
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷಿ ಪ್ರಮುಖ ತೆರಿಗೆ ಮಸೂದೆ (ಒನ್ ಬಿಗ್ ಬ್ಯೂಟಿಫುಲ್ ಬಿಲ್) ಯುಎಸ್ ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಂಡಿದೆ. ಈ ಮೂಲಕ ಟ್ರಂಪ್ ಅವರು ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್ ಅತ್ಯಲ್ಪ ಅಂತರದಿಂದ ಪ್ರಮುಖ ತೆರಿಗೆ ಮಸೂದೆಯನ್ನು ಪಾಸ್ ಮಾಡಿದೆಯಾದರೂ, ಈ ಬೆಳವಣಿಗೆ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಮುಖ ರಾಜಕೀಯ ಗೆಲವು ಸಿಕ್ಕಂತಾಗಿದೆ.
ಈ ಬೆಳವಣಿಗೆ ಡೊನಾಲ್ಡ್ ಟ್ರಂಪ್ ಅವರ 2ನೇ ಅವಧಿಯ ಆಮೂಲಾಗ್ರ ಕಾರ್ಯಸೂಚಿಯನ್ನು ಬಲಪಡಿಸಿದೆ. ಅಲ್ಲದೆ, ಟ್ರಂಪ್ ಆಡಳಿತದ ವಲಸೆ ವಿರೋಧಿ ಅಭಿಯಾನಕ್ಕೆ ಹೆಚ್ಚಿನ ಹಣದ ಖಾತರಿ ಒದಗಿಸಿದೆ.
ಒನ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಅಮೆರಿಕಾ ಕಾಂಗ್ರೆಸ್ ಅನುಮೋದನೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ಇದೂವರೆಗೆ ಸಹಿ ಮಾಡಲಾದ ಮಸೂದೆಗಳ ಪೈಕಿ ಇದು ಅತಿದೊಡ್ಡ ಮಸೂದೆಯಾಗಿದೆ ಎಂದು ಹೇಳಿದ್ದಾರೆ.
ಈ ಮಸೂದೆ ಅಮೆರಿಕ ದೇಶದ ಇತಿಹಾಸದಲ್ಲೇ ಅತ್ಯಂತ ಪರಿಣಾಮಕಾರಿ ಮಸೂದೆಗಳಲ್ಲಿ ಒಂದಾಗಿದೆ. ಅಮೆರಿಕವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, ನಾವು ಇದನ್ನು ಮತ್ತಷಟು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಶ್ವೇತಭವನ ಕೂಡಪ್ರತಿಕ್ರಿಯೆ ನೀಡಿದ್ದು, ಅಮೆರಿಕಾದ ಸುವರ್ಣಯುಗ ಆರಂಭವಾಗಿದ್ದು, ಒನ್ ಬಿಗ್ ಬ್ಯೂಟಿಫುಲ್ ಬಿಲ್ ಅಧ್ಯಕ್ಷರ ಸಹಿಗಾಗಿ ಶೀಘ್ರದಲ್ಲೇ ವೈಟ್‌ಹೌಸ್‌ಗೆ ಬರಲಿದೆ ಎಂದು ಹೇಳಿದೆ.
ಮೇ 22, 2025 ರಂದು ಅಮೆರಿಕದ ಪ್ರತಿನಿಧಿ ಸಭೆಯು ಡೊನಾಲ್ಡ್ ಟ್ರಂಪ್ ಅವರ "ಒನ್ ಬಿಗ್ ಬ್ಯೂಟಿಫುಲ್ ಬಿಲ್ ಆಕ್ಟ್" ಅನ್ನು ಒಂದು ಮತದ ಅಂತರದಿಂದ ಅಂಗೀಕರಿಸಿತು. ಸೆನೆಟ್ ಅನುಮೋದನೆಯ ನಂತರ ಇದೀಗ ಮಸೂದೆಗೆ ಅಮೆರಿಕಾ ಕಾಂಗ್ರೆಸ್ ಕೂಡ ಅನುಮೋದನೆ ನೀಡಿದೆ.
ಮಸೂದೆ ಮೂಲಕ ಪ್ರಸ್ತಾಪಿಸಲಾಗಿರುವ ಹೊಸ ತೆರಿಗೆಯು ಮುಖ್ಯವಾಗಿ ಅಮೆರಿಕದ ಅನ್ವಯಿಸುತ್ತದೆ. ಇದರಲ್ಲಿ H1B, L1, F1 (ವಿದ್ಯಾರ್ಥಿ ವೀಸಾ) ಹೊಂದಿರುವವರು, ಗ್ರೀನ್ ಕಾರ್ಡ್ ಹೊಂದಿರುವವರು ಮತ್ತು ಇತರ ತಾತ್ಕಾಲಿಕ ವೀಸಾ ಹೊಂದಿರುವವರು ಸೇರಿದ್ದಾರೆ. ಆದರೆ, ಅಮೆರಿಕದ ನಾಗರಿಕರು (US citizens and nationals) ಈ ತೆರಿಗೆಯಿಂದ ಹೊರತಾಗಿರುತ್ತಾರೆ.
ಭಾರತವು ಅಮೆರಿಕದಿಂದ ಅತಿ ಹೆಚ್ಚು ಹಣವನ್ನು ರವಾನೆ ಮೂಲಕ ಪಡೆಯುತ್ತದೆ. ಈ ತೆರಿಗೆಯಿಂದಾಗಿ ಹಣ ರವಾನೆಯ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬರಬಹುದು, ಏಕೆಂದರೆ ಹಣ ಕಳುಹಿಸುವವರ ವೆಚ್ಚ ಹೆಚ್ಚಾಗುತ್ತದೆ.
ಅಮೆರಿಕದಲ್ಲಿ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ, ಅದರ ಮೇಲೆ ಹೆಚ್ಚಿನ ಪ್ರಮಾಣದ ತೆರಿಗೆ ಬೀಳಲಿದೆ. ರವಾನಿಸುವ ಹಣಕ್ಕೆ ಶೇ.3.5 ರಷ್ಟು ತೆರಿಗೆ ಇರಲಿದೆ. ಅಂದರೆ, ವಲಸಿಗರೊಬ್ಬರು ಅಮೆರಿಕದಿಂದ ಭಾರತಕ್ಕೆ 83 ಸಾವಿರ ರೂಪಾಯಿ ಕಳುಹಿಸಿದಲ್ಲಿ ಅದಕ್ಕೆ 2,900 ತೆರಿಗೆ ಕಡಿತವಾಗಲಿದೆ. ಈ ತೆರಿಗೆಯು ಎಚ್1ಬಿ, ಎಲ್-1, ಎಫ್-1 ವಿಸಾ ಹಾಗೂ ಗ್ರೀನ್ ಕಾರ್ಡ್ ಹೊಂದಿರುವವರ ಅನ್ವಯವಾಗಲಿದೆ.
ಭಾರತ ಸೇರಿದಂತೆ ಯಾವುದೇ ದೇಶದಿಂದ ಅಮೆರಿಕಕ್ಕೆ ಕಾನೂನಾತ್ಮಕವಾಗಿ ಬರುವ ವಲಸಿಗ ಇನ್ನು ಮುಂದೆ ಆತನ ಜೊತೆ ಹೆಂಡತಿ ಮತ್ತು ಮಕ್ಕಳನ್ನು ಮಾತ್ರವೇ ಬರಬಹುದು. ಕುಟುಂಬದ ಇತರ ಸದಸ್ಯರಿಗೆ ಈ ಮಸೂದೆ ಅವಕಾಶ ಮಾಡಿಕೊಡುವುದಿಲ್ಲ.
ಗ್ರೀನ್ ಕಾರ್ಡ್ ಲಾಟರಿ ವ್ಯವಸ್ಥೆ ಮಸೂದೆ ಮೂಲಕ ರದ್ದುಪಡಿಸಲವಾಗಿದೆ. ಗ್ರೀನ್ ಕಾರ್ಡ್ ಲಾಟರಿ ವ್ಯವಸ್ಥೆ ಕಡಿಮೆ ವಲಸಿಗರು ಬರುವ ದೇಶಗಳಿಗೆ ಅಮೆರಿಕ ನೀಡಿದ್ದ 'ಆಫರ್' ಆಗಿತ್ತು. ಅಂದರೆ, ಅಮೆರಿಕಕ್ಕೆ ವಲಸೆ ಬರಲು ಆಯ್ದ ದೇಶಗಳ ಜನರಿಗೆ ಲಾಟರಿ ಮೂಲಕ ಗ್ರೀನ್ ಕಾರ್ಡ್ ನೀಡಲಾಗುತ್ತಿತ್ತು. ಹೊಸ ಮಸೂದೆಯು ಡೈವರ್ಸಿಟಿ ವೀಸಾ ಲಾಟರಿ ವ್ಯವಸ್ಥೆಯನ್ನು ರದ್ದು ಮಾಡುತ್ತದೆ.
ಅಮೆರಿಕಕ್ಕೆ ಇನ್ನು ಮುಂದೆ ವಲಸೆ ಹೋಗಬೇಕಾದಲ್ಲಿ ಶಿಕ್ಷಣ ಮತ್ತು ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಲಿದೆ. ಯಾರೆಂದರವರಿಗೆ ಇನ್ನು ಮುಂದೆ ವೀಸಾ ಸಿಗುವುದು ಕಷ್ಟ
Advertisement