
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರ ಸಂಬಂಧ ಹಳಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಪರಸ್ಪರ ಟೀಕೆಗೈಯುತ್ತಿದ್ದಾರೆ. ಈ ನಡುವೆ ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್ ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ನ ಆದಾಯಕ್ಕೆ ಕೊಕ್ಕೆ ಹಾಕಲು ಅಮೆರಿಕ ಸರ್ಕಾರವನ್ನು ಬಳಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ ಇದು ಮತ್ತಷ್ಟು ತಾರಕಕ್ಕೇರಿದೆ.
ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡದ ಟ್ರಂಪ್:
ಮಸ್ಕ್ ಅವರಿಗೆ ಆರ್ಥಿಕ ಪೆಟ್ಟು ಕೊಡಲು ಸರ್ಕಾರದ ಜೊತೆಗಿನ ಮಸ್ಕ್ ಒಪ್ಪಂದಗಳನ್ನು ರದ್ದು ಮಾಡಲು ಟ್ರಂಪ್ ಮುಂದಾಗಿದ್ದಾರೆ. ಮತ್ತೊಂಡೆಡೆ ಟ್ರಂಪ್ ಅವರ ಆಡಳಿತವು ಲೈಂಗಿಕ ಕಳ್ಳ ಸಾಗಣೆದಾರ ಜೆಫ್ರಿ ಎಪ್‌ಸ್ಟೀನ್ ಗೆ (Jeffrey Epstein) ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ. ಏಕೆಂದರೆ ಅವುಗಳಲ್ಲಿ ಟ್ರಂಪ್ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಮಸ್ಕ್ ಹೇಳಿದ್ದಾರೆ. ಟ್ರಂಪ್ ಅವರ ದೋಷರೋಪಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಸ್ಕ್ ಫೋಸ್ ಮಾಡುತ್ತಿದ್ದಾರೆ.
ಟ್ರಂಪ್ ತೆರಿಗೆ ಕಡಿತ, ಖರ್ಚು ಮಸೂದೆ ಬಗ್ಗೆ ಟೀಕೆ:
ಜರ್ಮನಿಯ ಹೊಸ ನಾಯಕನೊಂದಿಗಿನ ಶ್ವೇತಭವನದ ಸಭೆಯಲ್ಲಿ ಟ್ರಂಪ್ ಅವರ ತೆರಿಗೆ ಕಡಿತ ಹಾಗೂ ಖರ್ಚು ಮಸೂದೆ ಬಗ್ಗೆ ಮಸ್ಕ್ ಟೀಕೆ ಮಾಡಿದ ನಂತರ ಅವರಿಬ್ಬರ ನಡುವಿನ ಸ್ನೇಹ ಮುರಿದುಬಿದ್ದಿದ್ದು, ಅಮೆರಿಕದ ಅಧ್ಯಕ್ಷ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ನಡುವಿನ ಭಿನ್ನಮತ ಸಾಮಾಜಿಕ ವೇದಿಕೆಗಳಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.
ಸ್ಪೇಸ್ ಎಕ್ಸ್ (SpaceX) ಆದಾಯಕ್ಕೆ ಕೊಕ್ಕೆ ಬೆದರಿಕೆ:
ಮಸ್ಕ್ ಕಳೆದ ಕೆಲವು ದಿನಗಳಿಂದಲೂ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಟೀಕಿಸುತ್ತಿದ್ದಾಗಲೂ ಮೌನವಾಗಿದ್ದ ಟ್ರಂಪ್ ಗುರುವಾರ ಓವಲ್ ಕಚೇರಿಯಲ್ಲಿ ತಮ್ಮ ಮೌನ ಮುರಿದಿದ್ದು, ತಮ್ಮ ಹಳಸಿದ ಸಂಬಂಧ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮಸ್ಕ್ ಅವರಿಂದ ತುಂಬಾ ನಿರಾಶೆಗೊಂಡಿರುವುದಾಗಿ ಹೇಳಿದ್ದರು. ಬಳಿಕ ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ ಮಲ್ಲಿ ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್ ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ನ ಆದಾಯಕ್ಕೆ ಕೊಕ್ಕೆ ಹಾಕಲು ಅಮೆರಿಕ ಸರ್ಕಾರವನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ.
ಬಾಹ್ಯಾಕಾಶ ನೌಕೆ ಸ್ಪೇಸ್‌ಎಕ್ಸ್ (SpaceX’s rockets) ನಿಷ್ಕ್ರೀಯದ ಘೋಷಣೆ: ನಮ್ಮ ಬಜೆಟ್ ನಲ್ಲಿ ಹಣ ಉಳಿಸಲು ಸುಲಭವಾದ ಮಾರ್ಗವೆಂದರೆ ಎಲಾನ್ ಮಸ್ಕ್ ಅವರಿಗೆ ಸರ್ಕಾರ ನೀಡುತ್ತಿರುವ ಸಬ್ಸಿಡಿ ಮತ್ತು ಒಪ್ಪಂದಗಳನ್ನು ಕೊನೆಗೊಳಿಸುವುದು ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಎಕ್ಸ್ ನಲ್ಲಿ ಉತ್ತರಿಸಿದ ಮಸ್ಕ್, ಮುಂದುವರಿಯಿರಿ, ನನ್ನ ದಿನವನ್ನಾಗಿಸಿ (“Go ahead, make my day") ಎಂದು ಹೇಳಿದ್ದಾರೆ. ಇದಾದ ಕೆಲವು ಗಂಟೆಗಳ ನಂತರ ನಾಸಾಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳು ಮತ್ತು ಸರಕುಗಳನ್ನು ಸಾಗಿಸಲು ಬಳಸಿದ ಬಾಹ್ಯಾಕಾಶ ನೌಕೆ ಸ್ಪೇಸ್‌ಎಕ್ಸ್ (spacecraft)ನಿಷ್ಕ್ರಿಯಗೊಳಿಸಲು ಪ್ರಾರಂಭಿಸುತ್ತದೆ ಎಂದು ಮಸ್ಕ್ ಘೋಷಿಸಿದ್ದಾರೆ. ಟ್ರಂಪ್ ಅವರು ಜೆಫ್ರಿ ಎಪ್ ಸ್ಟೀನ್ ಫೈಲ್‌ಗಳಲ್ಲಿದ್ದಾರೆ. ಅವರು ದಾಖಲೆ ಬಹಿರಂಗಪಡಿಸದಿರಲು ಇದೇ ನಿಜವಾದ ಕಾರಣ ಎಂದು ಹೇಳಿದ್ದಾರೆ.
ಬಲಪಂಥೀಯ ಪರ ಪಿತೂರಿ: ಡೊನಾಲ್ಡ್ ಟ್ರಂಪ್ ಅವರನ್ನು ಫೈನಾನ್ಷಿಯರ್ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಲಿಂಕ್ ಮಾಡುವ ಮತ್ತೊಂದು ಟ್ವೀಟ್‌ನೊಂದಿಗೆ, ಎಲಾನ್ ಮಸ್ಕ್ ಯುಎಸ್ ಅಧ್ಯಕ್ಷರು ಬಲಪಂಥೀಯ ಬೆಂಬಲಿಗರ ಪ್ರಿಯವಾದ ದೀರ್ಘಕಾಲೀನ ಪಿತೂರಿ ಸಿದ್ಧಾಂತವನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ವಾರವಷ್ಟೇ ಶ್ವೇತ ಭವನದ ಉನ್ನತ ಸಲಹೆಗಾರನ ಹುದ್ದೆ ತೊರೆದಿದ್ದ ಟೆಕ್ ಟೆಕ್ ಬಿಲಿಯನೇರ್ ಮಸ್ಕ್, ಜೆಫ್ರಿ ಎಪ್ ಸ್ಟೀನ್ ಸಹವರ್ತಿಗಳ ರಹಸ್ಯ ಸರ್ಕಾರಿ ಫೈಲ್‌ಗಳಲ್ಲಿ ಟ್ರಂಪ್ ಕಾಣಿಸಿಕೊಂಡಿದ್ದಾರೆ ಎಂದು ಗುರುವಾರ ಆರೋಪಿಸಿದರು.
Advertisement