
ನವದೆಹಲಿ: ಅಮೆರಿಕದ ಕಂಪನಿಗಳು ಸರ್ಕಾರ ಹೊಸದಾಗಿ ಆರಂಭಿಸಿರುವ 'ಗೋಲ್ಡ್ ಕಾರ್ಡ್' ಪೌರತ್ವ ಉಪಕ್ರಮದ ಅಡಿಯಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳಿಂದ ಭಾರತೀಯ ಪದವೀಧರರನ್ನು ನೇಮಿಸಿಕೊಳ್ಳಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
5 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಸಿದ್ಧರಿರುವ ಶ್ರೀಮಂತ ವಿದೇಶಿ ಹೂಡಿಕೆದಾರರಿಗೆ ಅಮೆರಿಕದ ಪೌರತ್ವವನ್ನು ಪಡೆಯುವ ಮಾರ್ಗವಾಗಿ ಟ್ರಂಪ್ 'ಗೋಲ್ಡ್ ಕಾರ್ಡ್' ನ್ನು ಅನಾವರಣಗೊಳಿಸಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿರುವ ವಲಸೆ ವ್ಯವಸ್ಥೆಯು ವಿಶೇಷವಾಗಿ ಭಾರತದಂತಹ ದೇಶಗಳಿಂದ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಪ್ರತಿಭೆಗಳು ಅಮೆರಿಕದಲ್ಲಿ ಉಳಿಯಲು ಮತ್ತು ಕೆಲಸ ಮಾಡಲು ಕಷ್ಟಕರವಾಗಿಸಿದೆ. ವೀಸಾ ಪ್ರಕ್ರಿಯೆ ಸುಲಭವಾಗಿಸಲು ಗೋಲ್ಡ್ ಕಾರ್ಡ್ ಜಾರಿಗೆ ತರಲಾಗಿದೆ ಎಂದರು.
ಉದಾಹರಣೆಗೆ, ಶಾಲೆಯಲ್ಲಿ ನಂಬರ್ 1 ವಿದ್ಯಾರ್ಥಿಯನ್ನು ನೇಮಿಸಿಕೊಳ್ಳಲು ಬಯಸುವ ಕಂಪನಿಗಳಿಂದ ನನಗೆ ಕರೆಗಳು ಬರುತ್ತವೆ, ಅಂಥವರಿಗೆ ಗೋಲ್ಡ್ ಕಾರ್ಡ್ ನೀಡಲಾಗುತ್ತದೆ ಎಂದು ಟ್ರಂಪ್ ನಿನ್ನೆ ಬುಧವಾರ ತಮ್ಮ ಎರಡನೇ ಅಧ್ಯಕ್ಷ ಅವಧಿಯ ಮೊದಲ ಪೂರ್ಣ ಸಂಪುಟ ಸಭೆಯಲ್ಲಿ ಹೇಳಿದರು.
ಒಬ್ಬ ವ್ಯಕ್ತಿ ಭಾರತ, ಚೀನಾ, ಜಪಾನ್ ಅಥವಾ ಇತರ ದೇಶಗಳಿಂದ ಬರುತ್ತಾರೆ, ಹಾರ್ವರ್ಡ್ ಅಥವಾ ವಾರ್ಟನ್ ಸ್ಕೂಲ್ ಆಫ್ ಫೈನಾನ್ಸ್‌ನಂತಹ ಪ್ರತಿಷ್ಠಿತ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಾರೆ. ಅವರಿಗೆ ಉದ್ಯೋಗದ ಕೊಡುಗೆಗಳು ಬರುತ್ತವೆ, ಆದರೆ ಆ ಕೊಡುಗೆಗಳನ್ನು ತ್ವರಿತವಾಗಿ ರದ್ದುಗೊಳಿಸಲಾಗುತ್ತದೆ ಏಕೆಂದರೆ ಅವರು ದೇಶದಲ್ಲಿ ಉಳಿಯುವ ಯಾವುದೇ ಭರವಸೆ ಇಲ್ಲ.
ಅವರು ತಮ್ಮ ತಾಯ್ನಾಡಿಗೆ ಮರಳಿ ಅಲ್ಲಿ ವ್ಯವಹಾರಗಳನ್ನು ಪ್ರಾರಂಭಿಸುತ್ತಾರೆ ಕೋಟ್ಯಾಧಿಪತಿಗಳಾಗುತ್ತಾರೆ, ಸಾವಿರಾರು ಉದ್ಯೋಗಗಳನ್ನು ಅಲ್ಲಿ ಸೃಷ್ಟಿಸುತ್ತಾರೆ. ಈ ಸಂದರ್ಭದಲ್ಲಿ, ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳ ನೇಮಕಾತಿಗೆ ಸಹಾಯ ಮಾಡಲು ಅಮೆರಿಕದ ಕಂಪನಿಗಳು ಗೋಲ್ಡ್ ಕಾರ್ಡ್ ನೆರವಾಗುತ್ತದೆ ಎಂದರು.
ಪ್ರತಿಭಾನ್ವಿತ ವ್ಯಕ್ತಿಗಳು ಅಮೆರಿಕದಲ್ಲಿಯೇ ಉಳಿದು ಇಲ್ಲಿ ಉದ್ಯೋಗ ಸೃಷ್ಟಿಸುವುದು ನನ್ನ ಉದ್ದೇಶವಾಗಿದೆ. ಈ ಕಂಪನಿಗಳು ಗೋಲ್ಡ್ ಕಾರ್ಡ್ ಖರೀದಿಸಬಹುದು ಮತ್ತು ಅದನ್ನು ತಮ್ಮ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಬಳಸಬಹುದು ಎಂದು ಹೇಳಿದರು.
ಕಾರ್ಯಕ್ರಮವು ಉದ್ಯಮ ವಲಯದಲ್ಲಿ ಹೆಚ್ಚು ಜನಪ್ರಿಯವಾಗಿ ಬಹಳ ಬೇಡಿಕೆ ಬರಲಿದ್ದು ಇದಕ್ಕೆ ಚೌಕಾಶಿ ಕೂಡ ನಡೆಯಬಹುದು ಎಂದು ನಾನು ಅಂದುಕೊಂಡಿದ್ದೇನೆ ಎಂದರು. ಹಿಂದೆಂದಿಗಿಂತಲೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಯುಎಸ್ ವಿದ್ಯಾರ್ಥಿ ವೀಸಾಗಳನ್ನು ಹೊಂದಿದ್ದಾರೆ, ಇತ್ತೀಚಿನ ಅಂಕಿಅಂಶ ತೋರಿಸಿ ಮತ್ತು ನೇಮಕಾತಿಗಾಗಿ ಗೋಲ್ಡನ್ ವೀಸಾ ಕೊಡುಗೆ ಅವರಿಗೆ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ.
ಟ್ರಂಪ್ ಮೊನ್ನ ಮಂಗಳವಾರ ಗೋಲ್ಡ್ ವೀಸಾ ಪ್ರಸ್ತಾವನೆಯನ್ನು ಅನಾವರಣಗೊಳಿಸಿದರು, ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಇತರ ರೀತಿಯ ವೀಸಾ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಯುಎಸ್ ಕಾಂಗ್ರೆಸ್ ಅನುಮೋದನೆಯ ಅಗತ್ಯವಿಲ್ಲದೆ ಎರಡು ವಾರಗಳಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಬಹುದು ಎಂದು ಘೋಷಿಸಿದರು.
2024 ರಲ್ಲಿ, 2008/2009 ಶೈಕ್ಷಣಿಕ ವರ್ಷದ ನಂತರ ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪ್ರಮುಖ ಮೂಲವಾಯಿತು, 3,31,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಭಾರತವು ಸತತ ಎರಡನೇ ವರ್ಷವೂ ಅಂತಾರಾಷ್ಟ್ರೀಯ ಪದವೀಧರ ವಿದ್ಯಾರ್ಥಿಗಳ ಅತಿ ಹೆಚ್ಚು ಕಳುಹಿಸುವ ರಾಷ್ಟ್ರವಾಗಿ ಮುಂದುವರೆದಿದೆ, ಭಾರತೀಯ ಪದವೀಧರ ವಿದ್ಯಾರ್ಥಿಗಳ ಸಂಖ್ಯೆ ಶೇ. 19 ರಷ್ಟು ಏರಿಕೆಯಾಗಿ ಸುಮಾರು 2 ಲಕ್ಷಕ್ಕೆ ತಲುಪಿದೆ.
ಭಾರತವು ಸತತ ಎರಡನೇ ವರ್ಷವೂ ಅಮೆರಿಕಕ್ಕೆ ಅಂತಾರಾಷ್ಟ್ರೀಯ ಪದವೀಧರ (ಸ್ನಾತಕೋತ್ತರ ಮತ್ತು ಪಿಎಚ್‌ಡಿ ಮಟ್ಟದ) ವಿದ್ಯಾರ್ಥಿಗಳನ್ನು ಅತಿದೊಡ್ಡ ಕಳುಹಿಸುವ ರಾಷ್ಟ್ರವಾಗಿ ಉಳಿದಿದೆ. ಭಾರತೀಯ ಪದವಿ ವಿದ್ಯಾರ್ಥಿಗಳ ಸಂಖ್ಯೆ ಶೇ. 19 ರಷ್ಟು ಏರಿಕೆಯಾಗಿ 196,567 ಕ್ಕೆ ತಲುಪಿದೆ. ಭಾರತದಿಂದ ಪದವಿಪೂರ್ವ ವಿದ್ಯಾರ್ಥಿಗಳ ಸಂಖ್ಯೆಯೂ ಶೇ. 13 ರಷ್ಟು ಏರಿಕೆಯಾಗಿ 36,053 ಕ್ಕೆ ತಲುಪಿದೆ. ಪದವಿ ಪಡೆಯದ ವಿದ್ಯಾರ್ಥಿಗಳ ಸಂಖ್ಯೆ ಶೇ. 28 ರಷ್ಟು ಕುಸಿತ ಕಂಡಿದ್ದು, ಒಟ್ಟು 1,426 ವಿದ್ಯಾರ್ಥಿಗಳು ಎಂದು ವರದಿ ತಿಳಿಸಿದೆ.
2022-23 ಶೈಕ್ಷಣಿಕ ವರ್ಷದಲ್ಲಿ, ಅಮೆರಿಕದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಚೀನಾ ಪ್ರಮುಖ ಮೂಲ ದೇಶವಾಗಿತ್ತು, ನಂತರ ಭಾರತ, 2023-24ರಲ್ಲಿ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅಗ್ರ ಐದು ಮೂಲ ದೇಶಗಳು -- ಭಾರತ, ಚೀನಾ (2,77,398), ದಕ್ಷಿಣ ಕೊರಿಯಾ (43,149), ಕೆನಡಾ (28,998) ಮತ್ತು ತೈವಾನ್ (23,157).
Advertisement