ತಂದೆ ಮುಂದೆಯೇ ಪುತ್ರನ ನುಂಗಿದ Humpback ವೇಲ್, ಬದುಕಿದ್ದೇ ಪವಾಡ; ರೋಚಕ Video

ಚಿಲಿ ದೇಶದ ಬಹಿಯಾ ಎಲ್ ಅಗುಯಿಲಾ ಎಂಬ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ, ಬೃಹತ್ ಹಂಪ್‌ಬ್ಯಾಕ್ ತಿಮಿಂಗಿಲವೊಂದು ಅವನ ಹಳದಿ ಬಣ್ಣದ ದೋಣಿಯನ್ನು ನುಂಗಿದೆ.
Humpback Whale Gulps Kayaker In Chile
ಕಯಾಕರ್ ನುಂಗಿದ ವೇಲ್
Updated on

ಸ್ಯಾಂಟಿಯಾಗೋ: 24 ವರ್ಷದ ಪುತ್ರ ಕಯಾಕಿಂಗ್ ಅನ್ನು ವಿಡಿಯೋ ಮಾಡುತ್ತಿದ್ದ ತಂದೆಗೆ ಆಘಾತ ನೀಡಿದ ಬೃಹತ್ Humpback Whale ನೋಡ ನೋಡುತ್ತಲೇ ದೋಣಿ ಸಹಿತ ಪುತ್ರನನ್ನು ನುಂಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು... ಚಿಲಿ ದೇಶದ ಬಹಿಯಾ ಎಲ್ ಅಗುಯಿಲಾ ಎಂಬ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ, ಬೃಹತ್ ಹಂಪ್‌ಬ್ಯಾಕ್ ತಿಮಿಂಗಿಲವೊಂದು ಅವನ ಹಳದಿ ಬಣ್ಣದ ದೋಣಿಯನ್ನು ನುಂಗಿದೆ. ಈ ದೃಶ್ಯವನ್ನು ಆ ವ್ಯಕ್ತಿಯ ತಂದೆಯೇ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಚಿಲಿಯ ದಕ್ಷಿಣದ ಪ್ಯಾಟಗೋನಿಯಾ ಪ್ರದೇಶದ ಮೆಗೆಲ್ಲನ್ ಜಲಸಂಧಿಯಲ್ಲಿರುವ ಸ್ಯಾನ್ ಇಸಿಡ್ರೊ ಲೈಟ್‌ಹೌಸ್ ಬಳಿ ಶನಿವಾರ ಈ ಘಟನೆ ನಡೆದಿದೆ. ತಂದೆ ಮತ್ತು ಪುತ್ರ ಇಬ್ಬರೂ ಪ್ರತ್ಯೇಕ ಕಯಾಕಿಂಗ್ ದೋಣಿಗಳ ಮೂಲಕ ಸಾಗುತ್ತಿದ್ದರು. ಈ ವೇಳೆ ತಂದೆ ಪುತ್ರನ ಕಯಾಕಿಂಗ್ ಅನ್ನು ಚಿತ್ರೀಕರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಬೃಹತ್ Humpback ವೇಲ್ ಬಾಯ್ತೆರೆದು 24 ವರ್ಷದ ಪುತ್ರನನ್ನು ನುಂಗಿದೆ.

Humpback Whale Gulps Kayaker In Chile
Kerala: ಪ್ರಸಿದ್ಧ ಮಣಕುಲಂಗರ ದೇವಸ್ಥಾನ ಉತ್ಸವದ ವೇಳೆ ರೊಚ್ಚಿಗೆದ್ದ ಆನೆಗಳು; 3 ಸಾವು, 12 ಜನರ ಸ್ಥಿತಿ ಗಂಭೀರ, Video!

ಬದುಕಿದ್ದೇ ಪವಾಡ

ವೇಲ್ ಬಾಯಿತೆರೆಯುವ ವೇಳೆ ಭಾರಿ ಪ್ರಮಾಣದ ನೀರು ಮೇಲೆ ಬಂದಿತು. ಇದನ್ನು ತಂದೆ ಅಲೆಗಳಿರಬಹುದು ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಕ್ಷಣ ಮಾತ್ರದಲ್ಲೇ ವೇಲ್ ಪುತ್ರನನ್ನು ಕಯಾಕಿಂಗ್ ಬೋಟ್ ಸಹಿತ ನುಂಗಿದೆ. ಈ ವೇಳೆ ಗಾಬರಿಯಾದ ತಂದೆ ಕೂಗಿಕೊಂಡಿದ್ದು, ಪುತ್ರ ಸತ್ತೇ ಹೋದ ಎನ್ನುವಾಗಲೇ ವೇಲ್ ಆತನನ್ನು ಬೋಟ್ ಸಹಿತ ಉಗುಳಿದೆ. ಬೋಟ್ ಸಹಿತ ದೂರಕ್ಕೆ ಹಾರಿ ಬಿದ್ದ ಪುತ್ರನ ಕಂಡು ತಂದೆ ಕೂಡಲೇ ಆತನ ನೆರವಿಗೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ. ಈ ವೇಳೆ ಗಾಬರಿಯಾಗಿದ್ದ ಮಗನನ್ನು ತಂದೆ ಶಾಂತವಾಗಿರು.. ಶಾಂತವಾಗಿರು.. ನೀನು ಪಾರಾಗಿರುವೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಆತನನ್ನು ನುಂಗಿದ ವೇಲ್ ಕೆಲವೇ ಸೆಕೆಂಡ್ ಗಳಲ್ಲಿ ಆತನನ್ನು ಉಗಿಳಿದ್ದು, ಇದರಿಂದ ಆತ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ. ಒಂದು ವೇಳೆ ವೇಲ್ ಕೆಲ ಸೆಕೆಂಡ್ ಗಳ ಆತನನ್ನು ತನ್ನ ಬಾಯಿಯಲ್ಲಿ ಉಳಿಸಿಕೊಂಡಿದ್ದರೂ ಆತ ಉಸಿರುಗಟ್ಟಿ ಸಾಯುತ್ತಿದ್ದ ಎನ್ನಲಾಗಿದೆ.

ಆ ಕ್ಷಣ ಏನೂ ಮಾಡಲು ಸಾಧ್ಯವಾಗಲಿಲ್ಲ..

ಇನ್ನು ವೇಲ್ ತನ್ನನ್ನು ನುಂಗಿದ ರೋಚಕ ಕ್ಷಣವನ್ನು ಮೆಲುಕು ಹಾಕಿರುವ ಪುತ್ರ.. 'ಆ ಕ್ಷಣದಲ್ಲಿ ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ವೇಲ್ ನುಂಗಿದಾಗ ಲೋಳೆಯ ರಚನೆಯನ್ನು ಅನುಭವಿಸಿದೆ. ನಾನು ಬಹುಶಃ ಸಾಯುತ್ತಿದ್ದೇನೆ ಎಂಬ ಅನುಭವವಾಯಿತು. ಬಳಿಕ ವೇಲ್ ಜೋರಾಗಿ ತನ್ನನ್ನು ಉಗುಳಿತು.. ಮತ್ತೆ ಸಮುದ್ರಕ್ಕೆ ಹಾರಿ ಬಿದ್ದೆ ಎಂದು 24 ವರ್ಷದ ಸಿಮಾನ್ಕಾಸ್ ಹೇಳಿದ್ದಾರೆ.

ಇದೇ ಮೊದಲಲ್ಲ

ವೇಲ್ ಗಳು ಕಯಾಂಕರ್ ಗಳನ್ನು ನುಂಗುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ನವೆಂಬರ್ 2020 ರಲ್ಲಿ ಕ್ಯಾಲಿಫೋರ್ನಿಯಾ ಬೀಚ್‌ನಲ್ಲಿ ಹಂಪ್‌ಬ್ಯಾಕ್ ತಿಮಿಂಗಿಲವು ಎರಡು ಕಯಾಕರ್‌ಗಳನ್ನು ನುಂಗಿತ್ತು. ಕಯಾಕರ್‌ಗಳು ಬೆಳ್ಳಿ ಮೀನುಗಳನ್ನು ತಿನ್ನುತ್ತಿದ್ದ ತಿಮಿಂಗಿಲಗಳನ್ನು ಗಮನಿಸುತ್ತಿದ್ದಾಗ, ಒಂದು ತಿಮಿಂಗಿಲ ಇದ್ದಕ್ಕಿದ್ದಂತೆ ಅವರ ಕಯಾಕ್‌ನ ಕೆಳಗೆ ಬಂದು, ಅದನ್ನು ಮಗುಚಿ ಸ್ವಲ್ಪ ಸಮಯ ನುಂಗಿ, ಬಳಿಕ ಉಗುಳಿತ್ತು.

ಅಂದಹಾಗೆ ಸಾಮಾನ್ಯವಾಗಿ ಈ ಬೃಹತ್ ವೇಲ್ ಗಳು ತಮ್ಮ ಬೇಟೆಗಾಗಿ ಸುದೀರ್ಘ ಸಮಯದವರೆಗೆ ತಮ್ಮ ಬಾಯಿಯನ್ನು ಸಮುದ್ರದಲ್ಲಿ ತೆರೆದಿಟ್ಟುಕೊಳ್ಳುತ್ತವೆ. ಈ ವೇಳೆ ಅಲ್ಲಿಗೆ ಬೃಹತ್ ಪ್ರಮಾಣದ ಮೀನುಗಳು ಬಂದಾಗ ಬಾಯಿ ಮುಚ್ಚಿ ಅವುಗಳನ್ನು ಸ್ವಾಹ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com