ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪುತ್ರ ಯೋಶಿತಾ ರಾಜಪಕ್ಸೆ ಬಂಧನ

ಮಹಿಂದಾ ರಾಜಪಕ್ಸೆ ಅವರ ಮೂವರು ಪುತ್ರರಲ್ಲಿ ಯೋಶಿತಾ ಎರಡನೇಯವರು. ಅವರ ಚಿಕ್ಕಪ್ಪ ಮತ್ತು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಕಳೆದ ವಾರ ಅದೇ ಮನೆಯಲ್ಲಿ- ಕತರಗಮದ ದಕ್ಷಿಣ ಧಾರ್ಮಿಕ ರೆಸಾರ್ಟ್‌ನಲ್ಲಿರುವ ರಜಾ ನಿವಾಸದಲ್ಲಿ ಪೊಲೀಸರು ವಿಚಾರಣೆ ನಡೆಸಿದರು.ನಡೆಸಿದ್ದರು.
ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪುತ್ರ ಯೋಶಿತಾ ರಾಜಪಕ್ಸೆ ಬಂಧನ
Updated on

ಕೊಲಂಬೊ: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಪುತ್ರ ಯೋಶಿತಾ ರಾಜಪಕ್ಸೆ ಅವರನ್ನು ಆಸ್ತಿ ಖರೀದಿ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಇಂದು ಶನಿವಾರ ಪೊಲೀಸರು ಬಂಧಿಸಿದ್ದಾರೆ.

2015ರ ಮೊದಲು ತಮ್ಮ ತಂದೆಯ ಅಧ್ಯಕ್ಷತೆಯ ಅವಧಿಯಲ್ಲಿ ಆಸ್ತಿ ಖರೀದಿಯಲ್ಲಿ ನಡೆದ ದುಷ್ಕೃತ್ಯದ ತನಿಖೆಗೆ ಸಂಬಂಧಿಸಿದಂತೆ ಮಾಜಿ ನೌಕಾಪಡೆ ಅಧಿಕಾರಿ ಯೋಶಿತಾ ಅವರನ್ನು ಅವರ ಮನೆಯಾದ ಬೆಲಿಯಾಟ್ಟಾದಿಂದ ಬಂಧಿಸಲಾಗಿದೆ.

ಮಹಿಂದಾ ರಾಜಪಕ್ಸೆ ಅವರ ಮೂವರು ಪುತ್ರರಲ್ಲಿ ಯೋಶಿತಾ ಎರಡನೇಯವರು. ಅವರ ಚಿಕ್ಕಪ್ಪ ಮತ್ತು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಕಳೆದ ವಾರ ಅದೇ ಮನೆಯಲ್ಲಿ- ಕತರಗಮದ ದಕ್ಷಿಣ ಧಾರ್ಮಿಕ ರೆಸಾರ್ಟ್‌ನಲ್ಲಿರುವ ರಜಾ ನಿವಾಸದಲ್ಲಿ ಪೊಲೀಸರು ವಿಚಾರಣೆ ನಡೆಸಿದರು.

ಮಹಿಂದಾ ರಾಜಪಕ್ಸೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ನಿನ್ನೆ ಮೂಲಭೂತ ಹಕ್ಕುಗಳ ಅರ್ಜಿಯನ್ನು ಸಲ್ಲಿಸಿದ ಕೂಡಲೇ ಅವರನ್ನು ಬಂಧಿಸಲಾಗಿದೆ. ಅವರ ಭದ್ರತೆಯನ್ನು ಪುನಃಸ್ಥಾಪಿಸಲು ಮಧ್ಯಪ್ರವೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ಸರ್ಕಾರವು ಅವರ ಭದ್ರತೆಯನ್ನು ಕಡಿತಗೊಳಿಸಿತ್ತು.

ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪುತ್ರ ಯೋಶಿತಾ ರಾಜಪಕ್ಸೆ ಬಂಧನ
ಗೋಟಬಯ ರಾಜಪಕ್ಸೆ ಸಹೋದರರಾದ ಮಹಿಂದಾ ಮತ್ತು ಬಸಿಲ್ ಲಂಕಾ ತೊರೆಯದಂತೆ ಸುಪ್ರೀಂ ಕೋರ್ಟ್ ನಿರ್ಬಂಧ

ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ನೇತೃತ್ವದ ಹೊಸ ಸರ್ಕಾರ ರಚನೆಯಾದಾಗಿನಿಂದ, ಮಹಿಂದಾ ರಾಜಪಕ್ಸೆ ಅವರ ಹಿರಿಯ ಮಗ ಮತ್ತು ಶಾಸಕ ನಮಲ್ ರಾಜಪಕ್ಸೆ ಅವರನ್ನು ಮಹಿಂದಾ ರಾಜಪಕ್ಸೆ ಅವರ ಉದ್ಯೋಗಿಯೊಂದಿಗೆ ಮತ್ತೊಂದು ಆಸ್ತಿ ಪ್ರಕರಣದ ಕುರಿತು ಪೊಲೀಸರು ವಿಚಾರಣೆ ನಡೆಸಿದ್ದರು.

2005 ಮತ್ತು 2015 ರ ನಡುವೆ ಮಹಿಂದಾ ರಾಜಪಕ್ಸೆ ಅಧ್ಯಕ್ಷರಾಗಿದ್ದಾಗ ತಪ್ಪು ಮಾಡಿದ ಆರೋಪ ಹೊತ್ತಿರುವ ಪ್ರತಿಯೊಬ್ಬರನ್ನು ಬಂಧಿಸುವುದಾಗಿ ಚುನಾವಣೆಗೆ ಮುನ್ನ ಹೊಸ ಸರ್ಕಾರ ಪ್ರತಿಜ್ಞೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com