
ಬ್ರೆಜಿಲ್: ಪಾಕಿಸ್ತಾನದ ಎಲ್ಲೆಡೆ ಕಂಡುಬರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡರೆ ಮಾತ್ರ ಆ ರಾಷ್ಟ್ರದೊಂದಿಗೆ ಮಾತುಕತೆಗೆ ಭಾರತ ಮುಂದಾಗಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಗಳವಾರ ಹೇಳಿದೆ.
ಬ್ರೆಜಿಲ್ ಗೆ ತೆರಳಿರುವ ಸರ್ವ ಪಕ್ಷ ನಿಯೋಗದ ನಾಯಕತ್ವ ವಹಿಸಿರುವ ಶಶಿ ತರೂರ್, ತಪ್ಪಾಗಿ ಅರ್ಥೈಸಿಕೊಂಡಿರುವವರು ಸೇರಿದಂತೆ ಲ್ಯಾಟಿನ್ ಆಫ್ರಿಕನ್ ರಾಷ್ಟ್ರಗಳಲ್ಲಿ ಭಯೋತ್ಪಾದನೆ ವಿರುದ್ಧ ಭಾರತದ ಸಂದೇಶವನ್ನು ತಮ್ಮ ತಂಡ ಯಶಸ್ವಿಯಾಗಿ ಮನವರಿಕೆ ಮಾಡಿಕೊಟ್ಟಿದೆ ಎಂದರು.
ವಾಟೆಂಡ್ ಉಗ್ರರಿಗೆ ಸುರಕ್ಷಿತ ಸ್ವರ್ಗ?
'ಪಾಕಿಸ್ತಾನ ಹೇಳುವಂತೆ ಅವರು ಮುಗ್ದರಾಗಿದ್ದರೆ ವಾಟೆಂಡ್ ಉಗ್ರರಿಗೆ ಯಾಕೆ ಸುರಕ್ಷಿತ ನೆಲೆಒದಗಿಸಿದ್ದಾರೆ? ಉಗ್ರರು ಶಾಂತಿಯುತವಾಗಿ ಬದುಕಲು, ತರಬೇತಿ ಶಿಬಿರಗಳನ್ನು ನಡೆಸಲು ಮತ್ತಷ್ಟು ಜನರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸಲು ಏಕೆ ಸಮರ್ಥರಾಗಿದ್ದಾರೆ? ಎಂದು ಶಶಿ ತರೂರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತನಾಡಲು ಭಾಷೆಯ ತೊಂದರೆ ಇಲ್ಲ: ಆದರೆ, ಸಭ್ಯತೆ ಮತ್ತು ಶಾಂತಿಗಾಗಿ ಸಾಮಾನ್ಯ ದೃಷ್ಟಿಯನ್ನು ಕಂಡುಕೊಳ್ಳುವುದಾಗಿದೆ. ಎಲ್ಲೆಡೆ ಕಂಡುಬರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲಿ, ತದನಂತರ ನಾವು ಮಾತುಕತೆ ನಡೆಸಬಹುದು ಎಂದು ಅವರು ಹೇಳಿದರು.
ನಾವು ಅವರೊಂದಿಗೆ ಹಿಂದೂಸ್ತಾನಿಯಲ್ಲಿ ಮಾತನಾಡಬಹುದು. ಪಂಜಾಬಿಯಲ್ಲಿ ಮಾತನಾಡಬಹುದು. ಇಂಗ್ಲಿಷ್‌ನಲ್ಲಿ ಮಾತನಾಡಬಹುದು. ಪಾಕಿಸ್ತಾನದೊಂದಿಗೆ ಸಾಮಾನ್ಯ ನೆಲೆಯನ್ನು ಹುಡುಕುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಸಭ್ಯತೆ, ಶಾಂತಿಗಾಗಿ ಸಾಮಾನ್ಯ ದೃಷ್ಟಿಕೋನವನ್ನು ಕಂಡುಕೊಳ್ಳುವುದರಲ್ಲಿ ಸಮಸ್ಯೆಯಾಗಿದೆ. ನಾವು ಶಾಂತಿಯಿಂದ ಉಳಿಯಲು, ಬೆಳೆಯಲು ಮತ್ತು ಅಭಿವೃದ್ಧಿಯಾಗಲು ಬಯಸುತ್ತೇವೆ. ಅವರು ನಮ್ಮನ್ನು ಒಂಟಿಯಾಗಿ ಬಿಡಲು ಬಯಸುವುದಿಲ್ಲ. ಅವರು ನಮ್ಮನ್ನು ನಾಶಪಡಿಸಲು ಬಯಸುತ್ತಾರೆ. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲಾ. ಆ ಕಲ್ಪನೆಯನ್ನು ಮರೆತುಬಿಡುವುದೇ ಉತ್ತಮ ಎಂದು ಅವರು ಹೇಳಿದರು.
ಭಯೋತ್ಪಾದನೆಯ ಮೂಲಸೌಕರ್ಯ ಗೆ ಪಾಕ್ ಸಹಕಾರ:
11 ನೇ ಬ್ರಿಕ್ಸ್ ಸಂಸದೀಯ ವೇದಿಕೆಯನ್ನು ಆಯೋಜಿಸುತ್ತಿರುವ ಬ್ರೆಜಿಲ್ ಭಾರತೀಯ ನಾಗರಿಕರ ವಿರುದ್ಧ ಭಯೋತ್ಪಾದನೆ ಕುರಿತು ಹೇಳಿಕೆ ನೀಡಬಹುದು ಎಂದು ಭಾರತ ಆಶಿಸುತ್ತಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ತರೂರ್, ಬ್ರಿಕ್ಸ್ ವಿಭಿನ್ನ ಕಾರ್ಯಸೂಚಿಯನ್ನು ಹೊಂದಿದೆ ಎಂದು ಭಾವಿಸುತ್ತೇನೆ. ಈಗಾಗಲೇ ಅವರು ಈ ವಿಚಾರದಲ್ಲಿ ಕೆಲಸ ಮಾಡುತ್ತಿದ್ದರೂ ಅದು ನನಗೆ ಗೊತ್ತಿಲ್ಲ ಎಂದರು. ಭಯೋತ್ಪಾದನೆಯ ಮೂಲಸೌಕರ್ಯವನ್ನು ಕಿತ್ತುಹಾಕುವಲ್ಲಿ ಪಾಕಿಸ್ತಾನದ ಸಂಪೂರ್ಣ ವಿಫಲವಾಗಿದೆ" ಎಂದು ಅವರು ಹೇಳಿದರು.
ಭಾರತದ ನಿಲುವನ್ನು ವಿದೇಶಗಳು ಗುರುತಿಸುತ್ತಿವೆಯೇ? ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ರಾಷ್ಟ್ರಗಳು ಗುರುತಿಸುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರ್, ನಿಯೋಗವು ಇಲ್ಲಿಯವರೆಗೆ ನಾಲ್ಕು ರಾಷ್ಟ್ರಗಳಾದ ಗಯಾನಾ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್‌ಗೆ ಹೋಗಿದ್ದೇವೆ. ಹೋದ ಕಡೆಯಲ್ಲೆಲ್ಲಾ ಸ್ಪಷ್ಟವಾಗಿ ಯಶಸ್ಸನ್ನು ಸಾಧಿಸಿದ್ದೇವೆ. ಯಶಸ್ಸಿನ ಬಗ್ಗೆ ಹೆಮ್ಮೆಪಡಲು ಇಷ್ಟಪಡುವುದಿಲ್ಲ. ಅದು ಇತರರಿಂದ ನಿರ್ಣಯಿಸಬೇಕಾಗುತ್ತದೆ. ಆದರೆ ಕೆಲವು ತಪ್ಪುಗ್ರಹಿಕೆಗಳನ್ನು ಹೊಂದಿರುವವರು ಸೇರಿದಂತೆ ಭೇಟಿಯಾದ ರಾಷ್ಟ್ರಗಳಲ್ಲಿ ನಮ್ಮ ಸಂದೇಶವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
Advertisement