
ಖೈಬರ್ ಪಖ್ತುಂಖ್ವಾ: ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ಕನಿಷ್ಠ 15 ಉಗ್ರರನ್ನು ಹತ್ಯೆ ಮಾಡಿ, ಅವರ ಅಡಗುತಾಣಗಳನ್ನು ನಾಶಪಡಿಸಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಪ್ರಾಂತ್ಯದ ಹಂಗು, ಕರಕ್, ಒರಾಕ್ಜೈ ಮತ್ತು ಕುರ್ರಮ್‌ನಲ್ಲಿ 10 ದಿನಗಳ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆ ಮತ್ತು ಪೊಲೀಸ್ ಪಡೆಯ 200ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸುತ್ತಿದ್ದಾರೆ.
"ಇದುವರೆಗೆ 15 ಉಗ್ರರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನ ಗಾಯಗೊಂಡಿದ್ದಾರೆ" ಎಂದು ಕೊಹಾಟ್ ಪ್ರಾದೇಶಿಕ ಪೊಲೀಸ್ ಅಧಿಕಾರಿ ಅಬ್ಬಾಸ್ ಮಜೀದ್ ಮಾರ್ವತ್ ಹೇಳಿದ್ದಾರೆ.
ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಉಗ್ರರ ಹಲವಾರು ಅಡಗುತಾಣಗಳನ್ನು ನಾಶಪಡಿಸಿವೆ ಎಂದು ಅವರು ತಿಳಿಸಿದ್ದಾರೆ.
ಚಾಪ್ರಿ, ಕುಂದವೊ, ಶಾನವರಿ, ಜರ್ಗರಿ, ನಾರ್ಯಬ್ ಮತ್ತು ಪಕ್ಕದ ಅರಣ್ಯ ಪ್ರದೇಶಗಳ ಗುಡ್ಡಗಾಡು ಪ್ರದೇಶಗಳಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಮಾರ್ವತ್ ಹೇಳಿದ್ದಾರೆ.
Advertisement