US ಸೆಕ್ರೆಟರಿ ಆಫ್ ಸ್ಟೇಟ್ ರೂಬಿಯೊ ಜೊತೆ ಜೈಶಂಕರ್ ಚೊಚ್ಚಲ ಸಭೆ: ವಲಸಿಗರ ಸಮಸ್ಯೆ ಬಗೆಹರಿಸುವ ಇಂಗಿತ!

ಭಾರತ-ಯುಎಸ್ ಪಾಲುದಾರಿಕೆಯನ್ನು ಬಲಪಡಿಸಲು ಬದ್ಧತೆಯನ್ನು ಮುಂದುವರೆಸಲು ಉಭಯ ರಾಷ್ಟ್ರಗಳ ನಾಯಕರು ದೃಢಪಡಿಸಿದ್ದಾರೆ.
 S Jaishankar with newly appointed US Secretary of State Marco Rubio
US ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರೂಬಿಯೊ ಅವರೊಂದಿಗೆ ಎಸ್ ಜೈಶಂಕರ್
Updated on

ವಾಷಿಂಗ್ಟನ್: ಅಮೆರಿಕದ ನೂತನ ಸೆಕ್ರೆಟರಿ ಆಫ್ ಸ್ಟೇಟ್ ಆಗಿ ನೇಮಕವಾಗಿರುವ ಮಾರ್ಕೊ ರೂಬಿಯೊ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆಗೆ ನಡೆಸಿದ ಮೊದಲ ಸಭೆಯಲ್ಲಿ ಭಾರತದೊಂದಿಗೆ ಆರ್ಥಿಕ ಬಾಂಧವ್ಯವನ್ನು ಮುಂದುವರೆಸಲು ಮತ್ತು ಅನಿಯಮಿತ ವಲಸೆ ಸಮಸ್ಯೆ ಪರಿಹರಿಸಲು ಟ್ರಂಪ್ ಸರ್ಕಾರ ಒಲವು ಹೊಂದಿದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

53 ವರ್ಷದ ರುಬಿಯೊ ಭಾರತದ ತಮ್ಮ ಸಹವರ್ತಿ ಜೈಶಂಕರ್ ಜೊತೆಗೆ ನಡೆಸಿದ ಸಭೆಯಲ್ಲಿ ಟ್ರಂಪ್ ಆಡಳಿತ ಭಾರತದೊಂದಿಗೆ ಬಾಂಧವ್ಯವನ್ನು ಬಲಪಡಿಸಲು ನೀಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಕ್ವಾಡ್ ಸಚಿವರ ಸಭೆಯ ನಂತರ ವಿದೇಶಾಂಗ ಇಲಾಖೆಯ ಪ್ರಧಾನ ಕಚೇರಿಯಲ್ಲಿ 70 ವರ್ಷದ ಜೈಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಟಮ್ಮಿ ಬ್ರೂಸ್, ಭಾರತದೊಂದಿಗೆ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಅನಿಯಮಿತ ವಲಸೆಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಭಾರತದೊಂದಿಗೆ ಕೆಲಸ ಮಾಡುವ ಇಂಗಿತವನ್ನು ರೂಬಿಯೊ ವ್ಯಕ್ತಪಡಿಸಿದ್ದಾರೆ.

ಭಾರತ-ಯುಎಸ್ ಪಾಲುದಾರಿಕೆಯನ್ನು ಬಲಪಡಿಸಲು ಬದ್ಧತೆಯನ್ನು ಮುಂದುವರೆಸಲು ಉಭಯ ರಾಷ್ಟ್ರಗಳ ನಾಯಕರು ದೃಢಪಡಿಸಿದ್ದಾರೆ. ಅಲ್ಲದೇ ಪ್ರಾದೇಶಿಕ ಸಮಸ್ಯೆಗಳು ಮತ್ತು ಯುಎಸ್-ಭಾರತ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಅವಕಾಶಗಳು ಸೇರಿದಂತೆ ವ್ಯಾಪಕವಾದ ಚರ್ಚೆ ನಡೆಸಿದ್ದಾರೆ ಎಂದು ಬ್ರೂಸ್ ಹೇಳಿದ್ದಾರೆ.

 S Jaishankar with newly appointed US Secretary of State Marco Rubio
ವಲಸಿಗರಲ್ಲಿ ಗಡಿಪಾರು ಭೀತಿ: ಅಮೆರಿಕದಲ್ಲಿರುವ 18,000 ಜನರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸಜ್ಜು!

ಸಭೆಯ ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಜೈಶಂಕರ್, ರಾಜ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ರೂಬಿಯೊ ಅವರನ್ನು ಭೇಟಿಯಾದದ್ದು, ಸಂತೋಷವಾಗಿದೆ. ದ್ವಿಪಕ್ಷೀಯ ಸಭೆಯಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆದಿದೆ. ಕಾರ್ಯತಂತ್ರದ ಸಹಕಾರವನ್ನು ಮುಂದುವರಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com