'ಪ್ರಾಣ ರಕ್ಷಣೆಗೆ ಅಂಗಲಾಚಿದ ಒತ್ತೆಯಾಳು', 18 Nuclear Scientists ಅಪಹರಿಸಿದ TTP ಉಗ್ರರು; ಪಾಕ್ ಪ್ರಧಾನಿಗೆ ನಡುಕ ಶುರು!

ಕಾಬೂಲ್ ಖೇಲ್ ಪರಮಾಣು ವಿದ್ಯುತ್ ಗಣಿಗಾರಿಕೆ ಯೋಜನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರ ಮೇಲೆ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಹೊಂಚುದಾಳಿ ನಡೆಸಿದರು.
'ಪ್ರಾಣ ರಕ್ಷಣೆಗೆ ಅಂಗಲಾಚಿದ ಒತ್ತೆಯಾಳು', 18 Nuclear Scientists ಅಪಹರಿಸಿದ TTP ಉಗ್ರರು; ಪಾಕ್ ಪ್ರಧಾನಿಗೆ ನಡುಕ ಶುರು!
Updated on

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ಪರಮಾಣು ಇಂಧನ ಆಯೋಗದ (PAEC) 18 ಉದ್ಯೋಗಿಗಳು ಮತ್ತು ವಿಜ್ಞಾನಿಗಳನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಅಪಹರಿಸಿದೆ. ಇನ್ನು ಸ್ಥಳೀಯ ಪೊಲೀಸರು ತಕ್ಷಣ ಶೋಧ ಕಾರ್ಯಾಚರಣೆಯನ್ನು ಆರಂಭಿಸಿ ಎಂಟು ಒತ್ತೆಯಾಳುಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.

ಕಾಬೂಲ್ ಖೇಲ್ ಪರಮಾಣು ವಿದ್ಯುತ್ ಗಣಿಗಾರಿಕೆ ಯೋಜನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರ ಮೇಲೆ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಹೊಂಚುದಾಳಿ ನಡೆಸಿದರು. ಜನರನ್ನು ಬಂದೂಕು ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡ ನಂತರ, ದಾಳಿಕೋರರು ಅವರ ವಾಹನಕ್ಕೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದರು. ಸ್ಥಳೀಯ ಪೊಲೀಸರು ಎಂಟು ಒತ್ತೆಯಾಳುಗಳನ್ನು ರಕ್ಷಿಸಿದರು. ಆದಾಗ್ಯೂ, ಕಾರ್ಯಾಚರಣೆಯ ಸಮಯದಲ್ಲಿ ಬಿಡುಗಡೆಯಾದವರಲ್ಲಿ ಮೂವರು ಗಾಯಗೊಂಡಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಉಳಿದ ಒತ್ತೆಯಾಳುಗಳನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ.

ಟಿಟಿಪಿ ಅಪಹರಣದ ಹೊಣೆ ಹೊತ್ತುಕೊಂಡಿದ್ದು, ಅಪಹರಿಸಿದ ಉದ್ಯೋಗಿಗಳ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ದೃಶ್ಯಾವಳಿಯಲ್ಲಿ, ಕೆಲವು ಒತ್ತೆಯಾಳುಗಳು ಟಿಟಿಪಿಯ ಬೇಡಿಕೆಗಳನ್ನು ಪೂರೈಸುವ ಮೂಲಕ ತಮ್ಮ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಬೇಡಿಕೆಗಳಲ್ಲಿ ಪಾಕಿಸ್ತಾನದ ಜೈಲುಗಳಲ್ಲಿರುವ ಟಿಟಿಪಿ ಕೈದಿಗಳ ಬಿಡುಗಡೆಯೂ ಸೇರಿದೆ ಎಂದು ವರದಿಯಾಗಿದೆ. ವೀಡಿಯೊ ಅಥವಾ ಭಯೋತ್ಪಾದಕರ ಹೇಳಿಕೆಗಳ ಸ್ವತಂತ್ರ ಪರಿಶೀಲನೆ ಇನ್ನೂ ಬಾಕಿ ಇದೆ. ಭಯೋತ್ಪಾದಕರು ಯುರೇನಿಯಂ ಅನ್ನು ಸಹ ಲೂಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಪಹರಿಸಲ್ಪಟ್ಟ ಕಾರ್ಮಿಕರು PAEC ಅಡಿಯಲ್ಲಿ ಗಣಿಗಾರಿಕೆ ಯೋಜನೆಗಳಲ್ಲಿ ತೊಡಗಿದ್ದರು. ಇದು ಇಂಧನ, ಕೃಷಿ ಮತ್ತು ವೈದ್ಯಕೀಯದಂತಹ ಕ್ಷೇತ್ರಗಳಲ್ಲಿ ಶಾಂತಿಯುತ ಪರಮಾಣು ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ ಸಂಘಟನೆಯಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವ ನಡುವೆಯೇ ಈ ಅಪಹರಣ ನಡೆದಿದೆ. ಒಂದು ದಿನದ ಮೊದಲು, ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಬಲೂಚಿಸ್ತಾನದಲ್ಲಿ ದಾಳಿ ನಡೆಸಿತ್ತು. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಈ ದಾಳಿಯು ದೇಶಾದ್ಯಂತ ದಂಗೆಕೋರ ಕಾರ್ಯಾಚರಣೆಗಳ ಹೆಚ್ಚುತ್ತಿರುವ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ.

'ಪ್ರಾಣ ರಕ್ಷಣೆಗೆ ಅಂಗಲಾಚಿದ ಒತ್ತೆಯಾಳು', 18 Nuclear Scientists ಅಪಹರಿಸಿದ TTP ಉಗ್ರರು; ಪಾಕ್ ಪ್ರಧಾನಿಗೆ ನಡುಕ ಶುರು!
Video: 'ಹಿಜಾಬ್ ಹಾಕಿಕೋ' ಎಂದಿದ್ದಕ್ಕೇ ಮುಸ್ಲಿಂ ಮೌಲ್ವಿಯ ಟರ್ಬನ್ ಕಿತ್ತು ಧರಿಸಿದ ಮಹಿಳೆ!

ಟಿಟಿಪಿ ಮತ್ತು ಬಲೂಚ್ ದಂಗೆಕೋರರು ಅಫ್ಘಾನಿಸ್ತಾನದ ಆಶ್ರಯ ತಾಣಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಆರೋಪಿಸಿದ್ದಾರೆ. ಕಾಬೂಲ್ ಈ ಆರೋಪವನ್ನು ನಿರಾಕರಿಸಿದೆ. ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲ್ಪಟ್ಟ ಟಿಟಿಪಿಯನ್ನು ಇತ್ತೀಚಿನ ಮೌಲ್ಯಮಾಪನಗಳಲ್ಲಿ ಅಫ್ಘಾನಿಸ್ತಾನದ ಅತಿದೊಡ್ಡ ಉಗ್ರಗಾಮಿ ಗುಂಪು ಎಂದು ವಿವರಿಸಲಾಗಿದ್ದು, ಈ ಪ್ರದೇಶದಲ್ಲಿ ಸಾವಿರಾರು ಹೋರಾಟಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com