ಡೊನಾಲ್ಡ್ ಟ್ರಂಪ್ ನಿರ್ಗಮನ: ಪ್ರಮುಖ ವಿಷಯಗಳ ಕುರಿತು ಜಂಟಿ ಒಪ್ಪಂದಕ್ಕೆ ಬರಲು G7 ನಾಯಕರು ವಿಫಲ
ಕನನಸ್ಕಿಸ್ (ಆಲ್ಬರ್ಟಾ): G7 ಶೃಂಗಸಭೆಯಲ್ಲಿ ಏಳು ರಾಷ್ಟ್ರಗಳ ನಾಯಕರ ಗುಂಪಿನಲ್ಲಿ ಆರು ಮಂದಿ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಮತ್ತು ಇಸ್ರೇಲ್-ಇರಾನ್ ಸಂಘರ್ಷದ ಬಗ್ಗೆ ಚರ್ಚಿಸಿದರೂ ಒಪ್ಪಂದಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರಂಭಿಕ ನಿರ್ಗಮನದ ಹೊರತಾಗಿಯೂ ಶ್ರೀಮಂತ ರಾಷ್ಟ್ರಗಳ ಸಮೂಹ ಇನ್ನೂ ಜಾಗತಿಕ ನೀತಿಯನ್ನು ಹೇಗೆ ರೂಪಿಸಬಹುದು ಎಂಬುದನ್ನು ತೋರಿಸಲು ಪ್ರಯತ್ನಿಸಿದರೂ ಒಮ್ಮತ ಬಾರದೆ ಶೃಂಗಸಭೆ ಮುಕ್ತಾಯವಾಯಿತು.
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್‌ನ ಅವರ ಸಹವರ್ತಿಗಳೊಂದಿಗೆ ನಿನ್ನೆಯ ಕೊನೆಯ ಅಧಿವೇಶನಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಸೇರಿಕೊಂಡರು.
"ನಮಗೆ ಮಿತ್ರರಾಷ್ಟ್ರಗಳಿಂದ ಬೆಂಬಲ ಬೇಕು" ಎಂದು ಝೆಲೆನ್ಸ್ಕಿ ಹೇಳಿದರು, "ನಾವು ಶಾಂತಿ ಮಾತುಕತೆಗಳಿಗೆ, ಬೇಷರತ್ತಾದ ಕದನ ವಿರಾಮಕ್ಕೆ ಸಿದ್ಧರಿದ್ದೇವೆ. ಇದಕ್ಕಾಗಿ ಒತ್ತಡ ಹೇರಬೇಕು'' ಎಂದರು.
"ತಾಂತ್ರಿಕ ಕ್ರಾಂತಿಯ" ಸಾಮರ್ಥ್ಯವನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಉದ್ಯೋಗಗಳು ಮತ್ತು ಪರಿಸರದ ಮೇಲೆ ಕೃತಕ ಬುದ್ಧಿಮತ್ತೆಯ ದುಷ್ಪರಿಣಾಮಗಳನ್ನು ಮಿತಿಗೊಳಿಸಲು ಪ್ರತಿಜ್ಞೆ ಮಾಡಿದರು.
ಇತರ ವಿಷಯಗಳ ಬಗ್ಗೆ ಒಮ್ಮತವಿತ್ತು, ಆದರೆ ಶೃಂಗಸಭೆಯು ಪ್ರಮುಖ ಜಾಗತಿಕ ಕಾಳಜಿಗಳ ಕುರಿತು ಏಕತೆಯನ್ನು ತರುವ ಉದ್ದೇಶವನ್ನು ಹೊಂದಿದ್ದರೂ, ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ಯಾವುದೇ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿಲ್ಲ.
ಕೆನಡಾದ ರಾಕಿ ಮೌಂಟೇನ್ ರೆಸಾರ್ಟ್ ಕನನಾಸ್ಕಿಸ್‌ನಲ್ಲಿ ವಿಶ್ವ ನಾಯಕರು ಸೇರಿದ ಸಂದರ್ಭದಲ್ಲಿ ಜೆಲೆನ್ಸ್ಕಿ ಟ್ರಂಪ್ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ರದ್ದುಗೊಳಿಸಲಾಯಿತು. ಉಕ್ರೇನ್‌ನ ವಿಶಾಲ ಖನಿಜ ಸಂಪನ್ಮೂಲಗಳಿಗೆ ಅಮೆರಿಕ ಪ್ರವೇಶವನ್ನು ನೀಡುವ ಒಪ್ಪಂದಕ್ಕೆ ಅಮೆರಿಕ ಈ ಹಿಂದೆ ಸಹಿ ಹಾಕಿತ್ತು.
ರಷ್ಯಾದೊಂದಿಗೆ ಮಾತುಕತೆಗಳನ್ನು ಉತ್ತೇಜಿಸುವ ಪ್ರಯತ್ನಗಳ ನಡುವೆ ಉಕ್ರೇನ್ ಕುರಿತು ಜಂಟಿ ಹೇಳಿಕೆಯನ್ನು ಅಮೆರಿಕ ವಿರೋಧಿಸಿದೆ ಎಂದು ಕೆನಡಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೋಮವಾರ ಶೃಂಗಸಭೆಯ ಮೊದಲ ದಿನದಂದು ಜಂಟಿ ಹೇಳಿಕೆ ಇರುವುದಿಲ್ಲ ಎಂದು ಸ್ಪಷ್ಟವಾಯಿತು.
ಟ್ರಂಪ್ ಅನುಪಸ್ಥಿತಿಯಲ್ಲಿ, ಉಳಿದ ಆರು ನಾಯಕರು ಉಕ್ರೇನ್ ಕುರಿತು ವ್ಯಾಪಕವಾದ ಸಭೆ ಮಾತುಕತೆ ನಡೆಸಿದರು. ಸರ್ವಾನುಮತದ ಕೊರತೆಯಿಂದ, ವೈಯಕ್ತಿಕ ನಾಯಕರು ಸಹ ಜೆಲೆನ್ಸ್ಕಿ ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ