ಅಮೆರಿಕದ NSA ಮೈಕ್ ವಾಲ್ಟ್ಜ್ ಜೊತೆಗಿನ ಸಭೆ ಯಶಸ್ವಿ; ಎಲೋನ್ ಮಸ್ಕ್ ಭೇಟಿಯಾದ ಪ್ರಧಾನಿ ಮೋದಿ

ಮೈಕ್ ವಾಲ್ಟ್ಜ್ ಅವರೊಂದಿಗೆ ಭೇಟಿ ಫಲಪ್ರದವಾಗಿದೆ. ಅವರು ಯಾವಾಗಲೂ ಭಾರತದ ಉತ್ತಮ ಸ್ನೇಹಿತರಾಗಿದ್ದಾರೆ. ರಕ್ಷಣೆ, ತಂತ್ರಜ್ಞಾನ ಮತ್ತು ಭದ್ರತೆಯು ಭಾರತ-ಯುಎಸ್ಎ ಸಂಬಂಧಗಳ ಪ್ರಮುಖ ಅಂಶಗಳಾಗಿವೆ.
PM Modi with US NSA
ಅಮೆರಿಕದ ಮೈಕ್ ವಾಲ್ಟ್ಜ್ ಜೊತೆಗೆ ಪ್ರಧಾನಿ ಮೋದಿ
Updated on

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಮೈಕ್ ವಾಲ್ಟ್ಜ್ ಜೊತೆಗೆ ಸಭೆ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮೋದಿ, ಮೈಕ್ ವಾಲ್ಟ್ಜ್ ಅವರೊಂದಿಗೆ ಭೇಟಿ ಫಲಪ್ರದವಾಗಿದೆ. ಅವರು ಯಾವಾಗಲೂ ಭಾರತದ ಉತ್ತಮ ಸ್ನೇಹಿತರಾಗಿದ್ದಾರೆ. ರಕ್ಷಣೆ, ತಂತ್ರಜ್ಞಾನ ಮತ್ತು ಭದ್ರತೆಯು ಭಾರತ-ಯುಎಸ್ಎ ಸಂಬಂಧಗಳ ಪ್ರಮುಖ ಅಂಶಗಳಾಗಿವೆ. ಈ ವಿಷಯಗಳ ಬಗ್ಗೆ ಅದ್ಭುತವಾದ ಚರ್ಚೆಯನ್ನು ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

AI, ಸೆಮಿಕಂಡಕ್ಟರ್‌ಗಳು, ಬಾಹ್ಯಾಕಾಶ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಉತ್ತಮ ಬೆಂಬಲ ವ್ಯಕ್ತಪಡಿಸಿರುವುದಾಗಿ ಅವರು ಹೇಳಿದ್ದಾರೆ.

ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿಯಾದರು. ಎಲಾನ್ ಮಸ್ಕ್ ವಾಷಿಂಗ್ಟನ್ ಡಿಸಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಸರ್ಕಾರದ ದಕ್ಷತೆಯ ಇಲಾಖೆ (DOGE) ನೇತೃತ್ವ ವಹಿಸಿದ್ದಾರೆ.

ಮಸ್ಕ್ ತನ್ನ ಮೂವರು ಚಿಕ್ಕ ಮಕ್ಕಳೊಂದಿಗೆ ಬ್ಲೇರ್ ಹೌಸ್‌ಗೆ ಆಗಮಿಸಿದರು. ಮಸ್ಕ್ ಮೋದಿ ಅವರನ್ನು ಭೇಟಿಯಾದಾಗ ಅವರೊಂದಿಗೆ ಮಕ್ಕಳು ಕೂಡಾ ಕುಳಿತಿದ್ದರು. ಭಾರತದಲ್ಲಿ ಸ್ಟಾರ್‌ಲಿಂಕ್‌ನ ಉದ್ದೇಶಿತ ಉಪಗ್ರಹ ಅಂತರ್ಜಾಲ ಉಪಕ್ರಮ ಮತ್ತು ದೇಶದಲ್ಲಿ ಟೆಸ್ಲಾ ಕಾರ್ಖಾನೆ ಸ್ಥಾಪಿಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

PM Modi with US NSA
ಮೋದಿಯ ಮಹತ್ವದ ಅಮೆರಿಕ ಭೇಟಿ: ಭವಿಷ್ಯದ ಸಂಬಂಧ ರೂಪಿಸಲು ಮಸ್ಕ್, ಟ್ರಂಪ್, ರಾಮಸ್ವಾಮಿ ಜೊತೆಗೆ ಮಾತುಕತೆ

ಭಾರತ ಸರ್ಕಾರವು ದೇಶದ ತಾಂತ್ರಿಕ ಮೂಲಸೌಕರ್ಯವನ್ನು ಹೆಚ್ಚಿಸಲು ಆಸಕ್ತಿ ವ್ಯಕ್ತಪಡಿಸಿದೆ ಮತ್ತು ಈ ಪ್ರಯತ್ನಗಳಲ್ಲಿ ಮಸ್ಕ್‌ನ ಉದ್ಯಮಗಳು ನಿರ್ಣಾಯಕ ಪಾತ್ರವನ್ನು ವಹಿಸಬಹುದು. ಟ್ರಂಪ್ ಆಡಳಿತದ ಪ್ರಮುಖ ವ್ಯಕ್ತಿಯಾಗಿರುವ ಮಸ್ಕ್ ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com