ಅಕ್ರಮ ವಲಸೆಗೆ ನೆರವು: ಭಾರತದ ಟ್ರಾವೆಲ್ ಏಜೆನ್ಸಿಗಳ ವೀಸಾಗೆ ಅಮೆರಿಕ ಹೊಸ ನಿರ್ಬಂಧ!

ವೀಸಾ ನಿರ್ಬಂಧಗಳು ನಿರ್ದಿಷ್ಟವಾಗಿ ಟ್ರಾವೆಲ್ ಉದ್ಯಮದ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ದೇಶಕ್ಕೆ ಅಕ್ರಮ ವಲಸೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ಆರೋಪಗಳ ಮೇಲೆ ಭಾರತದ ಟ್ರಾವೆಲ್ ಏಜೆನ್ಸಿಗಳ ಮಾಲೀಕರು, ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸೋಮವಾರ ಹೊಸ ವೀಸಾ ನಿರ್ಬಂಧಗಳನ್ನು ಘೋಷಿಸಿದೆ.

ಇಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, "ಮಾನವ ಕಳ್ಳಸಾಗಣೆ" ಮತ್ತು ಅಕ್ರಮ ವಲಸೆಯಲ್ಲಿ ತೊಡಗಿರುವ ಜಾಲಗಳನ್ನು ಬೇಧಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.

"ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಯಲ್ಲಿ ತೊಡಗಿರುವವರ ಮೇಲೆ ನಿಗಾ ಇಡಲು ಅಮೆರಿಕದ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಗಳು ಕಾರ್ಯನಿರತವಾಗಿವೆ ಎಂದು" ಪ್ರಕಟಣೆ ತಿಳಿಸಿದೆ.

ಸಾಂದರ್ಭಿಕ ಚಿತ್ರ
ಅಮೆರಿಕದ ಪೌರತ್ವಕ್ಕೆ ಹೊಸ ಮಾರ್ಗ: 5 ಮಿಲಿಯನ್ ಡಾಲರ್ ಮೌಲ್ಯದ 'ಗೋಲ್ಡ್ ಕಾರ್ಡ್' ವೀಸಾ ನೀಡಲು ಟ್ರಂಪ್ ಸರ್ಕಾರ ಯೋಜನೆ

ವೀಸಾ ನಿರ್ಬಂಧಗಳು ನಿರ್ದಿಷ್ಟವಾಗಿ ಟ್ರಾವೆಲ್ ಉದ್ಯಮದ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿವೆ. ಅವರು ಕಾನೂನುಬಾಹಿರವಾಗಿ ಅಮೆರಿಕವನ್ನು ಪ್ರವೇಶಿಸಲು ಗ್ರಾಹಕರಿಗೆ ಸಹಾಯ ಮಾಡಿದ್ದಾರೆಂದು ನಂಬಲಾಗಿದೆ. ಅಮೆರಿಕದ ಈ ಕ್ರಮಗಳು ಅಂತರರಾಷ್ಟ್ರೀಯ ಕಳ್ಳಸಾಗಣೆಯನ್ನು ಹತ್ತಿಕ್ಕಲು ಮತ್ತು ಯುಎಸ್ ವಲಸೆ ಕಾನೂನು ಉಲ್ಲಂಘಿಸಿದ ಎಲ್ಲರನ್ನೂ ಹೊಣೆಗಾರರನ್ನಾಗಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

"ನಮ್ಮ ವಲಸೆ ನೀತಿಯು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಅಕ್ರಮ ವಲಸೆಯ ಅಪಾಯಗಳ ಬಗ್ಗೆ ವಿದೇಶಿ ಪ್ರಜೆಗಳಿಗೆ ಮಾಹಿತಿ ನೀಡುವುದು ಮಾತ್ರವಲ್ಲದೆ, ನಮ್ಮ ಕಾನೂನುಗಳನ್ನು ಉಲ್ಲಂಘಿಸುವ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಆದಾಗ್ಯೂ, "ಗೌಪ್ಯತೆಯನ್ನು" ಕಾಪಾಡಿಕೊಳ್ಳಲು ಹೊಸ ನೀತಿಯ ಪ್ರಕಾರ ಎಷ್ಟು ವ್ಯಕ್ತಿಗಳು ಅಥವಾ ಏಜೆನ್ಸಿಗಳನ್ನು ನಿರ್ಬಂಧಿಸಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com