ಗ್ವಾಟೆಮಾಲಾ: ಸೇತುವೆಯಿಂದ ಕಂದಕಕ್ಕೆ ಉರುಳಿದ ಬಸ್: 55ಕ್ಕೂ ಅಧಿಕ ಮಂದಿ ಸಾವು

75 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಉರುಳಿಬಿದ್ದಿದೆ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
 bus plunges off bridge
ಕಂದಕಕ್ಕೆ ಉರುಳಿದ ಬಸ್
Updated on

ಗ್ವಾಟೆಮಾಲಾ: ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಸೋಮವಾರ ಬೆಳಿಗ್ಗೆ ಬಸ್ಸೊಂದು ಸೇತುವೆಯಿಂದ ಉರುಳಿಬಿದ್ದು, 53ಕ್ಕೂ ಅಧಿಕ ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

75 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಉರುಳಿಬಿದ್ದಿದೆ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಈವರೆಗೆ ಬಸ್ಸಿನಿಂದ 53 ಶವಗಳನ್ನು ಹೊರತೆಗೆಯಲಾಗಿದೆ. ಬಸ್‌ನಲ್ಲಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ನಗರದ ಅಗ್ನಿಶಾಮಕ ದಳದ ವಕ್ತಾರ ಮೈನೋರ್ ರುವಾನೋ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಹಲವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ರುವಾನೋ ಹೇಳಿದ್ದಾರೆ. ಬೆಳಗಿನ ಜಾವದಲ್ಲಿ ಬಹು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆಯಿಂದ ಹೊರಟು ಸೇತುವೆಯ ಕೆಳಗಿನ ಕಡಿದಾದ ಕಮರಿಗೆ ಉರುಳಿತು. ಬಸ್ಸು 115 ಅಡಿ (35 ಮೀಟರ್) ಆಳದ ಕೊಳಚೆ ನೀರು ತುಂಬಿದ ಕಂದಕಕ್ಕೆ ತಲೆಕೆಳಗಾಗಿ ಬಿದ್ದು ಅರ್ಧ ಮುಳುಗಿತ್ತು. ಗ್ವಾಟೆಮಾಲಾ , ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹೊಂದಿದೆ.

 bus plunges off bridge
ಫಿಲಿಡೆಲ್ಫಿಯಾದಲ್ಲಿ ಮೆಡಿಕಲ್ ಜೆಟ್ ಪತನ: ಆರು ಮಂದಿ ಸಾವು; ಹಲವು ಮನೆಗಳಿಗೆ ಬೆಂಕಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com