
ಡೀರ್ ಅಲ್-ಬಾಲಾಹ್: ಗಾಜಾದಾದ್ಯಂತ ಮಾನವೀಯ ನೆರವಿಗಾಗಿ ಕಾಯುತ್ತಿದ್ದ 73 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ.
ಉತ್ತರ ಗಾಜಾದಲ್ಲಿ ಅತಿ ಹೆಚ್ಚು 67 ಪ್ಯಾಲೆಸ್ಟೀನಿಯರ ಹತ್ಯೆಯಾಗಿದೆ. ಜಿಕಿಮ್ ಗಡಿ ಮೂಲಕ ಉತ್ತರ ಗಾಜಾಕ್ಕೆ ಟ್ರಕ್ ಗಳಲ್ಲಿ ಬರುತ್ತಿದ್ದ ಆಹಾರ ಪದಾರ್ಥ ಪಡೆಯಲು ಕಾಯುತ್ತಿದ್ದ ಜನರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮತ್ತು ಸ್ಥಳೀಯ ಆಸ್ಪತ್ರೆಗಳು ಮಾಹಿತಿ ನೀಡಿವೆ.
ಇಸ್ರೇಲ್ ಸೇನೆಯಿಂದ ದಾಳಿಯಿಂದ ಪ್ಯಾಲೆಸ್ಟೀನಿಯರ ಹತ್ಯೆಯಾಗಿದೆಯೇ ಅಥವಾ ಶಸ್ತ್ರ ಸಜ್ಜಿತ ಗ್ಯಾಂಗ್ ಈ ಹತ್ಯೆ ಮಾಡಿರುವುದೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಘಟನೆಯಲ್ಲಿ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಗಳು ಹೇಳಿವೆ. ಆದರೆ, ಕೆಲವು ಪ್ರತ್ಯಕ್ಷದರ್ಶಿಗಳು, ಇಸ್ರೇಲ್ ಮಿಲಿಟರಿ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement