
ಸಮಂಬಾಯ: ದೂರ್ತನೋರ್ವ ಹಸುವಿನ ಮೇಲೆ ಅತ್ಯಾಚಾರವೆಸಗಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ.
ಹೌದು... ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿರುವ ಘಟನೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಇದರ ನಡುವೆಯೇ ಹಸುಗಳ ಮೇಲೆ ಅತ್ಯಾಚಾರಕ್ಕೆ ಮುಂದಾಗಿ ಪ್ರಾಣವನ್ನೇ ಕಳೆದುಕೊಂಡಿರುವ ದೂರ್ತನೋರ್ವನ ಸುದ್ದಿ ಬ್ರೆಜಿಲ್ ನಲ್ಲಿ ವ್ಯಾಪಕ ವೈರಲ್ ಆಗಿದೆ.
ಹೌದು.. ಬ್ರೆಜಿಲ್ನ ಸಮಂಬಾಯ ಜಿಲ್ಲೆಯ ಲಾಜೆ ಡ ಜಿಬೋಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ತನ್ನ ರಕ್ಷಣೆಗಾಗಿ ಒದ್ದು ಕೊಂದು ಹಾಕಿದೆ. ಪ್ರಜ್ಞಾಹೀನನಾಗಿ ಬಿದ್ದಿದ್ದವನನನ್ನು ಆತನ ಸ್ನೇಹಿತರು ನೋಡಿ ಪೊಲೀಸರಿಗೆ ಕರೆ ಮಾಡಿದಾಗ ವಿಚಾರ ಬಯಲಾಗಿದೆ.
ಕಾಂಡೋಮ್ ಹೇಳಿದ ಸತ್ಯ
ಇನ್ನು ಮೂಲತಃ ಕೃಷಿ ಕಾರ್ಮಿಕನಾಗಿದ್ದ ಆತ ಹಸುಗಳನ್ನು ಕಟ್ಟಿಹಾಕಿದ್ದ ಜಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ, ಆತ ಕಾಂಡೋಮ್ ಧರಿಸಿದ್ದ ಎನ್ನಲಾಗಿದೆ. ಪಕ್ಕದಲ್ಲೇ ಹೊದಿಕೆಯೂ ಇತ್ತು. ಆತ ಸಾಯುವ ಮೊದಲು ಅಂದರೆ ಘಟನೆಯ ಹಿಂದಿನ ರಾತ್ರಿ ತನ್ನ ಸ್ನೇಹಿತರ ಜೊತೆ ಮದ್ಯಪಾನ ಸೇವಿಸಿದ್ದ.
ಬಳಿಕ ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಹಾಲು ಕರೆಯಲು ಹೋದಾಗ ಹಸುವಿನೊಂದಿಗೆ ಸಂಭೋಗಕ್ಕೆ ಮುಂದಾಗಿದ್ದಾನೆ. ಈ ವೇಳೆ ಹಸು ಆತನ ಹಣೆಗೆ ಒದ್ದಿದೆ. ಈ ವೇಳೆ ಆತ ಪ್ರಜ್ಞಾಹೀನನಾಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದು ಆತನ ಸಾವಿಗೀಡಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರಂಭದಲ್ಲಿ ಆತ ಪ್ರಜ್ಞಾಹೀನನಾಗಿದ್ದಾನೆ ಎಂದು ಭಾವಿಸಿದ್ದ ಆತನ ಸ್ನೇಹಿತ ಆತನನ್ನು ಆ ಸ್ಥಳದಿಂದ ಬೇರೆಡೆಗೆ ಕರೆದೊಯ್ಯಲು ಪ್ರಯತ್ನಿಸಿದ್ದ. ಆದರೆ ಆತ ಎಚ್ಚರಗೊಳ್ಳದಿದ್ದಾಗ ವೈದ್ಯರು ಮತ್ತು ಪೊಲೀಸರು ಬಂದು ಪರಿಶೀಲಿಸಿದಾಗ ಆತನ ಸಾವಿಗೀಡಾಗಿರುವುದು ಖಚಿತವಾಗಿದೆ.
ಮೇಕೆಯ ಮೇಲೂ ಅತ್ಯಾಚಾರ
ಇನ್ನು ಮೂಕಪ್ರಾಣಿಗಳ ಮೇಲಿನ ದೌರ್ಜನ್ಯ ಇದೇ ಮೊದಲೇನಲ್ಲ.. ಈ ಹಿಂದೆ ಮ್ಯಾಡ್ರಿಡ್ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.
Advertisement