
ಬ್ರೆಜಿಲಿಯಾ: ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಅಲ್ಲಿ ಅನಿವಾಸಿ ಭಾರತೀಯರು ವರ್ಣಚಿತ್ರಗಳು ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕರ ವಿರುದ್ಧ ಭಾರತದ ಭಯೋತ್ಪಾದನಾ ವಿರೋಧಿ ಅಭಿಯಾನವಾದ ಆಪರೇಷನ್ ಸಿಂಧೂರ್‌ನಿಂದ ಪ್ರೇರಿತವಾದ ಉತ್ಸಾಹಭರಿತ ನೃತ್ಯ ಪ್ರದರ್ಶನದೊಂದಿಗೆ ಸ್ವಾಗತಿಸಿದರು.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದ ಭಾರತೀಯ ವಲಸಿಗರು ಕೂಡ ಅವರ ಭೇಟಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು, ಪ್ರಧಾನಿ ಅವರನ್ನು ಸ್ವಾಗತಿಸಲು ಇದೊಂದು ಸೌಭಾಗ್ಯ ಎಂದು ಬಣ್ಣಿಸಿದರು.
ಮೇಘಮಣಿ ಆರ್ಗಾನಿಕ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಫ್ ಐಸಿಸಿಐ ಗುಜರಾತ್ ಉಪಾಧ್ಯಕ್ಷ ನಾತು ಎಂ ಪಟೇಲ್, ನಾವು ನಿನ್ನೆ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಬಂದಿದ್ದೇವೆ, ಎಲ್ಲರೂ ಪ್ರಧಾನಿ ಮೋದಿ ಅವರ ಆಗಮನಕ್ಕಾಗಿ ಉತ್ಸುಕರಾಗಿದ್ದರು.ಬ್ರೆಜಿಲ್ ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿದೆ. ಭಾರತವು ಕೃಷಿ ಕ್ಷೇತ್ರದಲ್ಲಿ ಬ್ರೆಜಿಲ್‌ಗೆ ಸಾಕಷ್ಟು ಕೊಡುಗೆ ನೀಡುತ್ತದೆ. ಎಲ್ಲರೂ ಭಾರತವನ್ನು ಫಲಿತಾಂಶ-ಆಧಾರಿತ ದೇಶವೆಂದು ನೋಡುತ್ತಾರೆ ಎಂದು ಹೇಳಿದರು.
ಐಸಿಸಿಆರ್ (ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ) ನಿರ್ದೇಶಕಿ ಜ್ಯೋತಿ ಕಿರಣ್, ಭಾರತೀಯ ಸಮುದಾಯದ ಜನರು ಪ್ರಧಾನಿ ಮೋದಿಯವರ ಭೇಟಿಗಾಗಿ ಉತ್ಸುಕರಾಗಿದ್ದಾರೆ. "ಐಸಿಸಿಆರ್‌ನ ಈ ಕೇಂದ್ರವು ಭಾರತ ಮತ್ತು ಬ್ರೆಜಿಲ್ ನಡುವಿನ ಸಂಪರ್ಕವನ್ನು ಬಲಪಡಿಸಲು ಶ್ರಮಿಸುತ್ತದೆ. ಯೋಗ ಮತ್ತು ಒಡಿಸ್ಸಿ ನೃತ್ಯ ತರಗತಿಗಳ ಜೊತೆಗೆ, ಅಡುಗೆ ತರಗತಿಗಳು ಮತ್ತು ಇತರ ಉಪ-ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ನಡೆಸಲಾಗುತ್ತದೆ ಎಂದಿದ್ದಾರೆ.
ನಮ್ಮಲ್ಲಿ ಮೂರು ನವೀನ ಯೋಜನೆಗಳಿವೆ: ಕ್ಯಾಂಪಸ್ ಕನೆಕ್ಟ್ ಪ್ರೋಗ್ರಾಂ, ಎಕ್ಸ್‌ಪೀರಿಯೆನ್ಸ್ ಇಂಡಿಯಾ ಡೇ, ಮತ್ತು ಅತ್ಯಂತ ಪ್ರಮುಖ ಕಾರ್ಯಕ್ರಮ, ನಿಮ್ಮ ಗ್ರಂಥಾಲಯದಲ್ಲಿ ಭಾರತ'. ಈ ಎಲ್ಲಾ ಯೋಜನೆಗಳ ಮೂಲಕ, ನಾವು ಜನರಿಂದ ಜನರಿಗೆ ಸಂಪರ್ಕ ಸಾಧಿಸುವ ಮೂಲಕ ಭಾರತ ಮತ್ತು ಬ್ರೆಜಿಲ್‌ನ ಸಂಸ್ಕೃತಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿ: ಕಾರ್ಯಸೂಚಿ ಏನು?
ಪ್ರಧಾನಿ ಮೋದಿಯವರ ಬ್ರೆಜಿಲ್ ಭೇಟಿ ಆರಂಭವಾಗಿದ್ದು, ಶಾಂತಿ ಮತ್ತು ಭದ್ರತೆ, ಬಹುಪಕ್ಷೀಯತೆಯನ್ನು ಬಲಪಡಿಸುವುದು, ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆ, ಹವಾಮಾನ ಕ್ರಮ, ಜಾಗತಿಕ ಆರೋಗ್ಯ ಮತ್ತು ಆರ್ಥಿಕ ವಿಷಯಗಳು ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಪ್ರಧಾನಿ ಮೋದಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಶೃಂಗಸಭೆಯ ಹೊರತಾಗಿ ಅವರು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ಮೋದಿ ಪಂಚರಾಷ್ಟ್ರ ಪ್ರವಾಸ
ಪ್ರಧಾನಿ ಮೋದಿ ಜುಲೈ 2 ರಂದು ಘಾನಾದಿಂದ ತಮ್ಮ ಪಂಚ ರಾಷ್ಟ್ರಗಳ ಪ್ರವಾಸವನ್ನು ಪ್ರಾರಂಭಿಸಿದರು. ಘಾನಾ ಭೇಟಿಯನ್ನು ಮುಗಿಸಿದ ನಂತರ, ಪ್ರಧಾನಿಯವರು ಕೆರಿಬಿಯನ್ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬಾಗೊಗೆ ಮತ್ತು ನಂತರ ಅರ್ಜೆಂಟೀನಾಗೆ ಹೋದರು.
ಅರ್ಜೆಂಟೀನಾ ಭೇಟಿಯನ್ನು ಮುಗಿಸಿದ ನಂತರ ಅವರು ಬ್ರೆಜಿಲ್‌ನಲ್ಲಿದ್ದಾರೆ.
Advertisement