ಇಂತ ಎಡವಟ್ಟು ನೀವು ಮಾಡಬೇಡಿ: ಕುತ್ತಿಗೆಗೆ ದಪ್ಪ ಚೈನ್ ಧರಿಸಿ MRI ಸ್ಕ್ಯಾನ್ ಕೋಣೆಗೆ ಪ್ರವೇಶ; ಪತ್ನಿ ಕಣ್ಣ ಮುಂದೆ ನಡೆದಿದ್ದು ಘನ ಘೋರ ದೃಶ್ಯ!

ನ್ಯೂಯಾರ್ಕ್‌ನಲ್ಲಿ 61 ವರ್ಷದ ವ್ಯಕ್ತಿಯೊಬ್ಬರು ದಪ್ಪ ಚೈನ್ ಧರಿಸಿ ಎಂಆರ್‌ಐ ಯಂತ್ರದಲ್ಲಿ ಸಿಲುಕಿಕೊಂಡು ನೋವಿನಿಂದ ಸಾವನ್ನಪ್ಪಿದರು. ಅವರು ಹೆವಿ ಮೆಟಲ್ ಸರಪಳಿಯನ್ನು ಧರಿಸಿ ಎಂಆರ್‌ಐ ಯಂತ್ರ ಕೋಣೆಗೆ ಪ್ರವೇಶಿಸಿದರು. ಯಂತ್ರದ ಬಲವಾದ ಮ್ಯಾಗ್ನೆಟ್ ಸೆಳೆತಕ್ಕೆ ಸಿಲುಕಿ ಯಂತ್ರಕ್ಕೆ...
representation purpose only
ಸಂಗ್ರಹ ಚಿತ್ರ
Updated on

ನ್ಯೂಯಾರ್ಕ್‌ನಲ್ಲಿ 61 ವರ್ಷದ ವ್ಯಕ್ತಿಯೊಬ್ಬರು ದಪ್ಪ ಚೈನ್ ಧರಿಸಿ ಎಂಆರ್‌ಐ ಯಂತ್ರದಲ್ಲಿ ಸಿಲುಕಿಕೊಂಡು ನೋವಿನಿಂದ ಸಾವನ್ನಪ್ಪಿದರು. ಅವರು ಹೆವಿ ಮೆಟಲ್ ಸರಪಳಿಯನ್ನು ಧರಿಸಿ ಎಂಆರ್‌ಐ ಯಂತ್ರ ಕೋಣೆಗೆ ಪ್ರವೇಶಿಸಿದರು. ಯಂತ್ರದ ಬಲವಾದ ಮ್ಯಾಗ್ನೆಟ್ ಸೆಳೆತಕ್ಕೆ ಸಿಲುಕಿ ಯಂತ್ರಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.

ವಾಸ್ತವವಾಗಿ, ಆ ವ್ಯಕ್ತಿ ಎಂಆರ್‌ಐ ಯಂತ್ರ ಕೋಣೆಗೆ ಪ್ರವೇಶಿಸಿದಾಗ ಮೃತ ವ್ಯಕ್ತಿಯ ಪತ್ನಿಯನ್ನು ಸ್ಕ್ಯಾನ್ ಮಾಡಲಾಗುತ್ತಿತ್ತು. ಅದೇ ಸಮಯದಲ್ಲಿ, ಆ ವ್ಯಕ್ತಿ ಸುಮಾರು 9 ಕೆಜಿ (20 ಪೌಂಡ್) ತೂಕದ ಕಬ್ಬಿಣದ ಸರಪಳಿಯನ್ನು ಧರಿಸಿ ಕೋಣೆಗೆ ಪ್ರವೇಶಿಸಿದರು. ಎಂಆರ್‌ಐ ಯಂತ್ರದ ಬಲವಾದ ಮ್ಯಾಗ್ನೆಟ್ ಸೆಳೆದಿದ್ದರಿಂದ ಅವರು ಯಂತ್ರಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಹೆಸರನ್ನು ಕೀತ್ ಮೆಕ್‌ಅಲಿಸ್ಟರ್ ಎಂದು ಗುರುತಿಸಲಾಗಿದೆ. ಮೆಕ್‌ಅಲಿಸ್ಟರ್ ಪತ್ನಿ ಎಂಆರ್‌ಐ ಸ್ಕಾನ್ ಗೆ ಒಳಗಾಗಿದ್ದರು. ಆಕೆ ಎಂಆರ್‌ಐ ಮೇಜಿನಿಂದ ಕೆಳಗಿಳಿಯಲು ಸಹಾಯ ಮಾಡಲು ತನ್ನ ಪತಿಯನ್ನು ಕರೆದಿದ್ದಾಗ ಈ ಘಟನೆ ನಡೆದಿದೆ.

ಆಕೆಯ ಪತಿ ಮೆಕ್‌ಅಲಿಸ್ಟರ್ ಕೋಣೆಗೆ ಪ್ರವೇಶಿಸುತ್ತಿದ್ದಂತೆ ಯಂತ್ರವು ಅವರನ್ನು ಸೆಳೆದಿದೆ. ಆಗ ನಾನು ಕೂಗಿ ಯಂತ್ರವನ್ನು ಆಫ್ ಮಾಡಲು ಕೇಳಿದೆ ಎಂದು ಅವರ ಪತ್ನಿ ಹೇಳಿದರು. ಆದರೆ ಅಷ್ಟರಲ್ಲಾಗಲೇ ಎಲ್ಲವೂ ಮುಗಿದಿತ್ತು. ಯಾರಿಗೂ ಏನೂ ಅರ್ಥವಾಗಲಿಲ್ಲ. ನನ್ನ ಪತಿ ಕೈ ಬೀಸಿ ನನಗೆ ವಿದಾಯ ಹೇಳಿದರು. ನಂತರ ಅವರ ದೇಹವು ಸಡಿಲವಾಯಿತು. ತಂತ್ರಜ್ಞ ಮತ್ತು ಮೆಕ್‌ಅಲಿಸ್ಟರ್ ಹೆಂಡತಿ ಒಟ್ಟಿಗೆ ಅವರನ್ನು ಹೊರಗೆಳೆಯಲು ಪ್ರಯತ್ನಿಸಿದರು. ಆದರೆ ಆಯಸ್ಕಾಂತದ ಶಕ್ತಿ ತುಂಬಾ ಹೆಚ್ಚಾಗಿತ್ತು.

representation purpose only
Air India ವಿಮಾನ ಪತನ ಬೆನ್ನಲ್ಲೇ ಮತ್ತೊಂದು ದುರ್ಘಟನೆ: ಢಾಕಾ ಕಾಲೇಜಿನ ಮೇಲೆ ಅಪ್ಪಳಿಸಿದ China ನಿರ್ಮಿತ ಯುದ್ಧ ವಿಮಾನ; 20 ಮಂದಿ ಸಜೀವದಹನ, Video

ಇಂತಹ ಘಟನೆ ಇದೆ ಮೊದಲಲ್ಲ. 2001ರಲ್ಲಿ ನ್ಯೂಯಾರ್ಕ್‌ನ ವೈದ್ಯಕೀಯ ಕೇಂದ್ರವೊಂದರಲ್ಲಿ 6 ವರ್ಷದ ಮಗು ಸಾವನ್ನಪ್ಪಿತು. ಈ ಘಟನೆ ನಂತರ ಕುಟುಂಬಕ್ಕೆ ಸುಮಾರು 24 ಕೋಟಿ ರೂಪಾಯಿ ಪರಿಹಾರ ದೊರೆಯಿತು.

MRI ಯಂತ್ರವು ತುಂಬಾ ಬಲವಾದ ಆಯಸ್ಕಾಂತವನ್ನು ಹೊಂದಿದೆ. ಇದು ಸರಪಳಿ, ಗಡಿಯಾರ, ಬೆಲ್ಟ್, ಕೀ, ವೀಲ್‌ಚೇರ್ ಅಥವಾ ಆಮ್ಲಜನಕ ಟ್ಯಾಂಕ್‌ನಂತಹ ಯಾವುದೇ ಕಬ್ಬಿಣ ಅಥವಾ ಉಕ್ಕಿನ ವಸ್ತುವನ್ನು ವೇಗವಾಗಿ ಎಳೆಯಬಲ್ಲದು. ತಜ್ಞರ ಪ್ರಕಾರ, MRI ಯಂತ್ರವು ತುಂಬಾ ಶಕ್ತಿಶಾಲಿಯಾಗಿದ್ದು, ಅದು ವೀಲ್‌ಚೇರ್ ಅನ್ನು ಸಹ ಕೋಣೆಗೆ ಎಳೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com