ಭಾರತಕ್ಕೆ ನಾಲ್ಕನೇ ಪತ್ರ ಬರೆದ ಪಾಕಿಸ್ತಾನ: ಸಿಂಧೂ ಜಲ ಒಪ್ಪಂದ ಮರುಸ್ಥಾಪಿಸಲು ಒತ್ತಾಯ

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ನಂತರ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಲಾಗಿದೆ.
The Indus Waters Treaty was suspended following the April 22 Pahalgam terror attack that resulted in the death of 26 civilians.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ನಂತರ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು.
Updated on

ಸಿಂಧೂ ಜಲ ಒಪ್ಪಂದವನ್ನು (IWT) ತಡೆಹಿಡಿಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನ ಭಾರತಕ್ಕೆ ನಾಲ್ಕನೇ ಬಾರಿ ಪತ್ರ ಬರೆದಿದೆ.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ನಂತರ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಲಾಗಿದೆ. ಪಾಕಿಸ್ತಾನ ತೀವ್ರ ಜಲ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಹತಾಶವಾದಂತೆ ಕಾಣುತ್ತಿದೆ.

ಆಪರೇಷನ್ ಸಿಂದೂರ್ ನಂತರವೂ ಸಿಂಧೂ ಜಲ ಒಪ್ಪಂದ ಕುರಿತು ಪಾಕಿಸ್ತಾನ ಭಾರತಕ್ಕೆ ಪತ್ರ ಬರೆದಿದೆ ಎಂದು ವರದಿಗಳು ತಿಳಿಸಿವೆ. "ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ", "ಭಯೋತ್ಪಾದನೆ ಮತ್ತು ಮಾತುಕತೆಗಳು ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ" ಎಂಬ ಸರ್ಕಾರದ ರಾಜಿಯಾಗದ ನಿಲುವನ್ನು ಪ್ರಧಾನಿ ಮೋದಿ ಈ ಹಿಂದೆ ಪಾಕಿಸ್ತಾನಕ್ಕೆ ಒತ್ತಿ ಹೇಳಿದ್ದರು.

ಸರ್ಕಾರಿ ಮೂಲಗಳ ಪ್ರಕಾರ, ಭಾರತವು ಪ್ರಸ್ತುತ ಈ ವಿಷಯದ ಬಗ್ಗೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಆಸಕ್ತಿ ಹೊಂದಿಲ್ಲ ಮತ್ತು ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಕಳುಹಿಸಿರುವ ನಾಲ್ಕು ಪತ್ರಗಳನ್ನು ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಲಾಗಿದೆ, ಅವುಗಳನ್ನು ವಿದೇಶಾಂಗ ಸಚಿವಾಲಯಕ್ಕೆ (MEA) ರವಾನಿಸಿದೆ ಎಂದು ಮೂಲಗಳು ಸೂಚಿಸಿವೆ. ಪತ್ರಗಳಲ್ಲಿ, ಮುರ್ತಾಜಾ ಒಪ್ಪಂದವನ್ನು ಮರುಸ್ಥಾಪಿಸುವಂತೆ ಭಾರತವನ್ನು ಒತ್ತಾಯಿಸಿದ್ದಾರೆ.

ತನ್ನ ರಾಷ್ಟ್ರೀಯ ಭದ್ರತಾ ಅಧಿಕಾರಗಳನ್ನು ಬಳಸಿಕೊಂಡು, ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ ಬೆಂಬಲಿಸುವುದನ್ನು ನಿಲ್ಲಿಸುವವರೆಗೆ ಒಪ್ಪಂದವನ್ನು ರದ್ದುಗೊಳಿಸಲಾಗುವುದು ಎಂದು ಭಾರತ ಹೇಳಿದೆ.

The Indus Waters Treaty was suspended following the April 22 Pahalgam terror attack that resulted in the death of 26 civilians.
ಭಾರತದ ಏಟಿಗೆ ಬೆದರಿ ತೆಪ್ಪಗಾದ ಪಾಕಿಸ್ತಾನ: ಸಿಂಧೂ ಜಲ ಒಪ್ಪಂದ ನಿರ್ಧಾರ ಮರುಪರಿಶೀಲಿಸುವಂತೆ ದುಂಬಾಲು!

ಈ ನಿರ್ಧಾರವನ್ನು ಕಾರ್ಯತಂತ್ರದ ವಿಷಯಗಳಿಗೆ ಸಂಬಂಧಿಸಿದ ಅತ್ಯುನ್ನತ ಸಂಸ್ಥೆಯಾದ ಭದ್ರತೆಯ ಕುರಿತಾದ ಸಂಪುಟ ಸಮಿತಿ (CCS) ಅನುಮೋದಿಸಿದೆ. ಭಾರತ ವಿಶ್ವಬ್ಯಾಂಕ್ ಬೆಂಬಲಿತ ಒಪ್ಪಂದವನ್ನು ರದ್ದುಗೊಳಿಸಿರುವುದು ಇದೇ ಮೊದಲು,

ಭಾರತವು ಐಡಬ್ಲ್ಯುಟಿಯನ್ನು ಸ್ಥಗಿತಗೊಳಿಸಿದ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗುತ್ತಿರುವ ನೀರಿನ ಬಿಕ್ಕಟ್ಟನ್ನು ಶಮನಗೊಳಿಸುವಂತೆ ಪಾಕಿಸ್ತಾನದ ಹಲವಾರು ಪ್ರಮುಖ ರಾಜಕಾರಣಿಗಳು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.

The Indus Waters Treaty was suspended following the April 22 Pahalgam terror attack that resulted in the death of 26 civilians.
ಚೆನಾಬ್ ನೀರನ್ನು ಬೇರೆಡೆಗೆ ತಿರುಗಿಸಲು ಪೂರ್ವ ಕಾರ್ಯಸಾಧ್ಯತಾ ಅಧ್ಯಯನ: ಸಿಂಧೂ ಜಲ ಒಪ್ಪಂದ ರದ್ದು ಹಿನ್ನೆಲೆಯಲ್ಲಿ ಭಾರತ ಕ್ರಮ

1960 ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವು ಭಾರತ ಮತ್ತು ಪಾಕಿಸ್ತಾನ ಆರು ನದಿಗಳಾದ ಸಿಂಧೂ, ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ ಗಳ ನೀರನ್ನು ಹಂಚಿಕೊಳ್ಳುವುದನ್ನು ನಿಯಂತ್ರಿಸುತ್ತದೆ.

ಪಾಕಿಸ್ತಾನವು ತನ್ನ ಸಹಕಾರದ ಮನೋಭಾವವನ್ನು ನಿರ್ಲಕ್ಷಿಸುವ ಮೂಲಕ, ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಮತ್ತು ಸುರಕ್ಷತೆಗೆ ಅಗತ್ಯವಾದ ನೀರಿನ ಮೂಲಸೌಕರ್ಯಗಳ ನವೀಕರಣವನ್ನು ತಡೆಯುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com