
ಲಾಸ್ ವೇಗಾಸ್: ನೆವಾಡಾದ ಲಾಸ್ ವೇಗಾಸ್‌ನಲ್ಲಿರುವ ಅಮೆರಿಕಾ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಹೋಟೆಲ್‌ನ ಹೊರಗೆ ಇಂಧನ ಕ್ಯಾನಿಸ್ಟರ್‌ಗಳು ಮತ್ತು ಪಟಾಕಿ ಮಾರ್ಟರ್‌ಗಳಿಂದ ತುಂಬಿದ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟಗೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟ್ರಕ್ ನ ಚಾಲಕ ಮೃತಪಟ್ಟು ಏಳು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಟ್ರಕ್ ನ್ನು ಕೊಲೊರಾಡೋದಲ್ಲಿ ಬಾಡಿಗೆಗೆ ಪಡೆಯಲಾಗಿದೆ. ಸ್ಫೋಟಕ್ಕೆ ಎರಡು ಗಂಟೆಗಳ ಮೊದಲು ಇಂದು ಗುರುವಾರ ನಸುಕಿನ ಜಾವ ಟ್ರಕ್ ನಗರಕ್ಕೆ ಆಗಮಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಜಿನ ಪ್ರವೇಶದ್ವಾರದ ಬಳಿ ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿದ ವಾಹನದಿಂದ ಮೊದಲು ಹೊಗೆ ಬರಲಾರಂಭಿಸಿ ನಂತರ ಸ್ಫೋಟಗೊಂಡಿದೆ.
ಅಧ್ಯಕ್ಷ ಜೊ ಬೈಡನ್ ನೇತೃತ್ವದ ಶ್ವೇತಭವನವು ಘಟನೆಯ ತನಿಖೆ ನಡೆಸುತ್ತಿದ್ದು, ಕಾನೂನು ಜಾರಿ ನಿರ್ದೇಶನಾಲಯ "ನ್ಯೂ ಓರ್ಲಿಯನ್ಸ್‌ನಲ್ಲಿನ ದಾಳಿಗೂ ಇದಕ್ಕೂ ಸಂಬಂಧವಿದೆಯೇ ಎಂದು ತನಿಖೆ ನಡೆಸುತ್ತಿದೆ ಎಂದು ಹೇಳಿದರು, ನ್ಯೂ ಓರ್ಲಿಯನ್ಸ್ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದರು.
ಮಧ್ಯಾಹ್ನದ ಪತ್ರಿಕಾಗೋಷ್ಠಿಯಲ್ಲಿ, ಶೆರಿಫ್ ಕೆವಿನ್ ಮೆಕ್‌ಮಹಿಲ್ ಸ್ಫೋಟದ ದೃಶ್ಯವನ್ನು ಮತ್ತು ನಂತರದ ಫೋಟೋಗಳನ್ನು ತೋರಿಸಿದರು, ಟ್ರಕ್ ಬೆಡ್‌ನಲ್ಲಿ ದೊಡ್ಡ ಪಟಾಕಿಗಳೊಂದಿಗೆ ಹಲವಾರು ಇಂಧನ ಕ್ಯಾನಿಸ್ಟರ್‌ಗಳು ಸೇರಿದಂತೆ ಟ್ರಕ್ ನೇರವಾಗಿ ಹೋಟೆಲ್‌ನ ಪ್ರವೇಶ ದ್ವಾರದ ಮುಂದೆ ನಿಂತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ.
ಮತ್ತೊಂದು ವೀಡಿಯೊ ತನಿಖಾಧಿಕಾರಿಗಳು ಬೆಂಕಿಯನ್ನು ನಂದಿಸಲು ಕಪ್ಪು ಬೆಂಕಿ-ನಿರೋಧಕ ಟಾರ್ಪ್ ನ್ನು ಬಳಸುವುದನ್ನು ಮತ್ತು ಟ್ರಕ್ ಬೆಡ್ ನ ಸುಟ್ಟ ಅವಶೇಷಗಳನ್ನು ತೋರಿಸಿದೆ.
ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸುತ್ತಿದ್ದ ಜನಸಂದಣಿಯ ಮೇಲೆ ಟ್ರಕ್ ನುಗ್ಗಿಸಿದ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ. ನ್ಯೂ ಓರ್ಲಿಯನ್ಸ್ ಘಟನೆಯಲ್ಲಿ ಕನಿಷ್ಠ 15 ಜನರು ಮೃತಪಟ್ಟು ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದರು.
ಲಾಸ್ ವೇಗಾಸ್ ಪೊಲೀಸ್ ಇಲಾಖೆಯ ಮ್ಯಾಕ್‌ಮಹಿಲ್, ಘಟನೆಯು ನ್ಯೂ ಓರ್ಲಿಯನ್ಸ್‌ನಲ್ಲಿರುವ ಘಟನೆಯೊಂದಿಗೆ ಸಂಪರ್ಕ ಹೊಂದಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು, ನ್ಯೂ ಓರ್ಲಿಯನ್ಸ್ ಘಟನೆಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳು ಕಂಡುಬಂದಿವೆ.
ಎಲೋನ್ ಮಸ್ಕ್ ಪ್ರತಿಕ್ರಿಯೆ:
ಲಾಸ್ ವೇಗಾಸ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಶನಲ್ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಒಳಗೊಂಡ ಸ್ಫೋಟವು ಭಯೋತ್ಪಾದನೆಯ ಕೃತ್ಯ ಎಂದು ಬಿಲಿಯನೇರ್ ಎಲೋನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಎಲೆಕ್ಟ್ರಿಕಲ್ ವಾಹನದ ಸರಳ ಸೀಮಿತ ವಿನ್ಯಾಸ ಸ್ಫೋಟದ ಪರಿಣಾಮವನ್ನು ಕಡಿಮೆ ಮಾಡಿದ್ದು, ಹೊಟೇಲ್ ಗೆ ಆಗಬಹುದಾಗಿದ್ದ ಭಾರೀ ಹಾನಿಯನ್ನು ತಪ್ಪಿಸಿದೆ. ಭಯೋತ್ಪಾದಕ ದಾಳಿಗೆ ತಪ್ಪು ವಾಹನವನ್ನು ಆರಿಸಿಕೊಳ್ಳಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಸೈಬರ್‌ಟ್ರಕ್ ವಾಸ್ತವವಾಗಿ ಸ್ಫೋಟವನ್ನು ಹೊಂದಿತ್ತು ಎಂದು ಎಲೋನ್ ಮಸ್ಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
2024 ರ ಟೆಸ್ಲಾ ಸೈಬರ್‌ಟ್ರಕ್, ಕಾರು ಹಂಚಿಕೆ ವೇದಿಕೆ ಟ್ಯೂರೊ ಮೂಲಕ ಬಾಡಿಗೆಗೆ ಪಡೆದಿದ್ದು, ಟ್ರಂಪ್ ಇಂಟರ್‌ನ್ಯಾಶನಲ್ ಹೋಟೆಲ್‌ನ ಮುಖ್ಯ ದ್ವಾರದ ಹೊರಗೆ ಬೆಂಕಿ ಹೊತ್ತಿಕೊಂಡಿದೆ. ಲಾಸ್ ವೇಗಾಸ್ ಪೊಲೀಸರ ಪ್ರಕಾರ, ಸ್ಫೋಟದಲ್ಲಿ ಓರ್ವ ಮೃತಪಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.
Advertisement