ನ್ಯೂಯಾರ್ಕ್: ಭಾರತೀಯ ಯುವಕನಿಗೆ ಕೈಕೋಳ, ನೆಲಕ್ಕೆ ಬೀಳಿಸಿ ಚಿತ್ರಹಿಂಸೆ; ವಿಡಿಯೋ ವೈರಲ್

ಹರಿಯಾಣದ ಈ ಯುವಕ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದು, ಆತನನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಭಾರತೀಯ ಯುವಕನಿಗೆ ಕೈಕೋಳ, ನೆಲಕ್ಕೆ ಬೀಳಿಸಿ ಚಿತ್ರಹಿಂಸೆ
ಭಾರತೀಯ ಯುವಕನಿಗೆ ಕೈಕೋಳ, ನೆಲಕ್ಕೆ ಬೀಳಿಸಿ ಚಿತ್ರಹಿಂಸೆ
Updated on

ನ್ಯೂಯಾರ್ಕ್: ಅಮೆರಿಕದ ಅಧಿಕಾರಿಗಳು ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಯುವಕನಿಗೆ ಕೈಕೋಳ ಹಾಕಿ ಬಂಧಿಸಿ, ನೆಲಕ್ಕೆ ಬೀಳಿಸಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹರಿಯಾಣದ ಈ ಯುವಕ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದು, ಆತನನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆದ ನಂತರ ವೈರಲ್ ಆಗಿದ್ದು, ಭಾರತೀಯ ವಲಸೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತೀಯ-ಅಮೇರಿಕನ್ ಉದ್ಯಮಿ ಕುನಾಲ್ ಜೈನ್ ಅವರು ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿ, ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ - ಕೈಕೋಳ ಹಾಕಿ, ಅಪರಾಧಿಯಂತೆ ನಡೆಸಿಕೊಳ್ಳುತ್ತಿದ್ದರು. ಆ ಯುವಕ ಅಳುತ್ತಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ.

ಭಾರತೀಯ ಯುವಕನಿಗೆ ಕೈಕೋಳ, ನೆಲಕ್ಕೆ ಬೀಳಿಸಿ ಚಿತ್ರಹಿಂಸೆ
ಅಕ್ರಮ ವಲಸೆಗೆ ನೆರವು: ಭಾರತದ ಟ್ರಾವೆಲ್ ಏಜೆನ್ಸಿಗಳ ವೀಸಾಗೆ ಅಮೆರಿಕ ಹೊಸ ನಿರ್ಬಂಧ!

"ಹರಿಯಾಣಕ್ಕೆ ಸೇರಿದ ಈ ವ್ಯಕ್ತಿ ಅಧಿಕೃತ ವೀಸಾ ಇಲ್ಲದೆ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದಾರೆ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ಭಾರತಕ್ಕೆ ಮರಳಿ ಗಡಿಪಾರು ಮಾಡಲಾಗುತ್ತಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ" ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಹಕ್ಕುಗಳು ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಘಟನೆಯ ಬಗ್ಗೆ ಸಂಪೂರ್ಣ ಸ್ಪಷ್ಟತೆ ಪಡೆಯಲು ಭಾರತೀಯ ಅಧಿಕಾರಿಗಳು ತಮ್ಮ ಅಮೆರಿಕದ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com