ಪ್ಯಾಲೆಸ್ತೀನಿಯರು ಗಾಜಾಗೆ ಮರಳಲು ಯಾವುದೇ ಹಕ್ಕು ಇಲ್ಲ: ಡೊನಾಲ್ಡ್ ಟ್ರಂಪ್

ನಾನು ಅವರಿಗೆ ಶಾಶ್ವತ ಸ್ಥಳವನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದೇನೆ ಏಕೆಂದರೆ ಅವರು ಈಗ ಹಿಂತಿರುಗಬೇಕಾದರೆ, ಅದು ವಾಸಯೋಗ್ಯವಲ್ಲ ಎಂದಿದ್ದಾರೆ.
US President Trump and Israeli Prime Minister Netanyahu
ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು
Updated on

ವಾಷಿಂಗ್ಟನ್: ಯುಎಸ್ ಸ್ವಾಧೀನ ಯೋಜನೆಯಡಿಯಲ್ಲಿ ಪ್ಯಾಲೆಸ್ತೀನಿಯನ್ನರು ಗಾಜಾಗೆ ಹಿಂತಿರುಗುವ ಹಕ್ಕನ್ನು ಹೊಂದಿರುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸೋಮವಾರ ಬಿಡುಗಡೆಯಾದ ಸಂದರ್ಶನದ ಆಯ್ದ ಭಾಗಗಳಲ್ಲಿ ಅವರ ಪ್ರಸ್ತಾಪವನ್ನು "ಭವಿಷ್ಯಕ್ಕಾಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ" ಎಂದು ಬಣ್ಣಿಸಲಾಗಿದೆ.

ಫಾಕ್ಸ್ ನ್ಯೂಸ್ ಚಾನೆಲ್‌ನ ಬ್ರೆಟ್ ಬೇಯರ್‌ ಅವರಿಗೆ ನೀಡಿದ ಸಂದರ್ಶನದ ವೇಳೆ ಡೊನಾಲ್ಡ್ ಟ್ರಂಪ್, ಅರಬ್ ಜಗತ್ತು ಮತ್ತು ಅಂತರಾಷ್ಟ್ರೀಯ ಸಮುದಾಯದ ಇತರರು ತಿರಸ್ಕರಿಸಿರುವ ಪ್ಯಾಲೆಸ್ತೀನಿಯನ್ನರು ಗಾಜಾದ ಹೊರಗೆ ವಾಸಿಸಲು ಆರು ವಿಭಿನ್ನ ಸ್ಥಳಗಳನ್ನು ಯೋಜನೆಯಡಿ ಹೊಂದಬಹುದು ಎಂದಿದ್ದಾರೆ.

ಬೇಯರ್ ಪ್ಯಾಲೆಸ್ತೀನಿಯನ್ನರು ಎನ್ಕ್ಲೇವ್‌ಗೆ ಮರಳುವ ಹಕ್ಕನ್ನು ಹೊಂದಿದ್ದಾರೆಯೇ ಎಂದು ಕೇಳಿದಾಗ ಟ್ರಂಪ್ ಅವರು ಇಲ್ಲ ಅವರು ಹೆಚ್ಚು ಉತ್ತಮ ವಸತಿ ವ್ಯವಸ್ಥೆಗಳನ್ನು ಹೊಂದಲಿದ್ದಾರೆ ಎಂದು ಹೇಳಿದರು. ಈಗಿರುವ ಹೆಚ್ಚಿನವು ಅಕ್ಟೋಬರ್ 2023 ರಿಂದ ಇಸ್ರೇಲ್ ಮಿಲಿಟರಿಯಿಂದ ನಾಶವಾಗಿ ಅವಶೇಷಗಳ ರಾಶಿಯಾಗಿದೆ.

US President Trump and Israeli Prime Minister Netanyahu
'GAZA strip ವಶಪಡಿಸಿಕೊಳ್ಳುತ್ತೇವೆ'; ಇಸ್ರೇಲ್ ಪ್ರಧಾನಿ Netanyahu ಉಪಸ್ಥಿತಿಯಲ್ಲೇ Donald Trump ಅಚ್ಚರಿ ಹೇಳಿಕೆ!

ಬೇರೆ ರೀತಿಯಲ್ಲಿ ಹೇಳುವುದಾದರೆ, ನಾನು ಅವರಿಗೆ ಶಾಶ್ವತ ಸ್ಥಳವನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದೇನೆ ಏಕೆಂದರೆ ಅವರು ಈಗ ಹಿಂತಿರುಗಬೇಕಾದರೆ, ಅದು ವಾಸಯೋಗ್ಯವಲ್ಲ ಎಂದಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧದಿಂದ ಬಾಧಿತರಾಗಿರುವ ಪ್ಯಾಲೆಸ್ತೀನಿಯನ್ನರನ್ನು ಗಾಜಾದಿಂದ ಸ್ಥಳಾಂತರಿಸಬೇಕು. ಈಜಿಪ್ಟ್ ಮತ್ತು ಜೋರ್ಡಾನ್ ಅವರನ್ನು ಕರೆದೊಯ್ಯಬೇಕೆಂಬುದು ಡೊನಾಲ್ಡ್ ಟ್ರಂಪ್ ಅವರ ವಾದವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com