
ಫ್ರಾನ್ಸ್: ಭಾರತ- ಪಾಕಿಸ್ತಾನ ಸೇನಾ ಸಂಘರ್ಷದ ನಂತರದ ರಫೇಲ್ ಯುದ್ಧ ವಿಮಾನಗಳ ಜಾಗತಿಕ ಮಾರಾಟವನ್ನು ದುರ್ಬಲಗೊಳಿಸಲು ಚೀನಾ ತನ್ನ ರಾಯಭಾರ ಕಚೇರಿಗಳನ್ನು ಬಳಸುತ್ತಿದೆ ಎಂದು ಫ್ರೆಂಚ್ ಗುಪ್ತಚರ ಸಂಸ್ಥೆ ಆರೋಪಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇಂಡೋನೇಷ್ಯಾದಂತಹ ರಾಷ್ಟ್ರಗಳೊಂದಿಗೆ ಚೀನಾ ಮಿಲಿಟರಿ ಲಾಬಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ರಫೇಲ್ ಯುದ್ಧ ವಿಮಾನಗಳ ಕಾರ್ಯ ಕ್ಷಮತೆ ಪ್ರಶ್ನಿಸುತ್ತಿದೆ ಮತ್ತು ಪರ್ಯಾಯವಾಗಿ ಚೀನಾದ ಶಸಾಸ್ತ್ರಗಳ ಖರೀದಿಗೆ ಪ್ರೋತ್ಸಾಹಿಸುತ್ತಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ರಫೇಲ್ ನ ಖ್ಯಾತಿಗೆ ಹಾನಿಯನ್ನುಂಟು ಮಾಡುವ ಗುರಿಯೊಂದಿಗೆ AI ಆಧಾರಿತ ಕಂಟೆಂಟ್ ಮತ್ತು ನಕಲಿ ಸೋಶಿಯಲ್ ಮೀಡಿಯಾ ಖಾತೆಗಳೊಂದಿಗೆ ಸುಳ್ಳು ಮಾಹಿತಿ ಹಬ್ಬಿಸುವ ಕಾರ್ಯ ನಡೆಯುತ್ತಿದೆ ಎಂದು ಫ್ರೆಂಚ್ ಅಧಿಕಾರಿಗಳು ಶಂಕಿಸಿದ್ದಾರೆ.
ರಫೇಲ್ ತನ್ನ ರಕ್ಷಣಾ ಉದ್ಯಮದಲ್ಲಿ ಪ್ರಮುಖವಾಗಿದೆ ಎಂದು ಫ್ರಾನ್ಸ್ ಪರಿಗಣಿಸಿದೆ. ಆದರೆ, ಇಂತಹ ಹೇಳಿಕೆಗಳನ್ನು ಚೀನಾ ನಿರಾಕರಿಸಿದೆ. ಅವುಗಳು ಆಧಾರ ರಹಿತ ಎಂದು ಕರೆದಿದೆ. ಭಾರತ, ಯುಎಇ ಮತ್ತು ಇಂಡೋನೇಷ್ಯಾ ಸೇರಿದಂತೆ ಫ್ರಾನ್ಸ್ ಜಾಗತಿಕವಾಗಿ 500 ರಫೇಲ್ ಯುದ್ಧ ವಿಮಾನಗಳನ್ನು ಮಾರಾಟ ಮಾಡಿದೆ.
Advertisement