ನೈಗರ್‌ನಲ್ಲಿ ಉಗ್ರ ದಾಳಿ: ಇಬ್ಬರು ಭಾರತೀಯರು ಸಾವು, ಒಬ್ಬರ ಅಪಹರಣ

ಘೋರ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡರು ಮತ್ತು ಒಬ್ಬರನ್ನು ಅಪಹರಿಸಲಾಗಿದೆ" ಎಂದು ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
 terror attack in Niger’s Dosso region
ಕಾಶ್ಮೀರದಲ್ಲಿ ಉಗ್ರ ದಾಳಿ
Updated on

ನಿಯಾಮಿ: ನೈಋತ್ಯ ನೈಗರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರನ್ನು ಅಪಹರಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

"ಜುಲೈ 15 ರಂದು ನೈಗರ್‌ನ ಡೋಸ್ಸೊ ಪ್ರದೇಶದಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡರು ಮತ್ತು ಒಬ್ಬರನ್ನು ಅಪಹರಿಸಲಾಗಿದೆ" ಎಂದು ರಾಯಭಾರ ಕಚೇರಿ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ರಾಜಧಾನಿ ನಿಯಾಮಿಯಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ಡೋಸ್ಸೊದಲ್ಲಿ ನಿರ್ಮಾಣ ಸ್ಥಳವೊಂದನ್ನು ಕಾಯುತ್ತಿದ್ದ ಸೇನಾ ಘಟಕದ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 terror attack in Niger’s Dosso region
Terrorist Attack: 'ಜೂನ್ ಒಂದೇ ತಿಂಗಳಲ್ಲಿ 78 ಉಗ್ರ ದಾಳಿ, 94 ಮಂದಿ ಸಾವು': Pakistan ಗೆ ಮತ್ತೆ ಜಾಗತಿಕ ಮುಜುಗರ!

ಹತ್ಯೆಯಾದವರ ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಅಪಹರಿಸಲ್ಪಟ್ಟ ಭಾರತೀಯನ "ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು" ರಾಯಭಾರ ಕಚೇರಿ ಕೆಲಸ ಮಾಡುತ್ತಿದೆ.

ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿರುವ ಭಾರತೀಯರು ಹೆಚ್ಚು ಜಾಗರೂಕರಾಗಿರುವಂತೆ ರಾಯಭಾರ ಕಚೇರಿ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com