
ಶಾಂಘೈನಿಂದ ಟೋಕಿಯೊಗೆ ತೆರಳುತ್ತಿದ್ದ ಜಪಾನ್ ಏರ್ಲೈನ್ಸ್ ವಿಮಾನವು ಇದ್ದಕ್ಕಿದ್ದಂತೆ ಸುಮಾರು 26,000 ಅಡಿ ಎತ್ತರಕ್ಕೆ ಕುಸಿದಾಗ ಪ್ರಯಾಣಿಕರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿತು. ಭಯಾನಕ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಕಣ್ಣೀರು, ಗಾಬರಿ ಆಗಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಜೂನ್ 30ರಂದು ಈ ಘಟನೆ ನಡೆದಿದ್ದು ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಿಂದ ಹೊರಟು ಟೋಕಿಯೊದ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ JL8696 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಬೋಯಿಂಗ್ 737 ವಿಮಾನವು ಸಿಬ್ಬಂದಿ ಸೇರಿದಂತೆ 191 ಜನರು ಪ್ರಮಾಣಿಸುತ್ತಿದ್ದರು. ಸ್ಥಳೀಯ ಸಮಯ ಸಂಜೆ 6:53ರ ಸುಮಾರಿಗೆ, ವಿಮಾನದ ಕ್ಯಾಬಿನ್ ನಿಂದ ಆತಂಕದ ಸಂದೇಶಗಳು ಬಂದವು. ವಿಮಾನವು ಹತ್ತು ನಿಮಿಷಗಳಲ್ಲಿ 36,000 ಅಡಿಗಳಿಂದ ಸುಮಾರು 10,500 ಅಡಿಗಳಿಗೆ ಇಳಿಯಬೇಕಾಯಿತು. ಆಮ್ಲಜನಕ ಮಾಸ್ಕ್‌ಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು ಮತ್ತು ಪ್ರಯಾಣಿಕರಿಗೆ ತಕ್ಷಣ ಅವುಗಳನ್ನು ಬಳಸಲು ಸೂಚಿಸಲಾಯಿತು.
ಕ್ಯಾಬಿನ್ ಒಳಗಿನಿಂದ ತೆಗೆದ ವೀಡಿಯೊ ದೃಶ್ಯಗಳಲ್ಲಿ, ಭಯಭೀತರಾದ ಪ್ರಯಾಣಿಕರು ಆಮ್ಲಜನಕ ಮುಖವಾಡಗಳನ್ನು ಧರಿಸಿರುವುದನ್ನು, ಕೆಲವರು ಕೈಗಳನ್ನು ಹಿಡಿದಿರುವುದನ್ನು ಮತ್ತು ಇತರರು ಶಾಂತವಾಗಿರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಿಮಾನ ಸಿಬ್ಬಂದಿ ಎಲ್ಲರೂ ಶಾಂತವಾಗಿರಲು ಮತ್ತು ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ಒತ್ತಾಯಿಸುವುದನ್ನು ಕೇಳಬಹುದು.
ನನಗೆ ದೊಡ್ಡ ಶಬ್ದ ಕೇಳಿಸಿತು. ನಂತರ ಮೇಲಿನಿಂದ ಆಮ್ಲಜನಕ ಮಾಸ್ಕ್ ಗಳು ಬೀಳುವುದನ್ನು ನಾನು ನೋಡಿದೆ. ವಿಮಾನ ಸಿಬ್ಬಂದಿ ಅಳುತ್ತಾ ಎಲ್ಲರೂ ಮಾಸ್ಕ್ ಗಳನ್ನು ಧರಿಸಲು ಸೂಚಿಸಿದರು. ಅಸಮರ್ಪಕ ಕಾರ್ಯವಿದೆ ಎಂದು ಹೇಳಿದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಈ ಭಯಾನಕ ಕ್ಷಣದಲ್ಲಿ, ಪ್ರಯಾಣಿಕರೊಬ್ಬರು ಆ ಅಗ್ನಿಪರೀಕ್ಷೆಯ ಸಮಯದಲ್ಲಿ ತನ್ನ ಉಯಿಲು ಬರೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಜಪಾನ್‌ನ ಭೂ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯವು ನಂತರ ಹಾರಾಟದ ಮಧ್ಯದಲ್ಲಿ ಒತ್ತಡ ವ್ಯವಸ್ಥೆಯ ವೈಫಲ್ಯದ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ದೃಢಪಡಿಸಿತು. ಪೈಲಟ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ವಿಮಾನವನ್ನು ಒಸಾಕಾದ ಕನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಿದರು. ಅಲ್ಲಿ ಅದು ಸ್ಥಳೀಯ ಸಮಯ ರಾತ್ರಿ 8:50ಕ್ಕೆ ಸುರಕ್ಷಿತವಾಗಿ ಇಳಿಯಿತು. ಅದೃಷ್ಟವಶಾತ್, ಯಾವುದೇ ಗಾಯಗಳು ವರದಿಯಾಗಿಲ್ಲ.
Advertisement