ಭಾರತದ ವಿರೋಧದ ಹೊರತಾಗಿಯೂ ಪಾಕಿಸ್ತಾನಕ್ಕೆ 800 ಮಿಲಿಯನ್ ಡಾಲರ್ ಪ್ಯಾಕೇಜ್‌ಗೆ ADB ಅನುಮೋದನೆ!

ಹಣಕಾಸು ಸಚಿವರ ಸಲಹೆಗಾರ ಖುರ್ರಾಮ್ ಶೆಹ್ಜಾದ್ ಸಾಮಾಜಿಕ ಮಾಧ್ಯಮದಲ್ಲಿ ಸಂಕ್ಷಿಪ್ತ ಹೇಳಿಕೆಯಲ್ಲಿ ADB ಪ್ಯಾಕೇಜ್‌ಗೆ ಸಂಬಂಧಿಸಿದ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
Pakistan- India
ಪಾಕಿಸ್ತಾನ- ಭಾರತomline desk
Updated on

ನವದೆಹಲಿ: ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಪಾಕಿಸ್ತಾನಕ್ಕೆ USD 300 ಮಿಲಿಯನ್ ನೀತಿ ಆಧಾರಿತ ಸಾಲ (PBL) ಮತ್ತು USD 500 ಮಿಲಿಯನ್ ಕಾರ್ಯಕ್ರಮ ಆಧಾರಿತ ಗ್ಯಾರಂಟಿ (PBG) ಒಳಗೊಂಡ ಮಹತ್ವದ ಹಣಕಾಸು ಪ್ಯಾಕೇಜ್ ನ್ನು ಅನುಮೋದಿಸಿದೆ.

ಭಾರತ ವ್ಯಕ್ತಪಡಿಸಿದ ಕಳವಳಗಳ ಹೊರತಾಗಿಯೂ ಈ ಬೆಳವಣಿಗೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) $1 ಬಿಲಿಯನ್ (ಸುಮಾರು ರೂ. 8,500 ಕೋಟಿ) ಪ್ಯಾಕೇಜ್ ನ್ನು ಪಡೆದ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಹಣಕಾಸು ಸಚಿವರ ಸಲಹೆಗಾರ ಖುರ್ರಾಮ್ ಶೆಹ್ಜಾದ್ ಸಾಮಾಜಿಕ ಮಾಧ್ಯಮದಲ್ಲಿ ಸಂಕ್ಷಿಪ್ತ ಹೇಳಿಕೆಯಲ್ಲಿ ADB ಪ್ಯಾಕೇಜ್‌ಗೆ ಸಂಬಂಧಿಸಿದ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಪ್ಯಾಕೇಜ್ USD 300 ಮಿಲಿಯನ್ ನೀತಿ ಆಧಾರಿತ ಸಾಲ (PBL) ಮತ್ತು USD 500 ಮಿಲಿಯನ್ ಕಾರ್ಯಕ್ರಮ ಆಧಾರಿತ ಗ್ಯಾರಂಟಿ (PBG) ನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ADB ಪ್ಯಾಕೇಜ್ ಪಾಕಿಸ್ತಾನದ ಹಣಕಾಸಿನ ಸುಸ್ಥಿರತೆಯನ್ನು ಬಲಪಡಿಸುವ ಮತ್ತು ಸಮಗ್ರ ಸುಧಾರಣೆಗಳ ಮೂಲಕ ಸಾರ್ವಜನಿಕ ಹಣಕಾಸು ನಿರ್ವಹಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪಾಕಿಸ್ತಾನದ ADB ದೇಶದ ನಿರ್ದೇಶಕಿ ಎಮ್ಮಾ ಫ್ಯಾನ್ ಅವರ ಹೇಳಿಕೆಯನ್ನು PTI ಉಲ್ಲೇಖಿಸಿದೆ.

ಸುದ್ದಿ ಸಂಸ್ಥೆಯ ಪ್ರಕಾರ, ಈ ಕಾರ್ಯಕ್ರಮ ಸಾರ್ವಜನಿಕ ಹಣಕಾಸನ್ನು ಬಲಪಡಿಸುವ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತಷ್ಟು ನೀತಿ ಮತ್ತು ಸಾಂಸ್ಥಿಕ ಸುಧಾರಣೆಗಳಿಗೆ ಸರ್ಕಾರದ ಬದ್ಧತೆಯನ್ನು ಬೆಂಬಲಿಸುತ್ತದೆ.

ಸಾರ್ವಜನಿಕ ಖರ್ಚು ಮತ್ತು ನಗದು ನಿರ್ವಹಣೆಯನ್ನು ಹೆಚ್ಚಿಸುವಾಗ ತೆರಿಗೆ ನೀತಿ, ಆಡಳಿತ ಮತ್ತು ಅನುಸರಣೆಯನ್ನು ಸುಧಾರಿಸಲು ದೂರಗಾಮಿ ಸುಧಾರಣೆಗಳನ್ನು ಈ ಕಾರ್ಯಕ್ರಮ ಬೆಂಬಲಿಸುತ್ತದೆ. ಇದು ಡಿಜಿಟಲೀಕರಣ, ಹೂಡಿಕೆ ಸೌಲಭ್ಯ ಮತ್ತು ಖಾಸಗಿ ವಲಯದ ಅಭಿವೃದ್ಧಿಯನ್ನು ಸಹ ಉತ್ತೇಜಿಸುತ್ತದೆ.

Pakistan- India
United Nation: ಮಾಧ್ಯಮ ಸಂವಾದದಲ್ಲಿ ಭುಟ್ಟೋ ತಬ್ಬಿಬ್ಬು; ಕರ್ನಲ್ ಸೋಫಿಯಾ ಖುರೇಷಿ ಹೆಸರು ಉಲ್ಲೇಖಿಸಿ ಬಾಯಿ ಮುಚ್ಚಿಸಿದ ಪತ್ರಕರ್ತ!

ಈ ಕ್ರಮಗಳು ಪಾಕಿಸ್ತಾನದ ಹಣಕಾಸಿನ ಕೊರತೆ ಮತ್ತು ಸಾರ್ವಜನಿಕ ಸಾಲವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಸಾಮಾಜಿಕ ಮತ್ತು ಅಭಿವೃದ್ಧಿ ವೆಚ್ಚಗಳಿಗೆ ಸ್ಥಳಾವಕಾಶವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com