
ಒಟ್ಟಾವಾ: G7 ಶೃಂಗಸಭೆಯಿಂದ ತರಾತುರಿಯಲ್ಲಿ ಹೊರ ಬಂದಿದ್ದಕ್ಕೂ, ಇಸ್ರೇಲ್-ಇರಾನ್ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ 51ನೇ ‘ಜಿ7’ ರಾಷ್ಟ್ರಗಳ ಶೃಂಗಸಭೆಯಿಂದ ಅರ್ಧದಲ್ಲೇ ಹೊರಟ್ಟಿದ್ದರು.
ಇರಾನ್-ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸುವ ಸಲುವಾಗಿ ಟ್ರಂಪ್ ಅವರು ಶೃಂಗಸಭೆಯಿಂದ ಹೊರಟಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು.
ಈ ಕುರಿತು ಸಾಮಾಜಿಕ ಜಾಲತಾಣ ಟ್ರೂತ್ ನಲ್ಲಿ ಬರೆದು ಸ್ಪಷ್ಟನೆ ನೀಡಿರುವ ಅವರು, G7 ಶೃಂಗಸಭೆಯಿಂದ ತರಾತುರಿಯಲ್ಲಿ ಹೊರ ಬಂದಿದ್ದಕ್ಕೂ, ಇಸ್ರೇಲ್-ಇರಾನ್ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ. ಫ್ರಾನ್ಸ್ ಅಧ್ಯಕ್ಷರು ನನ್ನ ನಿರ್ಗಮನವನ್ನು ತಪ್ಪಾಗಿ ವಿವರಿಸಿದ್ದಾರೆಂದು ಹೇಳಿದ್ದಾರೆ.
ಪ್ರಚಾರ ಬಯಸುತ್ತಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು, ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯನ್ನು ತೊರೆದಿದ್ದು ಇಸ್ರೇಲ್ ಮತ್ತು ಇರಾನ್ ನಡುವಿನ 'ಕದನ ವಿರಾಮ ವಿಚಾರವಾಗಿ ಎಂದು ತಪ್ಪಾಗಿ ತಿಳಿದಿದ್ದಾರೆ. ಆದರೆ, ಅದು ತಪ್ಪು, ವಾಷಿಂಗ್ಟನ್‌ಗೆ ಏಕೆ ಹೋಗುತ್ತಿದ್ದೇನೆಂಬುದು ಅವರಿಗೆ ತಿಳಿದಿಲ್ಲ, ನನ್ನ ಹಿಂತಿರುಗುವಿಕೆಗೂ ಕದನ ವಿರಾಮ ವಿಚಾರಕ್ಕೂ ಖಂಡಿತವಾಗಿಯೂ ಯಾವುದೇ ಸಂಬಂಧವಿಲ್ಲ. ಅದಕ್ಕಿಂತ ದೊಡ್ಡದು ವಿಚಾರವಿದೆ. ಎಮ್ಯಾನುಯೆಲ್ ಮ್ಯಾಕ್ರನ್ ಯಾವಾಗಲೂ ತಪ್ಪಾಗಿ ಭಾವಿಸುತ್ತಾರೆಂದು ತಿಳಿಸಿದ್ದಾರೆ.
Advertisement