
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ತಮ್ಮ ವಿಲಕ್ಷಣ ಹೇಳಿಕೆಗಳಿಂದ ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಟ್ರೋಲ್ ಆಗಿದ್ದಾರೆ. ಈ ಬಾರಿ ಅವರು "ಐಪಿಎಲ್ ಫ್ಲಡ್‌ಲೈಟ್‌ಗಳನ್ನು ಹ್ಯಾಕಿಂಗ್" ಎಂಬ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ.
ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಮಾತನಾಡಿದ ಆಸಿಫ್, ತಮ್ಮ ದೇಶದ "ಸೈಬರ್ ವಾರಿಯರ್ಸ್" ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ಸಮಯದಲ್ಲಿ ಫ್ಲಡ್‌ಲೈಟ್‌ಗಳನ್ನು ಹ್ಯಾಕ್ ಮಾಡಿ ಭಾರತದ ಕ್ರಿಕೆಟ್ ಕ್ರೀಡಾಂಗಣದಲ್ಲಿ ದೀಪಗಳನ್ನು ಕಡಿತಗೊಳಿಸಿದ್ದರು ಎಂದು ಹೇಳಿದ್ದಾರೆ.
ಮೇ 8 ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಅಲ್ಲಿನ ರಕ್ಷಣಾ ಸಚಿವರು ಉಲ್ಲೇಖಿಸುತ್ತಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ. ಧರ್ಮಶಾಲಾದಲ್ಲಿ ತಾಂತ್ರಿಕ ವೈಫಲ್ಯದಿಂದಾಗಿ ವಿದ್ಯುತ್ ಕಡಿತಗೊಂಡ ನಂತರ ಅರ್ಧದಲ್ಲೇ ಪಂದ್ಯವನ್ನು ರದ್ದುಗೊಳಿಸಲಾಯಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿನ ಭಯೋತ್ಪಾದಕ ದಾಳಿಗಳ ಮೇಲೆ ಗುರಿಯಾಗಿಟ್ಟುಕೊಂಡು ನಡೆಸಿದ ಮಿಲಿಟರಿ ದಾಳಿಯ ಆಪರೇಷನ್ ಸಿಂಧೂರ್ ನ್ನು ಪ್ರಾರಂಭಿಸಿದ ಒಂದು ದಿನದ ನಂತರ ಈ ಘಟನೆ ನಡೆದಿತ್ತು.
"ಇದೆಲ್ಲವೂ ಸಂಪೂರ್ಣವಾಗಿ ಪಾಕಿಸ್ತಾನದ ಸ್ಥಳೀಯ ತಂತ್ರಜ್ಞಾನ ಎಂದು ಭಾರತಕ್ಕೆ ಅರ್ಥವಾಗುತ್ತಿಲ್ಲ. ನಮ್ಮ ಸೈಬರ್ ವಾರಿಯರ್ಸ್ ಭಾರತದ ಮೇಲೆ ದಾಳಿ ನಡೆಸಿದರು, ಭಾರತದ ಕ್ರಿಕೆಟ್ ಕ್ರೀಡಾಂಗಣದಲ್ಲಿ ದೀಪಗಳನ್ನು ಕಡಿತಗೊಳಿಸಿದ್ದರು. ದೀಪಗಳು ಆರಿದವು ಮತ್ತು ಐಪಿಎಲ್ ಪಂದ್ಯವನ್ನು ನಿಲ್ಲಿಸಲಾಯಿತು, ಭಾರತೀಯ ಅಣೆಕಟ್ಟುಗಳಿಂದ ನೀರನ್ನು ಬಿಡುಗಡೆ ಮಾಡಲಾಯಿತು, ಅವರ ವಿದ್ಯುತ್ ಗ್ರಿಡ್ ನ್ನು ಸ್ಥಗಿತಗೊಳಿಸಲಾಯಿತು" ಎಂದು ಆಸಿಫ್ ಹೇಳಿದ್ದಾರೆ.
"ಈ ಎಲ್ಲಾ ದಾಳಿಗಳು, ಸೈಬರ್ ದಾಳಿಗಳು, ನಮ್ಮ ಯೋಧರಿಂದ ನಡೆಸಲ್ಪಟ್ಟವು" ಎಂದು ಆಸೀಫ್ ಹೇಳಿದ್ದಾರೆ. ಆಸಿಫ್ ಅವರ 29 ಸೆಕೆಂಡುಗಳ ಕ್ಲಿಪ್ ಅನ್ನು X ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಳಕೆದಾರರು ಅವರ ವಿಲಕ್ಷಣ ಕಾಮೆಂಟ್‌ಗಳಿಗಾಗಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
"ಪಾಕಿಸ್ತಾನದಲ್ಲಿ ಸೈಬರ್ ವಿಭಿನ್ನ ಪರಿಕಲ್ಪನೆಗಳು ಮತ್ತು ಪಠ್ಯಕ್ರಮಗಳನ್ನು ಹೊಂದಿದೆ ಎಂದು ನನಗೆ ತಿಳಿದೇ ಇರಲಿಲ್ಲ!" ಎಂದು ಒಬ್ಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬರು, "ನಿಮಗೆ ತಿಳಿದಿರಲಿ - ಐಪಿಎಲ್ ಫ್ಲಡ್‌ಲೈಟ್‌ಗಳು ವೈಫೈನಲ್ಲಿ ಕಾರ್ಯನಿರ್ವಹಿಸುವುದಿಲ್ಲ, ಅವು ಸುರಕ್ಷಿತ ವಿದ್ಯುತ್ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತವೆ. ನೀವು ಅವುಗಳನ್ನು ಹೋಮ್ ರೂಟರ್‌ನಂತೆ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಕ್ರೀಡಾಂಗಣದ ದೀಪಗಳನ್ನು ಆಫ್ ಮಾಡಿದ್ದಕ್ಕಾಗಿ "ಸೈಬರ್ ದಾಳಿ" ಎಂದು ಹೇಳಿಕೊಳ್ಳುವುದು ನೀವು ಸ್ಪಷ್ಟವಾಗಿ ನಿಮ್ಮ ಶಾಲಾ ಶಿಕ್ಷಣವನ್ನು ಮದರಸಾದಲ್ಲಿ ಮಾಡಿದ್ದೀರಿ, ವಿಜ್ಞಾನ ತರಗತಿಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಮುಂದಿನ ಬಾರಿ, ಸ್ಕೋರ್‌ಬೋರ್ಡ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸಿ- ಕನಿಷ್ಠ ಅದರಲ್ಲಿ ಬಟನ್ ಗಳಿವೆ" ಎಂದು ಮತ್ತೊಬ್ಬರು ಹಾಸ್ಯ ಮಾಡಿದ್ದಾರೆ.
"ಯುದ್ಧಭೂಮಿಯ ಮೋಡದಿಂದ ಕ್ರೀಡಾಂಗಣದ ದೀಪಗಳವರೆಗೆ ಪಾಕಿಸ್ತಾನದ "ಸೈಬರ್ ಸ್ಟ್ರೈಕ್" ಕಾರ್ಯತಂತ್ರದ ಗೆಲುವಿಗಿಂತ ಹಾಸ್ಯ ಸ್ಕ್ರಿಪ್ಟ್‌ನಂತೆ ಧ್ವನಿಸುತ್ತದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
Advertisement