
ಚೀನಾದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿ ಭಾರತದಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದಕ್ಕಾಗಿ ಅಮೆರಿಕದ ಟೆಕ್ ಕಂಪನಿಗಳನ್ನು ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಅಧ್ಯಕ್ಷತೆಯಲ್ಲಿ "ಆ ದಿನಗಳು ಮುಗಿದಿವೆ" ಎಂದು ಎಚ್ಚರಿಸಿದ್ದಾರೆ.
AI ಶೃಂಗಸಭೆಯಲ್ಲಿ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ. AI ನ್ನು ಬಳಸಿಕೊಳ್ಳಲು ಶ್ವೇತಭವನದ ಕ್ರಿಯಾ ಯೋಜನೆ ಸೇರಿದಂತೆ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಮೂರು ಕಾರ್ಯಕಾರಿ ಆದೇಶಗಳಿಗೆ ಟ್ರಂಪ್ ಇದೇ ವೇಳೆ ಸಹಿ ಹಾಕಿದ್ದಾರೆ.
ದೀರ್ಘಕಾಲದವರೆಗೆ, ಅಮೆರಿಕದ ಹೆಚ್ಚಿನ ಟೆಕ್ ಉದ್ಯಮವು "ಆಮೂಲಾಗ್ರ ಜಾಗತಿಕತೆ"ನ್ನು ಅನುಸರಿಸಿತು, ಅದು ಲಕ್ಷಾಂತರ ಅಮೆರಿಕನ್ನರನ್ನು " ವಿಶ್ವಾಸ ಕಳೆದುಕೊಂಡು ದ್ರೋಹ" ವಾಗುತ್ತಿದೆ ಎಂದು ಭಾವಿಸುವಂತೆ ಮಾಡಿತು ಎಂದು ಟ್ರಂಪ್ ಆರೋಪಿಸಿದ್ದಾರೆ.
"ನಮ್ಮ ಅನೇಕ ದೊಡ್ಡ ಟೆಕ್ ಕಂಪನಿಗಳು ಚೀನಾದಲ್ಲಿ ತಮ್ಮ ಕಾರ್ಖಾನೆಗಳನ್ನು ನಿರ್ಮಿಸುವಾಗ, ಭಾರತದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಮತ್ತು ಐರ್ಲೆಂಡ್‌ನಲ್ಲಿ ಲಾಭವನ್ನು ಕಡಿತಗೊಳಿಸುವಾಗ ಅಮೆರಿಕದ ಸ್ವಾತಂತ್ರ್ಯದ ಆಶೀರ್ವಾದವನ್ನು ಪಡೆದುಕೊಂಡಿವೆ. ಅದು ನಿಮಗೆ ತಿಳಿದಿದೆ. ಅದೇ ಸಮಯದಲ್ಲಿ ತಮ್ಮ ಸಹ ನಾಗರಿಕರನ್ನು ಇಲ್ಲಿಯೇ ವಜಾಗೊಳಿಸವುದು ಮತ್ತು ಸೆನ್ಸಾರ್ ಮಾಡುವುದು ನಡೆಯುತ್ತಿತ್ತು. ಅಧ್ಯಕ್ಷ ಟ್ರಂಪ್ ಅಡಿಯಲ್ಲಿ, ಆ ದಿನಗಳು ಮುಗಿದಿವೆ" ಎಂದು ಹೇಳಿದ್ದಾರೆ.
"AI ಓಟವನ್ನು ಗೆಲ್ಲಲು ಸಿಲಿಕಾನ್ ವ್ಯಾಲಿಯಲ್ಲಿ ಮತ್ತು ಸಿಲಿಕಾನ್ ವ್ಯಾಲಿಯನ್ನು ಮೀರಿ ದೇಶಭಕ್ತಿ ಮತ್ತು ರಾಷ್ಟ್ರೀಯ ನಿಷ್ಠೆಯ ಹೊಸ ಮನೋಭಾವದ ಅಗತ್ಯವಿರುತ್ತದೆ" ಎಂದು ಟ್ರಂಪ್ ಹೇಳಿದ್ದಾರೆ.
"ಅಮೆರಿಕಕ್ಕೆ ಬೆಂಬಲವಾಗಿ ನಿಲ್ಲಲು ನಮಗೆ ಅಮೆರಿಕದ ತಂತ್ರಜ್ಞಾನ ಕಂಪನಿಗಳು ಬೇಕು. ನೀವು ಅಮೆರಿಕವನ್ನು ಮೊದಲ ಆದ್ಯತೆಯನ್ನಾಗಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ನೀವು ಅದನ್ನು ಮಾಡಬೇಕೆಂಬುದಷ್ಟೇ ನಾವು ಕೇಳಿಕೊಳ್ಳುವುದು" ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ AI ಗೆ ಸಂಬಂಧಿಸಿದ ಮೂರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದರು. ಇದರಲ್ಲಿ ಶ್ವೇತಭವನದ ಕ್ರಿಯಾ ಯೋಜನೆ, ಪೂರ್ಣ ಪ್ರಮಾಣದ ಅಮೇರಿಕನ್ AI ತಂತ್ರಜ್ಞಾನ ಪ್ಯಾಕೇಜ್‌ಗಳ ರಫ್ತನ್ನು ಉತ್ತೇಜಿಸುವ ಮೂಲಕ ಅಮೇರಿಕನ್ AI ಉದ್ಯಮವನ್ನು ಬೆಂಬಲಿಸಲು ಸಂಘಟಿತ ರಾಷ್ಟ್ರೀಯ ಪ್ರಯತ್ನವನ್ನು ಸ್ಥಾಪಿಸುವ ಆದೇಶವೂ ಸೇರಿದೆ.
Advertisement