"ಪುಟಿನ್ ಚೆನ್ನಾಗಿ ಮಾತನಾಡಿ, ನಂತರ ಎಲ್ಲರಿಗೂ ಬಾಂಬ್ ಹಾಕ್ತಾರೆ": ರಷ್ಯಾದ ಮೇಲೆ ಹೊಸ ನಿರ್ಬಂಧದ ಸುಳಿವು ನೀಡಿದ ಟ್ರಂಪ್!

ಯುಎಸ್ ವಿಶೇಷ ರಾಯಭಾರಿ ಉಕ್ರೇನ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಟ್ರಂಪ್ ವಾಷಿಂಗ್ಟನ್‌ನಲ್ಲಿ ನ್ಯಾಟೋ ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಅವರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ.
Donald Trump, Putin Casual Images
ಡೊನಾಲ್ಡ್ ಟ್ರಂಪ್,ವ್ಲಾಡಿಮಿರ್ ಪುಟಿನ್ ಸಾಂದರ್ಭಿಕ ಚಿತ್ರ
Updated on

ಯುನೈಟೆಡ್ ಸ್ಟೇಟ್ಸ್: ಉಕ್ರೇನ್ ನಲ್ಲಿ ರಷ್ಯಾ ಯುದ್ಧ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ಗೆ Patriot ವಾಯು ರಕ್ಷಣಾ ವ್ಯವಸ್ಥೆ ಅಮೆರಿಕ ಕಳುಹಿಸುವುದಾಗಿ ಭಾನುವಾರ ಅವರು ಹೇಳಿದ್ದು, ರಷ್ಯಾದ ಮೇಲೆ ಹೊಸ ನಿರ್ಬಂಧದ ಸುಳಿವು ನೀಡಿದ್ದಾರೆ.

ರಷ್ಯಾದ ವಿರುದ್ಧ ಸೋಮವಾರ ಪ್ರಮುಖ ಹೇಳಿಕೆಯೊಂದನ್ನು ನೀಡುವುದಾಗಿ ಹೇಳಿರುವ ಅಮೆರಿಕ ಅಧ್ಯಕ್ಷ, ಉಕ್ರೇನ್‌ಗೆ ಹೆಚ್ಚು ಅಗತ್ಯವಿರುವ ಶಸ್ತ್ರಾಸ್ತ್ರವನ್ನು ಕಳುಹಿಸುವುದಾಗಿ ಘೋಷಿಸಿದರು. ಯುಎಸ್ ವಿಶೇಷ ರಾಯಭಾರಿ ಉಕ್ರೇನ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಟ್ರಂಪ್ ವಾಷಿಂಗ್ಟನ್‌ನಲ್ಲಿ ನ್ಯಾಟೋ ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಅವರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ. ಇದರೊಂದಿಗೆ ಉಕ್ರೇನ್ ಗೆ ಅಗತ್ಯ ಶಸ್ತ್ರಾಸ್ತ್ರ ಘೋಷಿಸುವ ಸಾಧ್ಯತೆಯಿದೆ.

ಸುಮಾರು ಮೂರು ವರ್ಷಗಳಿಂದ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆ. ಈ ಬೇಸಿಗೆಯಲ್ಲಿ ತೀವ್ರಗತಿಯ ದಾಳಿ ನಡೆದಿತ್ತು. ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ಮಾತುಕತೆಗಳು ಇದುವರೆಗೂ ಯಾವುದೇ ಫಲ ಪ್ರದವಾಗಿಲ್ಲ.

ಪುಟಿನ್ ಚೆನ್ನಾಗಿ ಮಾತನಾಡುತ್ತಾರೆ. ನಂತರ ಎಲ್ಲರಿಗೂ ಬಾಂಬ್ ಹಾಕ್ತಾರೆ ಎಂದು ಹೇಳಿರುವ ಟ್ರಂಪ್ ಉಕ್ರೇನ್‌ಗೆ ವಾಯು ರಕ್ಷಣಾ ವ್ಯವಸ್ಥೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದ ಶ್ವೇತ ಭವನ ಇದೀಗ ಉಲ್ಟಾ ಹೊಡೆದಿದೆ.

ನ್ಯೂಜೆರ್ಸಿಯಲ್ಲಿ ನಡೆದ FIFA ಕ್ಲಬ್ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ ನಂತರ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಸುದ್ದಿಗಾರರಿಗೆ ಮಾತನಾಡಿದ ಟ್ರಂಪ್, ಉಕ್ರೇನ್ ಗೆ Patriot ವಾಯು ರಕ್ಷಣಾ ವ್ಯವಸ್ಥೆ ಕಳುಹಿಸುತ್ತೇವೆ. ಅದು ಅವರಿಗೆ ತೀರಾ ಅಗತ್ಯವಿದೆ ಎಂದು ಹೇಳಿದರು. ಆದರೆ, ಉಕ್ರೇನ್‌ಗೆ ಎಷ್ಟು ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಾರೆ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.

ಶ್ವೇತಭವನವು ಈ ತಿಂಗಳ ಆರಂಭದಲ್ಲಿ ಉಕ್ರೇನ್ ಗೆ ಕೆಲವು ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು. ಇದೀಗ ಉಲ್ಟಾ ಹೊಡೆದಿದ್ದು, ಉಕ್ರೇನ್‌ಗೆ ಕಳುಹಿಸುವ ಕೆಲವು ಶಸ್ತ್ರಾಸ್ತ್ರಗಳಿಗೆ NATO ಯುನೈಟೆಡ್ ಸ್ಟೇಟ್ಸ್‌ಗೆ ಹಣ ಪಾವತಿಸುವ ಹೊಸ ಒಪ್ಪಂದವನ್ನು ಪ್ರಕಟಿಸಿದೆ. ಮೂಲಭೂತವಾಗಿ ಅವರಿಗೆ ಅತ್ಯಾಧುನಿಕ ಮಿಲಿಟರಿ ಉಪಕರಣಗಳನ್ನು ಕಳುಹಿಸಲಿದ್ದೇವೆ. ಅವರು ನಮಗೆ ಶೇ.100 ರಷ್ಟು ಹಣವನ್ನು ಪಾವತಿಸಲಿದ್ದಾರೆ. ಇದು ನಮಗೆ ಹೊಸ ವ್ಯವಹಾರವಾಗಿದೆ ಎಂದು ಅವರು ಹೇಳಿದರು.

Donald Trump, Putin Casual Images
ಪುಟಿನ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ರಷ್ಯಾ ಮಾಜಿ ಸಚಿವ ಸಾವು: ಹಲವು ಅನುಮಾನಗಳಿಗೆ ಕಾರಣ

ಹೊಸ Patriot ವಾಯು ರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ಪಡೆಯುವ ಬಹು ಹಂತದ ಒಪ್ಪಂದ ಬಹಳ ಹತ್ತಿರದಲ್ಲಿದೆ ಎಂದು ಈ ವಾರದ ಆರಂಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕ್ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com