ್ಲಿ ಒತ್ತೆಯಾಳುಗಳು ಬಿಡುಗಡೆಯ ಸಮಯದಲ್ಲಿ ಹಮಾಸ್ ಬಂಡುಕೋರರು ಇದೇ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡಿದರು.
ಪ್ಯಾಲೇಸ್ಟಿನಿಯನ್ ಜನರನ್ನು ಗಾಜಾದಿಂದ ಹೊರಗೆ ವರ್ಗಾಯಿಸುವ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಇಸ್ರೇಲ್ ಸ್ವಾಗತಿಸಿದೆ ಆದರೆ ಪ್ಯಾಲೇಸ್ಟಿನಿಯನ್ನರು ಮತ್ತು ಅಂತರರಾಷ್ಟ್ರೀಯ ಸಮುದಾಯದಿಂದ ತೀವ್ರವಾಗಿ ತಿರಸ್ಕರಿಸಲ್ಪಟ್ಟಿದೆ. ಇದು ಮಾರ್ಚ್ ಆರಂಭದವರೆಗೆ ನಡೆಯುವ ಕದನ ವಿರಾಮದ ಹಂತದ ಮೇಲೆ ಪರಿಣಾಮ ಬೀರಿಲ್ಲ.
ಶನಿವಾರ ಒತ್ತೆಯಾಳುಗಳ ಬಿಡುಗಡೆಗೂ ಕೆಲ ತಾಸುಗಳ ಮುನ್ನಾ ಮುಖವಾಡ ಧರಿಸಿದ ಶಸ್ತ್ರಸಜ್ಜಿತ ಹಮಾಸ್ ಬಂಡುಕೋರರಿದ್ದ ಬಿಳಿ ಬಣ್ಣದ ಟ್ರಕ್ ಗಳು ಸೆಂಟ್ರಲ್ ಗಾಜಾದಲ್ಲಿನ ಪ್ರದೇಶದ ಮುಖ್ಯ ಉತ್ತರ-ದಕ್ಷಿಣ ಹೆದ್ದಾರಿಯ ಬಳಿಯ ಹಸ್ತಾಂತರ ಸ್ಥಳದಲ್ಲಿ ಸಾಲಾಗಿ ನಿಂತಿದ್ದವು.
ಜನವರಿ 19 ರಂದು ಕದನ ವಿರಾಮ ಪ್ರಾರಂಭವಾದಾಗಿನಿಂದ ಇದು ಪ್ಯಾಲೇಸ್ಟಿನಿಯನ್ ಕೈದಿಗಳಿಗಾಗಿ ಹಮಾಸ್ ನಿಂದ ಐದನೇಯ ಬಿಡುಗಡೆಯಾಗಿದೆ. ಶನಿವಾರಕ್ಕೂ ಮುನ್ನಾ 18 ಒತ್ತೆಯಾಳುಗಳು ಮತ್ತು 550 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಕದನ ವಿರಾಮದ ಮೊದಲ ಹಂತದಲ್ಲಿ 33 ಒತ್ತೆಯಾಳುಗಳನ್ನು ಮತ್ತು ಸುಮಾರು 2,000 ಕೈದಿಗಳನ್ನು ಬಿಡುಗಡೆ ಮಾಡಲು, ಉತ್ತರ ಗಾಜಾಕ್ಕೆ ಪ್ಯಾಲೆಸ್ಟೀನಿಯಾದವರನ್ನು ಹಿಂದಿರುಗಿಸಲು ಮತ್ತು ಹಾನಿಯಾದ ಪ್ರದೇಶಕ್ಕೆ ಮಾನವೀಯ ನೆರವಿನ ಹೆಚ್ಚಳಕ್ಕೆ ಕರೆ ನೀಡಲಾಗಿದೆ. ಕಳೆದ ವಾರ, ಗಾಯಗೊಂಡ ಪ್ಯಾಲೆಸ್ಟೀನಿಯಾದವರಿಗೆ ಮೇ ನಂತರ ಮೊದಲ ಬಾರಿಗೆ ಗಾಜಾದಿಂದ ಈಜಿಪ್ಟ್‌ಗೆ ಹೋಗಲು ಅನುಮತಿ ನೀಡಲಾಗಿತ್ತು.
Advertisement