'ನಾನು ಎಲ್ಲವನ್ನೂ ಮಾಡ್ತೀನಿ, ಯಾವುದಕ್ಕೂ ಕ್ರೆಡಿಟ್ ಸಿಗಲ್ಲ, ಆದರೂ ಓಕೆ': ಇರಾನ್-ಇಸ್ರೇಲ್ ನಡುವೆ ಶಾಂತಿ ಒಪ್ಪಂದ ನಡೆಯುತ್ತೆ- ಟ್ರಂಪ್

ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಟ್ರೇಡ್ ಪ್ರಮುಖ ಭಾಗವಾಗಿತ್ತು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿತ್ತು.
Donald Trump-Benjamin Netanyahu-Ali Khamenei
ಡೊನಾಲ್ಡ್ ಟ್ರಂಪ್-ಬೆಂಜಮಿನ್ ನೆತನ್ಯಾಹು-ಅಲಿ ಖಮೇನಿ
Updated on

ವಾಷಿಂಗ್ಟನ್: ಇರಾನ್ ಮತ್ತು ಇಸ್ರೇಲ್ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ತಮ್ಮ ಹಸ್ತಕ್ಷೇಪವು ಅನೇಕ ಸಂಘರ್ಷದ ದೇಶಗಳ ನಡುವೆ ಶಾಂತಿ ನೆಲೆಸಿದೆ ಎಂದು ಟ್ರಂಪ್ ಹೇಳಿದ್ದು ಆದರೆ ಅವುಗಳಿಗೆ ಯಾವುದೇ ಕ್ರೆಡಿಟ್ ಸಿಗಲಿಲ್ಲ. ಆದರೂ ಓಕೆ. ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಕ್ಕೆ ವ್ಯಾಪಾರ ಮತ್ತು ರಾಜತಾಂತ್ರಿಕತೆ ಬಳಸಿದ್ದೆ ಎಂದು ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.

ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಟ್ರೇಡ್ ಪ್ರಮುಖ ಭಾಗವಾಗಿತ್ತು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿತ್ತು. ಎರಡು ಸೇನೆಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ನಡುವಿನ ನೇರ ಮಾತುಕತೆಯ ನಂತರ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಭಾರತ ಹೇಳಿದೆ.

ಸೆರ್ಬಿಯಾ ಮತ್ತು ಕೊಸೊವೊ, ಈಜಿಪ್ಟ್ ಮತ್ತು ಇಥಿಯೋಪಿಯಾದಂತಹ ದೇಶಗಳ ನಡುವಿನ ಶಾಂತಿಯನ್ನು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ತಾವು ಬಹಳಷ್ಟು ಮಾಡುತ್ತೇನೆ ಮತ್ತು ಯಾವುದಕ್ಕೂ ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಇರಾನ್ ಮತ್ತು ಇಸ್ರೇಲ್ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ನಾನು ಭಾರತ ಮತ್ತು ಪಾಕಿಸ್ತಾನದೊಂದಿಗೆ ಮಾಡಿದಂತೆ, ಇಸ್ರೇಲ್ ಮತ್ತು ಇರಾನ್ ಕೂಡ ಆ ಸಂದರ್ಭದಲ್ಲಿ ತರ್ಕ, ಸುಸಂಬದ್ಧತೆ ಮತ್ತು ವಿವೇಕವನ್ನು ಬಳಸಬೇಕು ಎಂದರು.

Donald Trump-Benjamin Netanyahu-Ali Khamenei
ಇಸ್ರೇಲ್-ಇರಾನ್ ಸಂಘರ್ಷ: ಮನೆಯಲ್ಲೇ ಇರಿ... ಟೆಹ್ರಾನ್‌ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ!

ನನ್ನ ಮೊದಲ ಅವಧಿಯಲ್ಲಿ, ಸೆರ್ಬಿಯಾ ಮತ್ತು ಕೊಸೊವೊ ದಶಕಗಳ ನಡುವೆ ಬಹಳ ವರ್ಷಗಳಿಂದ ಸಂಘರ್ಷ ನಡೆಯುತ್ತಿತ್ತು. ಈ ದೀರ್ಘಕಾಲದ ಸಂಘರ್ಷವು ಯುದ್ಧವಾಗಿ ಬದಲಾಗಲು ಸಿದ್ಧವಾಗಿತ್ತು. ನಾನು ಅದನ್ನು ನಿಲ್ಲಿಸಿದೆ. ಮತ್ತೊಂದು ಪ್ರಕರಣವೆಂದರೆ ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆ ಭವ್ಯವಾದ ನೈಲ್ ನದಿಯ ಮೇಲೆ ಬೃಹತ್ ಅಣೆಕಟ್ಟು ಕಟ್ಟುವ ಕುರಿತಂತೆ ಸಂಘರ್ಷ ಶುರುವಾಯಿತು. ನನ್ನ ಹಸ್ತಕ್ಷೇಪದಿಂದಾಗಿ ಇಂದು ಶಾಂತಿ ನೆಲೆಸಿದೆ. ಅದು ಹಾಗೆಯೇ ಉಳಿಯುತ್ತದೆ! ಅದೇ ರೀತಿ, ಇಸ್ರೇಲ್ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಅವರು ಹೇಳಿದರು. ಈ ಸಮಯದಲ್ಲಿ ಅನೇಕ ಕರೆಗಳು ಮತ್ತು ಸಭೆಗಳು ನಡೆಯುತ್ತಿವೆ ಎಂದು ಟ್ವೀಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com