
ಬೀಜಿಂಗ್: ದಲೈ ಲಾಮಾ ಅವರು ಉತ್ತರಾಧಿಕಾರಿಯ ನೇಮಕದಲ್ಲಿ ತಮ್ಮ ಆಶಯದಂತೆಯೇ ನಡೆದುಕೊಳ್ಳಲು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಚೀನಾ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ್ದು, ಟಿಬೆಟ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತಕ್ಕೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಕಿರಣ್ ರಿಜಿಜು ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, 14ನೇ ದಲೈ ಲಾಮಾ ಅವರ ಚೀನಾ ವಿರೋಧಿ ಪ್ರತ್ಯೇಕತಾವಾದಿ ಸ್ವಭಾವದ ಬಗ್ಗೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಷಿಜಾಂಗ್(ಟಿಬೆಟ್) ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತನ್ನ ಬದ್ಧತೆಗಳನ್ನು ಗೌರವಿಸಬೇಕು ಎಂದರು.
ಭಾರತವು ತನ್ನ ಹೇಳಿಗಳು ಮತ್ತು ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಬೇಕು. ಷಿಜಾಂಗ್ ಗೆ ಸಂಬಂಧಿಸಿದ ವಿಷಯ, ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ಷಿಜಾಂಗ್ ವಿಚಾರ ಚೀನಾ-ಭಾರತ ಸಂಬಂಧದ ಸುಧಾರಣೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಮಾವೋ ಹೇಳಿದ್ದಾರೆ.
ದಲೈ ಲಾಮಾ ಅವರ ಉತ್ತರಾಧಿಕಾರಿಯ ನೇಮಕದ ಬಗ್ಗೆ ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧರ ನಾಯಕ ನಿರ್ಧರಿಸುತ್ತಾರೆ. ಮುಂದಿನ ದಲೈ ಲಾಮಾ ಯಾರಾಗುತ್ತಾರೆ ಎಂಬುದನ್ನು ಅವರೇ ನಿರ್ಧರಿಸುತ್ತಾರೆ” ಎಂದು ರಿಜಿಜು ತಿಳಿಸಿದ್ದರು.
ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರೇ 2015 ರಲ್ಲಿ ಸ್ಥಾಪಿಸಿದ ಗಾಡೆನ್ ಫೋಡ್ರಾಂಗ್ ಟ್ರಸ್ಟ್ ನ ಮೂಲಕವೇ ಉತ್ತರಾಧಿಕಾರಿಯ ನೇಮಕವಾಲಿದೆ. ತಮ್ಮ ಪುನರ್ಜನ್ಮದ ಮೂಲಕವೇ ಭವಿಷ್ಯದ ದಲೈ ಲಾಮಾ ಅಧಿಕಾರಕ್ಕೆ ಬರಲಿದ್ದು, ಅವರನ್ನು ಗುರುತಿಸುವ ಅಧಿಕಾರ ತನಗೆ ಇದೆ ಎಂದು 14ನೇ ದಲೈ ಲಾಮಾ ಹೇಳಿದ್ದಾರೆ.
Advertisement